ಚೆಟ್ಟಳ್ಳಿ, ಜು. 27: ಚೆಟ್ಟಳ್ಳಿಯ ಹಿಂದೂ ಮಲೆಯಾಳಂ ಸಮಾಜದ ವತಿಯಿಂದ 9ನೇ ವರ್ಷದ ಓಣಂ ಆಚರಣೆಯನ್ನು ಸೆಪ್ಟಂಬರ್ 18 ರಂದು ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ನಡೆಸುವಂತೆ ಓಣಂ ಆಚರಣಾ ಸಭೆಯಲ್ಲಿ ತೀರ್ಮಾನಿಸಲಾಯಿತು.

ತಾ. 24 ರಂದು ಅಪರಾಹ್ನ 3.30 ಗಂಟೆಗೆ ಚೆಟ್ಟಳ್ಳಿಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಿ.ಕೆ. ಶಶಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಹಿಂದೂ ಮಲೆಯಾಳಂ ಸಮಾಜದ ಸದಸ್ಯರ ಸಭೆಯನ್ನು ಕರೆಯಲಾಗಿತ್ತು. ಎಂಟು ವರ್ಷಗಳಿಂದ ಸಮಿತಿಯು ಚೆಟ್ಟಳ್ಳಿಯಲ್ಲಿ ಓಣಂ ಆಚರಣೆಯನ್ನು ನಡೆಸಿಕೊಂಡು ಬರುತ್ತಿದ್ದು, ಅದೇ ರೀತಿ ಸದಸ್ಯರ ಸಹಕಾರದೊಂದಿಗೆ ಈ ವರ್ಷವೂ ಕೂಡ ನಡೆಸುವಂತೆ ತೀರ್ಮಾನಿಸಲಾಯಿತು.

ಸೆ. 18 ರಂದು ಬೆಳಿಗ್ಗೆ 7 ಗಂಟೆಗೆ ಮಂಗಳ ಸಭಾಂಗಣದಲ್ಲಿ ಪೂಕಳಂ (ಹೂವಿನ ಅಲಂಕಾರ) ಸ್ಪರ್ಧೆ 9.30 ರಿಂದ ಕಾರ್ಯಕ್ರಮದ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮ, 10.30ಕ್ಕೆ ಮಂಗಳ ಸಭಾಂಗಣದಿಂದ ಚೆಟ್ಟಳ್ಳಿಯ ಪಟ್ಟಣದವರೆಗೆ ಚಂಡೆವಾದ್ಯಗಳೊಂದಿಗೆ ಶೋಭಾಯಾತ್ರೆ, ಸಮಾಜ ಬಾಂಧವರಿಗೆ ವಿವಿಧ ಸ್ಪರ್ಧೆ, ನಂತರ ಓಣಂ ವಿಶೇಷ ಭೋಜನ. ಅಪರಾಹ್ನ 2.30ಕ್ಕೆ ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮವಿದ್ದು ಸ್ಪರ್ಧಾ ವಿಜೇತರಿಗೆ ಬಹಮಾನ ವಿತರಣೆ ಮಾಡಲಾಗುವದು.

ಸಭೆಯಲ್ಲಿ ಓಣಂ ಆಚರಣಾ ಸಮಿತಿಯ ಅಧ್ಯಕ್ಷ ಓ.ಕೆ. ಶ್ರೀನಿವಾಸ್, ಹಿಂದೂ ಮಲೆಯಾಳಂ ಸಮಿತಿಯ ಪದಾಧಿಕಾರಿಗಳಾದ ವಿ.ಪಿ. ಪ್ರಕಾಶ್, ಸಿ.ಎ. ಪ್ರವೀಣ್ ಕುಮಾರ್, ಧನಲಕ್ಷ್ಮಿ ಹಾಗೂ ಸದಸ್ಯರು ಹಾಜರಿದ್ದರು.