ಮಡಿಕೇರಿ, ಜ. 18: ಇಲ್ಲಿನ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ದೇವಾಂಗ ಮಹಿಳಾ ಸಮಾಜದ 22ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ಡಾ. ಜಿ. ರಮೇಶ್ (ನಿವೃತ್ತ ಡಿ.ಐ.ಜಿ.) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಯ ಕಾರ್ಯದಲ್ಲಿ ಮಹಿಳಾ ಸಂಘಟನೆಗಳು ಬಹಳ ಮಹತ್ತರವಾದ ಪಾತ್ರವನ್ನು ವಹಿಸಿವೆ. ಮಹಿಳೆಯರಿಗೆ ಮತ್ತು ಯುವಕರಿಗೆ ಸಕ್ರೀಯವಾಗಿ ಸಮಾಜದ ಚಟುವಟಿಕೆಗಳಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಮಹಿಳಾ ಸಂಘ, ಯುವಕ ಸಂಘಗಳನ್ನು ಸ್ಥಾಪಿಸಲು ರಾಜ್ಯ ದೇವಾಂಗ ಸಂಘ ಜವಾಬ್ದಾರಿ ತೆಗೆದುಕೊಳ್ಳುತ್ತದೆ. ಮಡಿಕೇರಿಯ ಮಹಿಳಾ ಸಮಾಜ 22 ವರ್ಷಗಳಿಂದ ಯಶಸ್ವಿಯಾದ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವದು ಶ್ಲಾಘನೀಯ ಎಂದು ಮಹಿಳಾ ಸಮಾಜದ ಸದಸ್ಯರನ್ನು ಹಾಗೂ ಅವರಿಗೆ ಬೆನ್ನೆಲುಬಾಗಿರುವ ದೇವಾಂಗ ಸಂಘದ ಅಧ್ಯಕ್ಷರನ್ನು, ಪದಾಧಿಕಾರಿಗಳನ್ನು ಅಭಿನಂದಿಸಿದರು.
ರಾಜ್ಯ ಸಂಘದ ಕೋಶಾಧಿಕಾರಿ ಕೆ. ನಾರಾಯಣ್ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಎಂ.ಟೆಕ್ನಲ್ಲಿ ರಜತ ಪದಕ ಪಡೆದ ಪೂಜಾ ಕೆಂಚೆಟ್ಟಿ, ಡಾ. ಜೀವನ್ ರವಿ, ಡಾ. ವರ್ಷಾ ರವಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಸಂಘದ ಅಧ್ಯಕ್ಷ ಕೆ.ಎನ್. ಗಜಾನನ ಮಾತನಾಡಿ, ಮಡಿಕೇರಿ ದೇವಾಂಗ ಸಂಘದ ಬಗ್ಗೆ ಸೂಕ್ಷ್ಮವಾಗಿ ಪರಿಚಯಿಸಿದರು. ಇವರೊಂದಿಗೆ ದೇವಾಂಗ ಸಂಘದ ಸದಸ್ಯರು ಹಾಗೂ ಕುಲಬಾಂಧವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿ ಗಣ್ಯರನ್ನು ಶಾಲು ಹೊದಿಸಿ ಫಲ-ತಾಂಬೂಲದೊಂದಿಗೆ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ದೇವಾಂಗ ಸಂಘದ ಕಾರ್ಯದರ್ಶಿ ಪ್ರೊ. ಸಿ.ಎಲ್. ಧನಪಾಲ್, ಸಹ ಕಾರ್ಯದರ್ಶಿ ಸಿ. ರಾಜಣ್ಣ, ಸಂಘಟನಾ ಕಾರ್ಯದರ್ಶಿ ಡಿ. ಲಿಂಗರಾಜು ನೊಣವಿನಕೆರೆ, ಹೆಚ್. ರಾಜಶೇಖರ್, ಮಂಗಳೂರು ದೇವಾಂಗ ಸಂಘದ ರಾಮು ಮಾಯಪ್ಪಾಡಿ, ಕಮಲಾಕ್ಷ, ಆರ್. ವೆಂಕಟೇಶ್, ಕುಶಾಲನಗರದ ಅಧ್ಯಕ್ಷ ವಿಜೇಂದ್ರ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಕೆ. ತಿಮ್ಮಪ್ಪ, ತೊರೆನೂರು ಅಧ್ಯಕ್ಷ ಪಾಂಡುರಂಗ, ಮಹಿಳಾ ಸಮಾಜದ ಅಧ್ಯಕ್ಷೆ ಭಾರತಿ ರಮೇಶ್, ದೇವಾಂಗ ಸಂಘದ ಉಪಾಧ್ಯಕ್ಷ ಕೆ.ಎನ್. ಬಾಲರಾಜ್, ನಿರ್ದೇಶಕರಾದ ಡಿ.ಪಿ. ರಮೇಶ್, ಡಿ.ಜೆ. ಕಿಶೋರ್ ಹಾಗೂ ಮಹಿಳಾ ಸಮಾಜದ ಸದಸ್ಯರು ಉಪಸ್ಥಿತರಿದ್ದರು.
