ಮಡಿಕೇರಿ, ಸೆ. 26: ಯಾವೇ ಜಾತಿ- ಜನಾಂಗವಿರಲಿ ಅದರ ಮೇಲೆ ಅಭಿಮಾನ ಇರಬೇಕೇ ವಿನಃ ದುರಭಿಮಾನ ಇರಬಾರದೆಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಮೇಲಿನ ಗೌಡ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಕೈಲ್ ಮುಹೂರ್ತ ಸಂತೋಷ ಕೂಟದ ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಮ್ಮ ಜಾತಿ, ಜನಾಂಗದ ಬಗ್ಗೆ ಹಿಂಜರಿಕೆ, ಕೀಳರಿಮೆ ಬೇಡ, ಅಭಿಮಾನವಿರಬೇಕೆಂದು ಹೇಳಿದರು. ನಮ್ಮ ಆಚಾರ - ವಿಚಾರಗಳನ್ನು ಬಿಟ್ಟುಕೊಡಬಾರದು, ಸಮಾಜಕ್ಕೆ ಉತ್ತಮ ಸಂದೇಶ ನೀಡುವದರೊಂದಿಗೆ ಇತರರು ನಮ್ಮನ್ನು ಅನುಕರಣೆ ಮಾಡುವ ರೀತಿಯಲ್ಲಿ ಆಗಬೇಕು. ಅವಕಾಶ ವಂಚಿತರಾಗಿರುವವರಿಗೆ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಯುವ ವೇದಿಕೆ ಪ್ರತಿ ವರ್ಷ ಉತ್ತಮ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವದರೊಂದಿಗೆ ಜನಾಂಗವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಡಿಸಿಸಿ ಬ್ಯಾಂಕ್‍ನ ನಿರ್ದೇಶಕ ಹೊಸೂರು ಸತೀಶ್‍ಕುಮಾರ್ ಮಾತನಾಡಿ, ನಮ್ಮ ಸಂಸ್ಕøತಿ, ಆಚಾರ - ವಿಚಾರ ವಿಶಿಷ್ಟವಾದುದು.
ಪೂರ್ವಿಕರ ಕಲ್ಪನೆಯ ಆಚರಣೆಗಳ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಕಾರ್ಯವನ್ನು ವೇದಿಕೆ ಮಾಡುತ್ತಿದೆ ಎಂದರು. ಕಷ್ಟ- ಸಮಸ್ಯೆಗಳಿದ್ದಾಗ ಸ್ಪೂರ್ತಿ ತುಂಬುವ ಕೆಲಸ ಮಾಡುವಂತಾಗಬೇಕು. ಸಮಾಜದಲ್ಲಿ ಬದಲಾವಣೆ ತರುವ ಕಾರ್ಯವನ್ನು ಮಾಡಬೇಕು. ಪ್ರಸ್ತುತ ನಿರೀಕ್ಷೆ ಮಾಡದಂತಹ ಘಟನೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಯುವ ಪೀಳಿಗೆ ಮಾಡಬೇಕಿದೆ ಎಂದು ಹೇಳಿದರು.
ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾಮೋಹನ್ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ ಎಂಬದನ್ನು ಯುವಕರು ಮಾಡಿ ತೋರಿಸಬೇಕು. ಯುವ ಜನಾಂಗ ದೇಶದ ಆಸ್ತಿ, ಉತ್ತಮ ಸಂದೇಶ ನೀಡಬೇಕು, ನಮ್ಮ ಸಂಸ್ಕøತಿಯನ್ನು ಇತರರಿಗೆ ಹೇಳಿಕೊಡಬೇಕು, ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸ್ಪೂರ್ತಿದಾಯಕರಾಗಬೇಕೆಂದು ಹೇಳಿದರು.
