ಸುಂಟಿಕೊಪ್ಪ, ಡಿ.24: ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಕ್ರಿಸ್‍ಮಸ್ ಹಬ್ಬದ ಹಿನೆÀ್ನಲೆ ಭಾರೀ ಗಾತ್ರದ ನಕ್ಷತ್ರಗಳನ್ನು ಕಲಾ ಪ್ರತಿಭೆಗಳು ರಚಿಸುವ ಮೂಲಕ ದೇವಾಲಯದ ಆವರಣದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು, ಜನಮನ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಯೇಸು ಕ್ರಿಸ್ತರು ಮಧ್ಯರಾತ್ರಿ ಜನ್ಮತಾಳಿದ್ದು, ಆ ಸಂದರ್ಭ ಆಕಾಶದಲ್ಲಿ ಬೆಳಕೊಂದು ಯೇಸು ಕ್ರಿಸ್ತ ಜನ್ಮತಾಳಿದ ಸ್ಥಳದಲ್ಲಿ ಉದಯ ಗೊಂಡಿರುವ ಹಿನ್ನೆಲೆ ಹೊಂದಿರುವ ಕುರಿತು ಉಲ್ಲೇಖವಿದ್ದು, ಕ್ರೈಸ್ತ ಬಾಂಧÀವರು ಇಂದಿಗೂ ಕ್ರಿಸ್‍ಮಸ್ ಆಚರಣೆಯ ಸಂದರ್ಭದಲ್ಲಿ ನಕ್ಷತ್ರಕ್ಕೆ ಹೆಚ್ಚಿನ ಮಹತ್ವತೆಯನ್ನು ನೀಡುತ್ತಾ ಬರುತ್ತಿದ್ದಾರೆ. ಡಿಸೆಂಬರ್ ತಿಂಗಳಿನಲ್ಲಿ ಕ್ರೈಸ್ತರ ಮನೆಗಳಲ್ಲಿ ನಕ್ಷತ್ರವನ್ನು ಆಳವಡಿಸಲಾಗುತ್ತದೆ.

ಇದೇ ಪ್ರಥಮ ಬಾರಿಗೆ ದೇವಾಲಯದಲ್ಲಿ ಧರ್ಮಗುರುಗಳಾದ ಎಡ್ವರ್ಡ್ ವಿಲಿಯಂ ಸಲ್ಡಾನ ಅವರು ನಕ್ಷತ್ರಗಳ ಸ್ಪರ್ಧೆಯನ್ನು ಆಯೋಜಿಸಿದ್ದು, ವಿವಿಧ ಕಿರುಕ್ರೈಸ್ತ ಸಮುದಾಯಗಳ ಕಲಾಪ್ರತಿಭೆಗಳು ವಿವಿಧ ಬಗೆಯ ನಕ್ಷತ್ರಗಳನ್ನು ನಿರ್ಮಿಸಿ ಬಾನಡಿ ಎತ್ತರಕ್ಕೆ ಕೊಂಡೊಯ್ಯುವ ಮಾದರಿಯಲ್ಲಿ ಅಂದಾಜು 17 ಅಡಿ ಎತ್ತರದ 2 ನಕ್ಷತ್ರ ಹಾಗೂ ಸುಮಾರು 10 ಅಡಿ ಎತ್ತರ ಮತ್ತು ಸಣ್ಣ ಪ್ರಮಾಣದ 14 ವಿವಿಧ ಬಗೆಯ ನಕ್ಷತ್ರಗಳು ಕಲಾವಿದರಿಂದ ಮೂಡಿ ಬಂದಿರುವದು ಕ್ರಿಸ್‍ಮಸ್ ಹಬ್ಬದ ಸಡಗರಕ್ಕೆ ಇಂಬು ನೀಡುತ್ತಿದೆ. ಸಂತ ಅಂತೋಣಿ ದೇವಾಲಯವು ಸಂಪೂರ್ಣ ನಕ್ಷತ್ರದಿಂದ ಕೂಡಿದ್ದರೆ ಮತ್ತೊಂದೆಡೆ ಜನರ ಚಿತ್ತವು ನಕ್ಷತ್ರದತ್ತ ನೆಟ್ಟಿದೆ.