ಬೆಂಗಳೂರು, ನ. 30: ಮಡಿಕೇರಿ - ಭಾಗಮಂಡಲ ರಸ್ತೆಯಲ್ಲಿ ಚೆದುಕಾರ್ ಬಳಿಯಿರುವ ಸೇತುವೆ ದುರಸ್ತಿಯನ್ನು ರೂ. 80 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖಾ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ತಿಳಿಸಿದರು.ವಿಧಾನ ಪರಿಷತ್‍ನಲ್ಲಿಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಕೊಡಗಿನಲ್ಲಿರುವ ಪುರಾತನ ಸೇತುವೆಗಳು, ಅವುಗಳ ನಿರ್ವಹಣೆ, ಅವುಗಳ ದುರಸ್ತಿ ಕುರಿತು ಮಾಹಿತಿ ಬಯಸಿದರು. ಇದಕ್ಕೆ ಉತ್ತರಿಸಿದ ಸಚಿವರು ಐಗೂರಿನ ಕಬ್ಬಿಣ ಸೇತುವೆಯನ್ನು ರೂ. 200 ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಿಸುವ ಅವಶ್ಯಕತೆಯಿದ್ದು, ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಹೆಬ್ಬಾಲೆ ಯಲ್ಲಿರುವ ಸೇತುವೆಯು ಪಿರಿಯಾಪಟ್ಟಣ ತಾಲೂಕಿನ ಸೂಳೇಕೋಟೆ ಗ್ರಾಮದಿಂದ ಹೆಬ್ಬಾಲೆಗೆ ಸಂಪರ್ಕಿಸುವ ರಸ್ತೆಯಲ್ಲಿದ್ದು, ಇದರ ನಿರ್ವಹಣೆ ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗೆ ಒಳಪಡುತ್ತವೆ. ಆ ಸೇತುವೆ ಸುಸ್ಥಿತಿಯಲ್ಲಿದೆ ಎಂದು ತಿಳಿಸಿದರು.
ಕಂದಾಯ ಇಲಾಖಾ ಮಾಹಿತಿ
ಅರ್ಜಿ ಸಂಖ್ಯೆ 50/53ರಡಿಯಲ್ಲಿ ಕೊಡಗಿನಲ್ಲಿ
(ಮೊದಲ ಪುಟದಿಂದ) ಎಷ್ಟು ಅರ್ಜಿ ಸ್ವೀಕೃತವಾಗಿದೆ ವಿಲೇವಾರಿಯಾಗಿದೆ ಎಂದು ಎಂ.ಎಲ್.ಸಿ. ಸುನಿಲ್ ವಿವರ ಬಯಸಿದರು. ಉತ್ತರಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನಮೂನೆ 50ರಲ್ಲಿ ಮಡಿಕೇರಿ ತಾಲೂಕಿನಲ್ಲಿ 4386 ಅರ್ಜಿ ಸ್ವೀಕೃತವಾಗಿದ್ದು, 4186 ಅರ್ಜಿ ವಿಲೇವಾರಿಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 6436 ಅರ್ಜಿ ಸ್ವೀಕೃತವಾಗಿದ್ದು, 2962 ಅರ್ಜಿ ವಿಲೇವಾರಿಯಾಗಿದೆ.
ವೀರಾಜಪೇಟೆ ತಾಲೂಕಿನಲ್ಲಿ 3790 ಅರ್ಜಿ ಸ್ವೀಕೃತವಾಗಿದ್ದು, 2178 ಅರ್ಜಿ ವಿಲೇವಾರಿಯಾಗಿದೆ. ನಮೂನೆ 53ರಲ್ಲಿ ಮಡಿಕೇರಿಯಲ್ಲಿ 4895 ಅರ್ಜಿ ಸ್ವೀಕೃತವಾಗಿದ್ದು, 4115 ಅರ್ಜಿ ವಿಲೇವಾರಿಯಾಗಿದೆ. ವೀರಾಜಪೇಟೆಯಲ್ಲಿ 1801 ಅರ್ಜಿ ಸ್ವೀಕೃತವಾಗಿದ್ದು, 1535 ಅರ್ಜಿ ವಿಲೇವಾರಿಯಾಗಿದೆ. ಸೋಮವಾರಪೇಟೆಯಲ್ಲಿ 7625 ಅರ್ಜಿಯಲ್ಲಿ 2632 ಅರ್ಜಿ ವಿಲೇವಾರಿಯಾಗಿದೆ ಎಂದು ಮಾಹಿತಿ ನೀಡಿದರು.