ತಮಿಳುನಾಡು ಸರ್ಕಾರದ ಒತ್ತಡಕ್ಕೆ ಮಣಿದಿರುವ ಪ್ರಧಾನಿಗಳು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಎಂದು ಮಲತಾಯಿ ಧೋರಣೆ ತಳೆದಿದ್ದಾರೆ ಎಂದು ಆರೋಪಿಸಿದರು. ಕಂಬಳವೆನ್ನುವದು ಇಲ್ಲಿನ ಜನರ ಸಾಂಪ್ರದಾಯಿಕ ಕ್ರೀಡೆಯಾಗಿದ್ದು ಯಾವದೇ ಹಿಂಸೆಯಿಲ್ಲ. ಈ ಕ್ರೀಡೆಗಾಗಿಯೇ ಪಶುಗಳನ್ನು ಚೆನ್ನಾಗಿ ಸಾಕಿ ಬೆಳೆಸಿರುತ್ತಾರೆ. ಇದಕ್ಕಾಗಿ ಲಕ್ಷಾಂತರ ರೂ. ವ್ಯಯ ಮಾಡಿರುತ್ತಾರೆ ಎಂದು ಅಭಿಪ್ರಾಯಪಟ್ಟ ಅವರು, ಈ ಬಗ್ಗೆ ನಮ್ಮ ಇಲಾಖೆ ಯಿಂದ ಸಕಾರಾತ್ಮಕ ವರದಿಯನ್ನು ನ್ಯಾಯಾಲ ಯಕ್ಕೆ ನೀಡಿದೆ. ಇದನ್ನು ನ್ಯಾಯಾಲಯ ಹಾಗೂ ಕೇಂದ್ರ ಸರ್ಕಾರ ಪರಿಗಣಿ ಸಬೇಕೆಂದು ಮನವಿ ಮಾಡಿದರು.
ಜೂಜಿನ ಕ್ರೀಡೆಯಾದ ಕುದುರೆ ರೇಸ್‍ಗೆ ಅವಕಾಶವಿದೆ. ಆದರೆ ಸಾಂಪ್ರದಾಯಿಕ ಕಂಬಳಕ್ಕೆ ಅವಕಾಶ ನೀಡದಿರುವದು ವಿಷಾದÀನೀಯ ಎಂದರು.
ಕಾವೇರಿ ಜಲವಿವಾದ ಸೇರಿದಂತೆ ಕರ್ನಾಟಕದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರಧಾನಿಗಳು ರಾಜ್ಯವನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ ಸಚಿವರು, ಕಾವೇರಿ ವಿಚಾರ ಬಂದಾಗ ಬಿಜೆಪಿಯಿಂದ ಆರಿಸಿಹೋಗಿರುವ ಸಂಸದರು ಯಾವದೇ ಚಕಾರ ಎತ್ತುವದಿಲ್ಲ. ಪ್ರಧಾನಿ ಮೋದಿಯವರ ಕೆಂಗಣ್ಣಿಗೆ ಗುರಿಯಾಗುತ್ತೇವೆಂಬ ಕಾರಣ ದಿಂದಾಗಿ ರಾಜ್ಯದ ಹಿತಾಸಕ್ತಿಯನ್ನು ಸಂಸದರುಗಳು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು.
ಮೀಸಲಾತಿ ಬೇಕು: ದೇಶದಲ್ಲಿರುವ ಮೀಸಲಾತಿಯ ಬಗ್ಗೆ ಆರ್.ಎಸ್.ಎಸ್. ಪ್ರಮುಖರು ಅಪಸ್ವರ ವ್ಯಕ್ತಪಡಿಸಿರುವದು ಸರಿಯಲ್ಲ. ಎಲ್ಲಾ ಜಾತಿ ಜನಾಂಗದಲ್ಲೂ ಬಡವರಿದ್ದಾರೆ. ಅವರಿಗೆ ಸೌಲಭ್ಯಗಳು ದೊರಕಬೇಕು. ಆದ್ದರಿಂದ ಮೀಸಲಾತಿ ಇರಲೇಬೇಕು ಎಂದು ಎ. ಮಂಜು ಅಭಿಪ್ರಾಯಪಟ್ಟರು. ದೇಶಾದ್ಯಂತ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗು ಶೈಕ್ಷಣಿಕವಾಗಿ ಹಿಂದುಳಿದಿರುವ ದಲಿತರು, ಹಿಂದುಳಿದ ವರ್ಗಗಳಿಗೆ ಇದರಿಂದ ಅನ್ಯಾಯವಾಗುತ್ತದೆ. ಇದರ ಬದಲು ಎಲ್ಲಾ ಜನಾಂಗದ ಬಡವರಿಗೂ ಮೀಸಲಾತಿ ಮುಂದುವರೆಯಬೇಕು ಎಂದು ಸಚಿವ ಮಂಜು ಹೇಳಿದರು.