ಚೆಟ್ಟಳ್ಳಿ, ನ. 15: ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಪುಂಡಾನೆಯ ಹಾವಳಿಯನ್ನು ನಿಯಂತ್ರಿಸಲು ಇಲಾಖಾ ಆದೇಶದನ್ವಯ ಎರಡು ಪುಂಡಾನೆಗಳನ್ನು ಸೆರೆಹಿಡಿಯಲು ಆದೇಶ ನೀಡಿದಂತೆ ಕುಶಾಲನಗರ ವಲಯ ಅರಣ್ಯ ಇಲಾಖೆಯ ತಂಡ ಪುಂಡಾನೆಯ ಜಾಡನ್ನು ಮೀನುಕೊಲ್ಲಿ ಅರಣ್ಯದಲ್ಲಿ ಹಗಲಿರುಳು ಹುಡುಕತೊಡಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ವೀರಾಜಪೇಟೆ ವಲಯದಲ್ಲಿ 2, ಮಡಿಕೇರಿ ವಲಯದಲ್ಲಿ 2 ಪುಂಡಾನೆ ಯನ್ನು ಹಿಡಿಯಲು ಆದೇಶಿಸಿದಂತೆ ಚೆಟ್ಟಳ್ಳಿಯಲ್ಲಿ ಕಳೆದ ಮೂರುದಿನಗಳಿಂದ ಅರಣ್ಯ ಇಲಾಖೆ ಹರಸಾಹಸ ಪಟ್ಟು ಪುಂಡಾನೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ನಿನ್ನೆ ದಿನ ವೀರಾಜಪೇಟೆ ವಲಯದ ಪುಂಡಾನೆಯನ್ನು ಹಿಡಿದು ದುಬಾರೆ ಆನೆ ಶಿಬಿರದಲ್ಲಿ ತಯಾರಿಸಲಾದ ಎರಡನ್ನು ಜೋಡಿ ಸ್ಕ್ರಾಲ್‍ನಲ್ಲಿ ಬಂಧಿಸಿ ತರಬೇತಿ ಪ್ರಾರಂಭಿಸಲಾಗಿದೆ.