ಮಡಿಕೇರಿ, ಜ. 5: ಜರ್ಮನಿ ನಿವಾಸಿ, ಯುವಕನೋರ್ವ ಇಂದು ಮಡಿಕೇರಿ ನಗರದಲ್ಲಿ ತಮಿಳುನಾಡು ನೋಂದಾವಣೆಯ ಆಟೋ ರಿಕ್ಷಾ ಓಡಿಸುತ್ತಿದ್ದರು.ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಕುತೂಹಲಕಾರಿ ಅಂಶ ಕೇಳಿ ಬಂದಿತು. ಕ್ರಿಸ್ ಹೆಸರಿನ ಈ ಯುವಕನಿಗೆ ಟ್ರೆಕ್ಕಿಂಗ್ ಹವ್ಯಾಸ, ಕಳೆದ ಮೂರು ವಾರಗಳ ಹಿಂದೆ ಕೇರಳಕ್ಕೆ ತನ್ನ ಸ್ನೇಹಿನ ರಿಮಾನ್ ಎಂಬಾತನೊಂದಿಗೆ ಬಂದಿಳಿದ ಈತ ಅಲ್ಲಿನ ಟ್ರೆಕ್ಕಿಂಗ್
(ಮೊದಲ ಪುಟದಿಂದ) ಸ್ಥಳಗಳಿಗೆ ಭೇಟಿ ನೀಡಿ ಇಬ್ಬರೂ ತಮಿಳುನಾಡಿಗೆ ತೆರಳಿದರು. ಅಲ್ಲಿಯೂ ಓಡಾಟದ ಬಳಿಕ ಸ್ನೇಹಿತ ರಿಮಾನ್ ಜರ್ಮನಿಗೆ ಅನಿವಾರ್ಯ ಕಾರಣಕ್ಕಾಗಿ ವಾಪಸ್ ತೆರಳಿದರು. ಇದರಿಂದ ಕ್ರಿಸ್ಗೆ ಬೋರ್ ಆಯಿತು. ತಮಿಳುನಾಡುವಿನ ಆಟೋ ಮಾಲೀಕರೊಬ್ಬರಿಂದ ಆಟೋ ರಿಕ್ಷಾ ಖರೀದಿಸಿದರು. ೀದಾ ಮಡಿಕೇರಿಗೆ ಆಟೋದಲ್ಲೇ ಪ್ರಯಾಣಿಸಿ ಇಂದು ತಲಪಿದರು. ಇದೀಗ ಕೊಡಗಿನಲ್ಲಿ ಮೂರ್ನಾಲ್ಕು ದಿನ ಇರುವ ಬಯಕೆ ಅವರದು. ತಡಿಯಂಡಮೋಳ್ ಮತ್ತಿತರ ಕಡೆ ಟ್ರೆಕ್ಕಿಂಗ್ ತೆರಳುವ ಆಸಕ್ತಿ ವ್ಯಕ್ತಪಡಿಸಿದರು.
ಇಲ್ಲಿಂದ ಮುಂದೆ ಎಲ್ಲಿಗೆ ತೆರಳಬೇಕು ಎನ್ನುವ ಗುರಿಯಿಲ್ಲ ಎಂದ ಅವರು ಭಾರತದಲ್ಲಿ ಇನ್ನೆಂದೆರಡು ವಾರ ಇದ್ದು, ಈ ಆಟೋ ರಿಕ್ಷಾವನ್ನು ಭಾರತದಲ್ಲಿ ಮಾರಾಟ ಮಾಡಿ ಬಳಿಕ ಜರ್ಮನಿಗೆ ಹಿಂತೆರಳುವದಾಗಿ ತಿಳಿಸಿದರು. ತಾನು ಈ ಹಿಂದೆ ಶ್ರೀಲಂಕಾಕ್ಕೆ ತೆರಳಿದ್ದಾಗಲೂ ಇದೇ ರೀತಿ ಅಲ್ಲಿ ಆಟೋ ಚಾಲಿಸಿದ್ದುದಾಗಿ ನೆನಪಿಸಿಕೊಂಡರು. (ವರದಿ : ಸುಬ್ಬಯ್ಯ)