ಶಶಿಕಲಾ ಲೋಕೇಶ್, ಇಂದ್ರ ಜಯರಾಂ, ಜಯಶ್ರೀ ನಾಗೇಶ್ಗವಿ, ಪದ್ಮಾ ಮೋಹನ್, ಪ್ರಾರ್ಥಿಸಿ, ಡಿ.ವಿ. ಜಗದೀಶ್ ಸ್ವಾಗತಿಸಿ, ಖಜಾಂಚಿ ಡಿ.ಎಂ. ಮಹೇಶ್ ವಂದಿಸಿದರು. ಭಾಗ್ಯ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ಭೋಜನದ ನಂತರ ನಡೆದ ಮಹಿಳಾ ಸಮಾಜದ 22ನೇ ವರ್ಷದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಪೂರ್ಣಿಮಾ ಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, 22 ವರ್ಷದಿಂದ ಸಮಾಜ ತಮ್ಮೆಲ್ಲರ ಸಹಕಾರದಿಂದ ಅಭಿವೃದ್ಧಿ ಹೊಂದುತ್ತಾ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತದೆ. ಅದು ಇನ್ನೂ ಎತ್ತರಕ್ಕೆ ಬೆಳೆದು ದೀಪದಂತೆ ಉಜ್ವಲಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೂಪಾರಾಜು ಮತ್ತು ನೇತ್ರಾ ಚಂದ್ರ ಮಾತನಾಡಿ, ಈ ಕಾರ್ಯಕ್ರಮ ಇಷ್ಟೊಂದು ಯಶಸ್ವಿಯಾಗಲು ಮಹಿಳಾ ಸಮಾಜ ಬಹಳ ಶ್ರಮಪಟ್ಟಿದೆ. ಅವರಿಗೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದರು.
ಭಾರತಿ ರಮೇಶ್ ಮಹಿಳಾ ಸಮಾಜದ ವಿಚಾರವನ್ನು ಸಭೆಗೆ ತಿಳಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅತಿಥಿಗಳಾಗಿ ಆಗಮಿಸಿದ್ದ ದೇವಾಂಗ ಸಂಘದ ಅಧ್ಯಕ್ಷ ಗಜಾನನ ಮಹಿಳಾ ಸಮಾಜದ ಎಲ್ಲಾ ಸತ್ಕಾರ್ಯಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ನಂತರ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮ ರಂಜಿಸಿತು.
ನಂದಿನಿ ಗಣೇಶ್ ಮತ್ತು ಲಲಿತಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಸರೋಜ ರಾಜು, ಇಂದ್ರ ಜಯರಾಂ, ಪದ್ಮಾ ಮೋಹನ್, ಶಾಂತ ವಸಂತ್, ಭಾಗ್ಯ ಪ್ರಕಾಶ್, ವಿಜಯಾ ಗಣೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.