ವೀರಾಜಪೇಟೆ, ಜ. 2: ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರದಲ್ಲಿ ಜಾತ್ಯತೀತತೆ ಇಲ್ಲದಿದ್ದರೆ ಪ್ರಜಾಪ್ರುಭುತ್ವ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಜಾತ್ಯತೀತತೆ ಪ್ರಜಾಪ್ರಭುತ್ವದ ತಳಹದಿಯ ಪ್ರಬಲ ಅಸ್ತ್ರ ಎಂದು ಜನತಾದಳದ ಜಿಲ್ಲಾ ಸಮಿತಿಯ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.ವೀರಾಜಪೇಟೆಯ ಗಾಂಧಿನಗರದ ಸರ್ವ ಜನಾಂಗ ಸಂಘಟನೆಯ ಪ್ರಥಮ ವಾರ್ಷಿಕೋತ್ಸ ವದಲ್ಲಿ ಮುಖ್ಯ ಅತಿಥಿಯಾಗಿ ಅವರು ಪಾಲ್ಗೊಂಡು ಮಾತನಾಡಿದರು. ಧರ್ಮ, ಜಾತಿಜನಾಂಗದ ಆಧಾರದ ಮೇಲೆ ಜನ ಪ್ರತಿನಿಧಿಗಳನ್ನು ಚುನಾಯಿಸುವ ದರಿಂದ ಪ್ರಜಾಪ್ರಭುತ್ವದ ಮೂಲ ತತ್ವಕ್ಕೆ ಕೊಡಲಿ ಪೆಟ್ಟು ಬಿದ್ದಾಂತಾಗುತ್ತದೆ. ಆಫ್ರಿಕಾ ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಇದ್ದರೂ ಜನಾಂಗದ ಪ್ರಭಾವದಿಂದ ಬುಡಕಟ್ಟು ಜನಾಂಗದ ಪ್ರತಿನಿಧಿಗಳು ನಿರಂತರವಾಗಿ ಆಯ್ಕೆಯಾಗುತ್ತಿದ್ದು ಜನಾಂಗದ ಪರ ಏಕಪಕ್ಷೀಯವಾಗಿ ಆಡಳಿತ, ದೇಶದ ಪ್ರಗತಿ ಅಭಿವೃದ್ಧಿ ಶೂನ್ಯವಾಗಿದೆ ಎಂದರು.
ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶ ಶಾಂತ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ ಸರ್ವ ಧರ್ಮ ಸಂಘಟನೆ ಇಂದು ಸಮಾಜಕ್ಕೆ ಅಗತ್ಯವಾಗಿದ್ದು ಇದರಿಂದ ದೇಶದ ಮೂಲೆ ಮೂಲೆಗಳಲ್ಲೂ ಶಾಂತಿ ನೆಲಸುವಂತಾಗಬೇಕು. ದೇಶದ ಯುವ ಶಕ್ತಿ ಸಂಘಟನೆ ಗಳಿಂದ ಇದಕ್ಕಾಗಿ ಸರ್ವ ಜನಾಂಗ ಸಂಘಟನೆಗಳ ಮೂಲಕ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ವೀರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ರೆ:ಫಾ: ಮದುಲೈಮುತ್ತು ಮಾತನಾಡಿ ಸರ್ವ ಜನಾಂಗದಲ್ಲಿ ಯಾವದೇ ಆಂತರಿಕ ಸಮಸ್ಯೆಗಳು ಎದುರಾದಲ್ಲಿ ಇಂತಹ ಸಂಘಟನೆಗಳು ಮುಕ್ತವಾಗಿ ಬಗೆ ಹರಿಸಿ ಸಮಾಜದಲ್ಲಿ ಶಾಂತಿ ನೆಮ್ಮದಿಗೆ ಅವಕಾಶ ಕಲ್ಪಿಸಿ ಕೊಡಬೇಕು. ಸಂಘಟನೆ ಸರ್ವ ಜನಾಂಗಕ್ಕೂ ಮುಕ್ತವಾಗಿ ಸಮಾಜ ಸೇವೆ ಸಲ್ಲಿಸುವಂತಾಗಲಿ ಎಂದು ಹೇಳಿದರು.