ಸಾಂದೀಪನಿ ಶಾಲೆಯ ಅಧ್ಯಕ್ಷ ಮೂಡಗದ್ದೆ ದಾಮೋದರ ಅವರು ಮಾತನಾಡಿ, ಕಷ್ಟ ಪಟ್ಟು ಮಾಡುವಂತಹ ಇಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕರಿಸಬೇಕು. ಯುವ ವೇದಿಕೆ ಉತ್ತಮ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ವೇದಿಕೆಗೆ ಸ್ವಂತ ಕಟ್ಟಡ ಇದ್ದರೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸಹಕಾರ ನೀಡಲಾಗುವದು. ಎಲ್ಲರೂ ಕೂಡ ಸಹಕಾರ ನೀಡುವಂತೆ ಕೋರಿದರು. ಒಗ್ಗಟ್ಟಿನೊಂದಿಗೆ ನಮ್ಮತನವನ್ನು ಬಿಂಬಿಸಬೇಕೆಂದರು.
ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಮಾತನಾಡಿ, ಯುವ ವೇದಿಕೆ ಹಾಗೂ ಅರೆಭಾಷೆ ಅಕಾಡೆಮಿ ಜನಾಂಗದವರಿಗಾಗಿ ಹಲವಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಇಂತಹ ಕಾರ್ಯಕ್ರಮಗಳಿಂದ ಎಲ್ಲರೂ ಒಂದುಗೂಡಲು ಸಾಧ್ಯವಾಗುತ್ತದೆ. ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ದೊರಕುತ್ತದೆ. ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಸಲಹೆ ಮಾಡಿದರು.
ಕೊಡಗು ಗೌಡ ಸಮಾಜದ ಉಪಾಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಸಂಘಟನೆಗಳ ಚಟುವಟಿಕೆಗಳು ಕ್ರೀಡಾಕೂಟಗಳಿಗೆ ಸೀಮಿತವಾಗಿರಬಾರದು, ಅದನ್ನು ಮೀರಿ ಹೋಗಬೇಕು, ನಡೆ, ನುಡಿ, ಆಚಾರ - ವಿಚಾರಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕೆಂದು ಸಲಹೆಯಿತ್ತರು.
ಗೌಡ ಸಮಾಜದ ಕಾರ್ಯದರ್ಶಿ ಕೋಡಿ ಚಂದ್ರಶೇಖರ್ ಮಾತನಾಡಿ, ಯುವ ವೇದಿಕೆ ಯಶಸ್ವಿಯಾಗಿ ಕಾರ್ಯಚಟುವಟಿಕೆ ಹಮ್ಮಿಕೊಳ್ಳುತ್ತಿದ್ದು, ಗೌಡ ಸಮಾಜದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವದಾಗಿ ಹೇಳಿದರು. ಯುವ ಪೀಳಿಗೆಯಲ್ಲಿ ಶಿಸ್ತನ್ನು ಮೂಡಿಸುವ ಪ್ರಯತ್ನವಾಗಬೇಕು ಎಂದರು. ಅರೆಭಾಷೆ ಅಕಾಡೆಮಿ ಉತ್ತಮ ಕಾರ್ಯ ಮಾಡುತ್ತಿರುವದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಮಾತನಾಡಿ, ವಿಶಿಷ್ಟ ಮತ್ತು ವಿಭಿನ್ನ ಸಂಸ್ಕøತಿ ಹೊಂದಿರುವ ಸಾಂಪ್ರದಾಯಿಕ ಹಬ್ಬವಾದ ಕೈಲ್ ಮುಹೂರ್ತ ಸಂತೋಷ ಕೂಟವನ್ನು ಕಳೆದ ನಾಲ್ಕು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಸಮಾಜದಲ್ಲಿ ಒಗ್ಗಟ್ಟು ಮೂಡಿಸುವ ಹಾಗೂ ಸಂಸ್ಕøತಿಯನ್ನು ಬಿಂಬಿಸುವ ಉದ್ದೇಶದೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಉದ್ಘಾಟನೆ
ಅತ್ಯಂತ ಪುರಾತನ ಮತ್ತು ವಿಶಿಷ್ಟವಾದ ಗೌಡ ಸಂಸ್ಕøತಿ, ಪರಂಪರೆಗಳನ್ನು ಯುವ ಸಮೂಹಕ್ಕೆ ಪರಿಚಯಿಸಿ ಸಂರಕ್ಷಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ತಿಳಿಸಿದ್ದಾರೆ.
ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಗರದ ಮೇಲಿನ ಗೌಡ ಸಮಾಜದಲ್ಲಿ ನಡೆದ ‘ಕೈಲ್ ಮೂರ್ತ ಸಂತೋಷ ಕೂಟ’ ವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಸ್ಕøತಿ ಪರಂಪರೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವ ಗೌಡ ಯುವ ವೇದಿಕೆಯ ಪ್ರಯತ್ನ ಶ್ಲಾಘನೀಯವೆಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವೀರಾಜಪೇಟೆ ಗೌಡ ಸಮಾಜದ ಅಧ್ಯಕ್ಷ ಮೂಡಗದ್ದೆ ರಾಮಕೃಷ್ಣ ಮಾತನಾಡಿ, ಚದುರಿ ಹೋಗಿರುವ ಗೌಡ ಸಮೂಹವನ್ನು ಒಂದೆಡೆ ಕಲೆ ಹಾಕಿ, ಸಂಘಟನಾ ಮನೋಭಾವನೆ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಉಪಯುಕ್ತವಾಗಿದೆ. ಹಿಂದೆ ಕೃಷಿ ಕಾರ್ಯಗಳಲ್ಲಿ ಪರಸ್ಪರ ಸಹಕರಿಸುವ ಕಾರ್ಯಗಳು ವ್ಯಾಪಕವಾಗಿ ನಡೆಯುತ್ತಿತ್ತಾದರೆ, ಇಂದು ಅದು ಕ್ಷೀಣಿಸುವದರೊಂದಿಗೆ ನಮ್ಮಲ್ಲಿ ಒಗ್ಗಟ್ಟಿನ ಕೊರತೆಯನ್ನು ಕಾಣುತ್ತಿದ್ದೇವೆಂದು ಬೇಸರ ವ್ಯಕ್ತಪಡಿಸಿದರು. ಗೌಡ ಸಮೂಹ ಬಾಂಧವರು ಸಂಘÀಟನಾ ಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಗೌಡ ಯುವ ಸಮೂಹದಲ್ಲಿ ಸಾಕಷ್ಟು ಪ್ರತಿಭೆ ಇದ್ದರೂ ಅದನ್ನು ಪ್ರದರ್ಶಿಸುತ್ತಿಲ್ಲ. ಇಂತಹ ಕಾರ್ಯಕ್ರಮಗಳ ಮೂಲಕ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರುವ ಕಾರ್ಯವಾಗಬೇಕೆಂದರು. ಗೌಡ ಸಮೂಹ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಮೂಲಕ ತನ್ನ ಛಾಪನ್ನು ಮೂಡಿಸಬೇಕೆಂದು ರಾಮಕೃಷ್ಣ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಮಾತನಾಡಿ, ಇಂತಹ ಕಾರ್ಯಕ್ರಮಗಳು ಸಮೂಹ ಬಾಂಧವರು ಒಂದೆಡೆ ಸೇರಲು ಮತ್ತು ನಮ್ಮ ಸಂಸ್ಕøತಿ ಆಚಾರ, ವಿಚಾರಗಳನ್ನು ಸಂರಕ್ಷಿಸಿಕೊಳ್ಳಲು ಪೂರಕವಾಗಿದೆಯೆಂದು ತಿಳಿಸಿದರು.
