ನಾಪೆÇೀಕ್ಲು, ಅ. 9: ಚೇಲಾವರ ಗ್ರಾಮದಲ್ಲಿ ಶನಿವಾರ ಸಂಜೆ ಒಂಟಿ ಸಲಗದ ಧಾಳಿಗೆ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ವರದಿಯಾಗಿದೆ.
ಚೇಲಾವರದ ಮುಖ್ಯ (ಕಾಂಕ್ರೀಟ್) ರಸ್ತೆಯಲ್ಲಿ ಗ್ರಾಮದ ಬಿಲ್ಲವರ ಸೋಮಪ್ಪ ಪೂಜಾರಿ ಕಾಡಾನೆ ಧಾಳಿಯಿಂದ ಗಾಯಗೊಂಡವರು. ಶನಿವಾರ ಸಂಜೆ ದನಗಳನ್ನು ಕೊಟ್ಟಿಗೆಗೆ ಕಟ್ಟಲು ತೆರಳುತ್ತಿದ್ದ ಸಂದರ್ಭ ಎದುರುಗಡೆಯಿಂದ ಬಂದ ಒಂಟಿ ಸಲಗ ಅವರನ್ನು ಕೆಳಗೆ ಕೆಡವಿ ಹಾಕಿ ಮುಂದೆ ಸಾಗಿದೆ. ಇದರಿಂದ ಸೊಂಟ ಮತ್ತು ಕೈಕಾಲುಗಳಿಗೆ ಗಾಯವಾಗಿದೆ. ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಅವರನ್ನು ವೀರಾಜಪೇಟೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮತ್ತೆ ಕಾಡಾನೆ ಗ್ರಾಮದಲ್ಲಿ ಕಾಣಿಸಿಕೊಂಡಿರುವದು ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದೆ.