ಭಾಗಮಂಡಲ, ಜು. 25: ಚೆದ್ಕಾರ್ ರಸ್ತೆ ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿಗೆ ಸಮೀಪದ ಕಾವೇರಿ ಕಾಲೇಜಿನ ಬಳಿಯಿರುವ ಚೆದ್ಕಾರ್ ಸೇತುವೆ ಕಳೆದ 14 ವರ್ಷಗಳ ಹಿಂದೆ ನಿರ್ಮಿಸಿದ್ದು, ಈ ಸೇತುವೆ ಕುಸಿತಗೊಂಡ ಹಿನ್ನೆಲೆಯಲ್ಲಿ ಜೊತೆಯಲ್ಲಿದ್ದ ಬ್ರಿಟೀಷ್ ಕಾಲದ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಪರ್ಯಾಯ ಮಾರ್ಗವಾಗಿದ್ದ ಈ ಸೇತುವೆ ಕೂಡ ಕುಸಿದಿದ್ದು, ಸಂಚಾರಕ್ಕೆ ಯೋಗ್ಯವಲ್ಲದ ಹಿನ್ನೆಲೆಯಲ್ಲಿ ‘ಶಕ್ತಿ'ಯಲ್ಲಿ ವರದಿ ಪ್ರಕಟವಾಗಿತ್ತು.

ವರದಿಗೆ ಸ್ಪಂದಿಸಿದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಮರುದಿನವೇ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ಆದಷ್ಟು ಬೇಗನೆ ನೂತನ ಸೇತುವೆ ಅಲ್ಲದೆ ಬ್ರಿಟೀಷರ ಕಾಲದ ಸೇತುವೆಯನ್ನು ದುರಸ್ತಿ ಮಾಡುವದಾಗಿ ಭರವಸೆ ನೀಡಿದ್ದರು. ಆದರೆ ವಾರ ಕಳೆದರೂ ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇಂದು ಎರಡೂವರೆ ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಇದರಿಂದಾಗಿ ಪ್ರಯಾಣಿಕರ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು. ರಾಜ್ಯ ರಸ್ತೆ ಸಾರಿಗೆ ಬಸ್‍ಗಳಿಲ್ಲದೆ ಖಾಸಗಿ ಬಸ್‍ಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೂ ಪರದಾಡುವ ಪರಿಸ್ಥಿತಿವುಂಟಾಗಿತ್ತು.

ಪ್ರತಿಭಟನೆ ಸ್ಥಳಕ್ಕೆ ಲೋಕೋಪ ಯೋಗಿ ಇಲಾಖೆಯ ಸಹಾಯಕ ಅಭಿಯಂತರ ಸತ್ಯನಾರಾಯಣ ಅವರು ಭೇಟಿ ನೀಡಿದಾಗ ಜಿ.ಪಂ. ಮಾಜಿ ಸದಸ್ಯ ಪಿ.ಎಂ. ರಾಜೀವ್ ಹಾಗೂ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಾಳನರವಿ ಅವರು ಗಳ ನೇತೃತ್ವದಲ್ಲಿ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭ ಮಾತನಾಡಿದ ಸಹಾಯಕ ಅಭಿಯಂತರ ಸತ್ಯನಾರಾಯಣ ಅವರು ಸರ್ಕಾರ ದಿಂದ ಹಣ ಬಿಡುಗಡೆಯಾಗುವ ನಿರೀಕ್ಷೆಯಿತ್ತು. ಆದರೆ ಹಣ ಬಿಡುಗಡೆ ಯಾಗಿಲ್ಲ. ಮಳೆ ಕಡಿಮೆಯಿದ್ದರೆ ನಾಳೆಯಿಂದ ಕೆಲಸ ಪ್ರಾರಂಭಿಸು ವದಾಗಿ ತಿಳಿಸಿದರು. ಅಲ್ಲದೆ ಕೋರಂಗಾಲ ಗ್ರಾಮದ ಅಬ್ರಾಟಿಪಳ್ಳ ಸೇತುವೆ ಪರಿಶೀಲಿಸಿ ಹುಣಸೂರು - ತಲಕಾವೇರಿ ಹೆದ್ದಾರಿ ಕಾಮಗಾರಿ ಯಲ್ಲಿ ಕ್ರಿಯಾ ಯೋಜನೆಯಾಗಿದ್ದು, ನಾಪೋಕ್ಲು- ಭಾಗಮಂಡಲ ರಸ್ತೆಯಲ್ಲಿ ನಾಲ್ಕು ಸೇತುವೆಗಳ ಅವಶ್ಯಕತೆಯಿದ್ದು, ಅದಕ್ಕೂ ಕೂಡ ಸದ್ಯದಲ್ಲಿಯೇ ಹಣ ಬಿಡುಗಡೆ ಯಾಗಲಿದೆ. ಅದರಲ್ಲಿ ಮೊದಲು ಅಬ್ರಾಟಿ ಪಳ್ಳ ಸೇತುವೆ ಯನ್ನು ದುರಸ್ತಿ ಮಾಡಲಾಗುವದು ಎಂದು ಭರವಸೆಯಿತ್ತರು. ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಂಡು ಲೋಕೋಪಯೋಗಿ ಅಭಿಯಂತರ ಹಾಗೂ ಕಂದಾಯ ಇಲಾಖಾಧಿಕಾರಿ ಬಿ.ಬಿ. ರಾಮಯ್ಯ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಇಂಜಿನಿಯರ್ ಹಾಗೂ ಗುತ್ತಿಗೆ ದಾರರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿ.ಪಂ. ಸದಸ್ಯ ಕುಮಾರ್, ತಾ.ಪಂ. ಸದಸ್ಯ ಶ್ರೀಧರ್, ಭಾಗಮಂಡಲ ಗ್ರಾ.ಪಂ. ಅಧ್ಯಕ್ಷೆ ಸುನೀತ, ಉಪಾಧ್ಯಕ್ಷೆ ಭವಾನಿ, ಸದಸ್ಯರಾದ ಹರಿಣಿ, ಪ್ರಮೀಳಾ, ರಾಜಾ ರೈ, ಪುರುಷೋತ್ತಮ, ಯೋಗಾನಂದ, ಭಾಸ್ಕರ, ಸ್ಥಳೀಯ ರಾದ ಅಮೆ ಪದ್ಮಯ್ಯ, ಪಟ್ಟಮಾಡ ಸಂಜು, ಕುಯ್ಯಮುಡಿ ಲವ ಭಾಗವಹಿಸಿದ್ದರು.