ನೆಲ್ಲಿಹುದಿಕೇರಿಯ ದಾರುಸ್ಸಲಾಂ ಮದರಸದ ಮುಖ್ಯೋಪಾಧ್ಯಾಯ ಎಂ ತಮ್ಲೀಖ್ ಧಾರಿಮಿ ಮಾತನಾಡಿ ಜನಾಂಗಗಳ ನಡವೆ ಪರಸ್ಪರ ಸಹಕಾರ ಸಾಮರಸ್ಯದ ಬೆಸುಗೆ ಇದ್ದರೆ ಶಾಂತಿಯ ಸುಧಾರಣೆಯ ಸಮಾಜ ವನ್ನು ಕಾಣಬಹುದಾಗಿದೆ ಎಂದು ಹೇಳಿದರು.
ಸಮಾರಂಭವನ್ನುದ್ದೇಶಿಸಿ ಕಾಂಗ್ರೆಸ್ ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ಬಿದ್ದಾಟಂಡ ಟಿ ಪ್ರದೀಪ್, ಮಾಳೇಟಿರ ಕಾಶಿ ಕುಂಞಪ್ಪ, ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಮಾತನಾಡಿದರು.
ಅತಿಥಿಗಳಾಗಿ ಉದ್ಯಮಿ ಚೋಪಿ ಜೋಸೆಫ್, ಅಪ್ಪನೆರವಂಡ ಜಾನ್ಸಿಕಿರಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ಡಿ.ಎಚ್. ಸೂಫಿ ಎಸ್.ಎಚ್. ಮಂಜುನಾಥ್, ಎಂ.ಎಲ್. ಸೈನುದ್ದೀನ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಶೀಬಾ ಪೃಥ್ವಿನಾಥ್, ನಾಗಮ್ಮ ಉಪಸ್ಥಿತರಿದ್ದರು. ಸಂಘಟನೆಯ ಅಧ್ಯಕ್ಷ ಪಿ.ಎ. ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ಸಮಾಜ ಸೇವಕರು ಹಾಗೂ ಹೋರಾಟಗಾರÀ ಮೇರಿಯಂಡ ಸಂಕೇತ್ ಪೂವಯ್ಯ, ಪಟ್ಟಣದಲ್ಲಿ ಸ್ವಚ್ಚತೆಗೆ ಆಧ್ಯತೆ ನೀಡಿ ರುವ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಇಲ್ಲಿನ ಸರ್ಕಾರಿ ಆಸ್ಪತ್ರೆಯ ಶುಶ್ರೂಷಕಿ ಹಾಗೂ ಅಂತರಾಷ್ಟ್ರೀಯ ಅಥ್ಲೆಟಿಕ್ ಎ.ಬಿ. ಲಲಿತ, ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯದಲ್ಲಿ 5ನೇ ಸ್ಥಾನ ಪಡೆದ ಟಿ.ಪಿ. ನಿಹಾರಿಕ, ಪಿ.ಯು.ಸಿ.ಯಲ್ಲಿ ಅಧಿಕ ಅಂಕ ಗಳಿಸಿದ ಅಂಕಿತ ಲೋಬೋ ಹಾಗೂ ಎಂ.ಆಶೀನ ಇವರುಗಳನ್ನು ಸನ್ಮಾನಿಸಲಾಯಿತು.
ಇಲ್ಲಿನ ತಾಲೂಕು ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಎಂ.ಎಂ. ಶಶಿಧರನ್ ಅವರು ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ನಂತರ ಸಂಘಟನೆ ವತಿಯಿಂದ ಅನ್ನ ಸಂತರ್ಪಣೆ ಹಾಗೂ ಸಿಡಿ ಮದ್ದಿನ ಪ್ರದರ್ಶನ ಏರ್ಪಡಿಸಲಾಗಿತ್ತು. ರಾತ್ರಿ 10ಗಂಟೆಗೆ ಕೇರಳದ ಕಣ್ಣಾನೂರಿನ “ಅಮ್ಮ” ತಂಡದವರಿಂದ ಸಂಗೀತ ರಸ ಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.