ಚೆಟ್ಟಳ್ಳಿ, ಸೆ. 1: ಚೆಟ್ಟಳ್ಳಿಯ ಪುತ್ತ್ತರಿರ ಕುಟುಂಬ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಂಯುಕ್ತಾಶ್ರಯದಲ್ಲಿ ಚೆಟ್ಟಳ್ಳಿಯ ಪ್ರೌಢಶಾಲಾ ಮೈದಾನದಲ್ಲಿ 3ನೇ ವರ್ಷದ ‘ಕೈಲ್‍ಪೊಳ್ದ್ ಬೊಡಿನಮ್ಮೆ’ ಸಂಭ್ರಮದಿಂದ ನಡೆಯಿತು.ಪುತ್ತರಿರ ಕುಟುಂಬದ ಕೈಮಡದಲ್ಲಿ ಸೇರಿ ದೇವರನ್ನು ಪ್ರಾರ್ಥಿಸಿದರು. ಬಳಿಕ ಚೆಟ್ಟಳ್ಳಿಯ ಪ್ರೌಢಶಾಲಾ ಮೈದಾನದಲ್ಲಿ ಕುಟುಂಬದ ಪಟ್ಟೆದಾರ ಬಿದ್ದಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪುತ್ತ್ತರಿರ ಆಶಾ ಬೋಪಣ್ಣ ಪ್ರಾರ್ಥನೆ ಸಲ್ಲಿಸಿ, ಪುತ್ತರಿರ ಪಪ್ಪು ತಿಮ್ಮಯ್ಯ ಸ್ವಾಗತ ಹಾಗೂ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಪುತ್ತರಿರ ಬಿದ್ದಪ್ಪ, ಪುತ್ತರಿರ ಟುಟ್ಟು ಕಾರ್ಯಪ್ಪ, ಪುತ್ತರಿರ ಭೀಮಯ್ಯ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.

ಪುತ್ತರಿರ ಕುಟುಂಬದ ಪಟ್ಟೆದಾರ ಪುತ್ತರಿರ ಬಿದ್ದಪ್ಪ 12 ಬೋರ್ ತೆಂಗಿನಕಾಯಿ ಗುಂಡು ಹೊಡೆಯುವ ಸ್ಪರ್ಧೆಯನ್ನು ಪುತ್ತರಿರ ಭೀಮಯ್ಯ, 022 ತೆಂಗಿನಕಾಯಿ ಗುಂಡು ಹೊಡೆಯುವ

ಸ್ಪರ್ಧೆಯನ್ನು ಏರ್‍ಗನ್ಸ್ ಟಾರ್ಗೇಟ್ ಸ್ಪರ್ಧೆಯನ್ನು ಪುತ್ತರಿರ ಎಂ. ಸೋಮಯ್ಯ ಉದ್ಘಾಟಿಸಿದರು. ನಂತರದಲ್ಲಿ 022, 012 ಬೋರ್ ತೆಂಗಿನಕಾಯಿ ಗುಂಡು ಹೊಡೆಯುವ ಸ್ಪರ್ಧೆ ಹಾಗೂ ಏರ್‍ಗನ್ಸ್ ಟಾರ್ಗೇಟ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಜಿಲ್ಲೆ ಸೇರಿದಂತೆ ವಿವಿಧ ಕಡೆಗಳಿಂದ ಸ್ಪರ್ಧಾರ್ಥಿಗಳು ಆಗಮಿಸಿದ್ದರು. ಹಿರಿಯರು, ಕಿರಿಯರು, ಮಹಿಳೆ ಯರು, ಮಕ್ಕಳು ಭಾಗವಹಿಸಿದ್ದುದು ವಿಶೇಷವಾಗಿತ್ತು.