ವೀರಾಜಪೇಟೆ, ಆ. 1: ರಾಜಕೀಯ ಪಕ್ಷಗಳ ಜಂಜಾಟದಲ್ಲಿ ಆಡಳಿತದ ವೈಫಲ್ಯದಿಂದಾಗಿ ರಾಜ್ಯದ ಜನತೆ ಬೇಸತ್ತಿದ್ದು ಪರ್ಯಾಯ ಸರಕಾರದ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಾತ್ಯತೀತ ಜನತಾದಳ ಬಲಿಷ್ಠ ಸಂಘಟನೆಗೆ ಕಾರ್ಯಪ್ರವೃತ್ತ ವಾಗಬೇಕಾಗಿದೆ ಎಂದು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ಜಾತ್ಯತೀತ ಜನತಾದಳದ ತಾಲೂಕು ಸಮಿತಿ ಅಧ್ಯಕ್ಷ ಮನೆಯಪಂಡ ಸಿ. ಬೆಳ್ಳಿಯಪ್ಪ ಹೇಳಿದರು.

ಜಾತ್ಯತೀತ ಜನತಾದಳದ ತಾಲೂಕು ಸಮಿತಿ ವತಿಯಿಂದ ನಲ್ವತ್ತೊಕ್ಕಲು ಚೋಕಂಡಳ್ಳಿ ಕ್ಷೇತ್ರದಲ್ಲಿ ಸದಸ್ಯರ ನೋಂದಾವಣೆಗೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕರ್ತರು ಹಾಗೂ ಸದಸ್ಯರು ಪಕ್ಷದ ಬೆನ್ನಲುಬು. ತಾಲೂಕಿ ನಾದ್ಯಂತ ಸದಸ್ಯರ ನೋಂದಣಿ ಕಾರ್ಯ ನಿರಂತರವಾಗಿ ಮುಂದುವರೆಯಲಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಕೆ.ಆರ್ ಸುರೇಶ್ ಮಾತನಾಡಿ ಮುಂದಿನ ಚುನಾವಣೆಯಲ್ಲಿ ಮತದಾರರು ಸರ್ಕಾರದÀ ಬದಲಾವಣೆಯನ್ನು ಬಯಸಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಮತದಾರರಿಗೆ ವಿಶ್ವಾಸವಿರುವದರಿಂದ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಪಕ್ಷ ಬಲಿಷ್ಠ ಸಂಘಟನೆಯತ್ತ ದಾಪುಗಾಲಿರಿಸುತ್ತಿದೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದಿಂದ ಮತಗಟ್ಟೆ ಸಮಿತಿ ರಚನೆಗೆ ಹಿಂದೆಯೇ ಚಾಲನೆ ನೀಡಲಾಗಿದ್ದು ಸಮಿತಿ ರಚನೆ ಮುಂದುವರೆದಿದೆ. ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ಕೆ ಕಳೆದ ತಿಂಗಳು ಚಾಲನೆ ನೀಡಲಾಗಿದ್ದು, ಮುಂದುವರೆಯುತ್ತಿದೆ. ಪಕ್ಷ ಹಾಗೂ ನಾಯಕತ್ವವನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.

ಸಭೆಯನ್ನುದ್ದೇಶಿಸಿ ಕ್ಷೇತ್ರದ ಅಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಪಕ್ಷದ ಮೇಲೆ ಅಲ್ಪ ಸಂಖ್ಯಾತರಿಗೂ ಒಲವಿದ್ದು ಇಂದು ಪಕ್ಷದ ಸಂಘಟನೆ ಅಗತ್ಯವಿದೆ ಎಂದು ಹೇಳಿದರು.

ಈ ಸಂದರ್ಭ ಜಿಲ್ಲಾ ಮುಖಂಡರಾದÀ ಸಿ.ಎ.ನಾಸೀರ್, ತಾಲೂಕು ಮುಖಂಡರಾದ ಕೆ.ಎ.ಆಯೂಬ್, ಕೆ.ವೈ ನಾಸೀರ್, ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯ ಹಾಗೂ ಪಕ್ಷದ ಮುಖಂಡ ಎಸ್.ಎಚ್. ಮತೀನ್, ಕುಟ್ಟ ವಿಭಾಗದ ಪಿ.ವಿ. ರೆನ್ನಿ, ನಗರ ಸಮಿತಿಯ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಆರ್.ಎ. ಸಕ್ಲೇನ್, ಜಿಲ್ಲಾ ಘಟಕದ ಎಚ್.ಜಿ. ಗೋಪಾಲ್ ಮತ್ತಿತರರು ಇದ್ದರು.