ನಂಜರಾಯಪಟ್ಟಣ ಗೌಡ ಯೂತ್ ಕ್ಲಬ್ ಅಧ್ಯಕ್ಷ ನಡುಮನೆ ಪವನ್, ಕುಶಾಲನಗರ ಗೌಡ ಯೂತ್ ಸಂಘದ ಅಧ್ಯಕ್ಷ ಪಂಜಿಪಳ್ಳ ಯತೀಶ್, ಮಡಿಕೇರಿ ಕೊಡಗು ಗೌಡ ಯುವ ವೇದಿಕೆ ಕ್ರೀಡಾ ಉಪಾಧ್ಯಕ್ಷ ಬಾಳಾಡಿ ಮನೋಜ್, ಯುವ ವೇದಿಕೆಯ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ್, ವೇದಿಕೆ ನಿರ್ದೇಶಕ ಕುಡೆಕಲ್ ಸಂತೋಷ್, ಕಾರ್ಯದರ್ಶಿ ಕಟ್ಟೆಮನೆ ರೋಷನ್ ಉಪಸ್ಥಿತರಿದ್ದರು.
ಮಂಜು ಮುಸುಕಿದ ಹನಿಮಳೆಯ ವಾತಾವರಣದ ನಡುವೆ ನಡೆದ ವಿವಿಧ ಆಟೋಟ ಸ್ಪರ್ಧೆಗಳು ಗಮನ ಸೆಳೆದವು. ಪುಟಾಣಿ ಮಕ್ಕಳ ಕಾಳು ಹೆಕ್ಕುವ ಸ್ಪರ್ಧೆಯೊಂದಿಗೆ ಕ್ರೀಡಾ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಬಳಿಕ ಓಟದ ಸ್ಪರ್ಧೆ, ಭಾರದ ಗುಂಡು ಎಸೆತ, ಮನೋರಂಜನಾ ಕ್ರೀಡೆಗಳು ನಡೆದವು.
ಜನಾಂಗದ ಬಾಂಧವರಿಗಾಗಿ ಏರ್ಪಡಿಸಲಾಗಿದ್ದ ಮನರಂಜನಾ ಗ್ರಾಮೀಣ ಕ್ರೀಡೆಗಳು ಗಮನ ಸೆಳೆದವು. ಸಾಂಸ್ಕøತಿಕ ಸ್ಪರ್ಧೆಗಳು ಮನಸೂರೆಗೊಂಡವು. ಸಾಂಸ್ಕøತಿಕ ಸ್ಪರ್ಧೆಯ ತೀರ್ಪುಗಾರರಾಗಿ ಬೈತಡ್ಕ ಜಾನಕಿ ಬೆಳ್ಯಪ್ಪ, ಉಳುವಾರನ ಕೃಪಾ ನವೀನ್, ಕಡ್ಲೇರ ತುಳಸಿ ಮೋಹನ್ ಕಾರ್ಯನಿರ್ವಹಿಸಿದರು.
ಇದೇ ಸಂದರ್ಭ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಟ್ಟೆಮನೆ ಸೋನಾಜಿತ್, ಪೋತಂಡ್ರ ತೇಜ ಪ್ರಸಾದ್, ಕುಡೆಕಲ್ ಸಂತೋಷ್, ಪುದಿಯನೆರವನ ರಿಶಿತ್ ಮಾದಯ್ಯ, ಕೋಚನ ಡೀನಾ ಅನೂಪ್, ಪೂಜಾರಿರ ಕೃಪಾ ದೇವರಾಜ್, ಪರಿಚನ ಸೀಮಾ ಸತೀಶ್, ಕುಡೆಕಲ್ ಸವಿತಾ ಸಂತೋಷ್, ಕಡ್ಲೇರ ಅಂಕಿತಾ ಪ್ರಭು ವೇದಿಕೆ, ಸಭಾ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಯುವ ವೇದಿಕೆ ನಿರ್ದೇಶಕರುಗಳು, ಸದಸ್ಯರುಗಳು, ವಿವಿಧ ಉಪಸಮಿತಿ ಪದಾಧಿಕಾರಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.