ಗೋಣಿಕೊಪ್ಪ, ಜ. 5: ಶ್ರೀಮಂಗಲ ಪೋಲಿಸ್ ಠಾಣಾ ವ್ಯಾಪ್ತಿಯ ಚಿಕ್ಕಮುಂಡೂರು ವ್ಯಾಪ್ತಿಯಲ್ಲಿ ಮನೆ ದರೋಡೆ ನಡೆದಿದ್ದು, ಮನೆಯಲ್ಲಿ ಇದ್ದ ಇಬ್ಬರು ಹೆಂಗಸರನ್ನು ಥಳಿಸಿ, ಅವರ ಹತ್ತಿರವಿದ್ದ ಕರಿಮಣಿ, ಮಾಂಗಲ್ಯ ಸರ, ಚಿನ್ನದ ಉಂಗುರ ಹಾಗೂ ಮನೆಯ ಬಾಗಿಲನ್ನು ಒಡೆದು ಒಳ ನುಗ್ಗಿ ಹೊಸ ಟೀವಿ, 3 ಬಂದೂಕು, ಇಂದು ಬಾಕ್ಸ್ ಕೊವಿ ತೋಟ, ಸುಮಾರು 50 ಗ್ರಾ ಚಿನ್ನದ ಒಡವೆ ಹಾಗೂ 1 ಲಕ್ಷ ಹಣವನ್ನು ದೋಚಿರುವ ಪ್ರಸಂಗ ನಡೆದಿದೆ.ಚಿಕ್ಕಮುಂಡೂರು ಗ್ರಾಮದಲ್ಲಿ ಕಳೆದ ಹಲವು ಸಮಯಗಳಿಂದ ನಡೆಯುತ್ತಿದ್ದ ಆಸ್ತಿ ವಿವಾದವೇ ಈ ದರೋಡೆಗೆ ಮೂಲ ಕಾರಣವಾಗಿದ್ದು, ಧಾಳಿಯಿಂದ ಬೆಳಗಾವಿಯಲ್ಲಿ ವಾಸ ಮಾಡುತ್ತಿರುವ ಮಾಣಿರ ವಾಸು ಮುತ್ತಣ್ಣರವರ ಪತ್ನಿ ಕೌಶಲ್ಯ ಮತ್ತು ವಾಸು ಅವರ ಅಕ್ಕ ಕೊಟ್ರಮಾಡ ತಾರ ಗಂಗಮ್ಮ ತೀವ್ರವಾಗಿ ಗಾಯಗೊಂಡಿದ್ದು, ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ವಿವರವನ್ನು ನೀಡಿದ ವಾಸು ಅವರ ಪತ್ನಿ ಕೌಶಲ್ಯ ಈ ಹಿಂದೆ ಚಿಕ್ಕಮುಂಡೂರು ಗ್ರಾಮದ ಅಜ್ಜಿಕುಟ್ಟಿರ ಕುಟುಂಬದ ಆಸ್ತಿಯನ್ನು ಗೋವಾದಲ್ಲಿ ನೆಲೆಸಿರುವ ನಾಯಕ್ ಹನುಮಂತೇಗೌಡ ಖರೀದಿಸಿದ್ದು, ಇದರ ಬಗ್ಗೆ ಅಜ್ಜಿಕುಟ್ಟಿರ ಕುಟುಂಬಸ್ಥರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ನಡುವೆ ನಾಯಕ್ ಆಸ್ತಿಯನ್ನು ಬೆಳಗಾವಿಯಲ್ಲಿ ನೆಲೆಸಿರುವ ಮಾಣಿರ ವಾಸು ಮುತ್ತಣ್ಣರವರಿಗೆ ಪರಬಾರೆ ಮಾಡಿದ್ದು, ಮುಂಗಡವಾಗಿ 5 ಲಕ್ಷ ಹಣ ಪಡೆದುಕೊಂಡಿದ್ದಾರೆ. ಇದನ್ನು ಪೊಂನ್ನಪೇಟೆಯ ವಕೀಲರ ಮುಖಾಂತರ ನಡೆಸಲಾಗಿದೆ, ಆದರೆ ಅಜ್ಜಿಕುಟ್ಟಿರ ಕುಟುಂಬದವರು ಆಸ್ತಿಯ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಿದರಿಂದ ಆಸ್ತಿಯನ್ನು

(ಮೊದಲ ಪುಟದಿಂದ) ದಸ್ತಾವೇಜು ಮಾಡಲು ಸಾಧ್ಯವಾಗದೆ ಹಾಗೆಯೇ ಉಳಿದುಕೊಂಡಿದ್ದು, ವ್ಯಾಜ್ಯ ಪರಿಹಾರವಾದ ನಂತರ ಉಳಿದ ಮೊತ್ತವನ್ನು ಪಾವತಿಸುವದಾಗಿ ವಾಸು ಮುತ್ತಣ್ಣ ನಾಯಕ್ ಅವರಿಗೆ ತಿಳಿಸಿದ್ದು, ಇದರಿಂದ ಎರಡು ಕಡೆಯವರಿಗೂ ಸಾಕಷ್ಟು ಗಲಾಟೆಗಳು ನಡೆದಿವೆ. ಆದರೆ ಕಳೆದ 2 ದಿನಗಳ ಹಿಂದೆ ಚಿಕ್ಕಮುಂಡೂರುವಿಗೆ ಆಗಮಿಸಿದ ಮಾಣಿರ ವಾಸು ಮುತ್ತಣ್ಣ ಮತ್ತು ಪತ್ನಿ ಈ ವಿವಾದಿತ ಸ್ಥಳದಲ್ಲೇ ಇರುವ ಮನೆಯಲ್ಲಿ ಉಳಿದುಕೊಂಡಿದ್ದು, ನಿನ್ನೆ ಪತ್ನಿಯನ್ನು ಬಿಟ್ಟು ತಾವು ತಿರುಪತಿಗೆ ಹೊರಟಿದ್ದಾರೆ. ಈ ಸಮಯದಲ್ಲಿ ಪತ್ನಿ ಕೌಶಲ್ಯರೊಂದಿಗೆ ಕೋಟ್ರಮಾಡ ತಾರ ಗಂಗಮ್ಮ ಉಳಿದುಕೊಂಡಿದ್ದಾರೆ. ಇದರ ಸುಳಿವನ್ನು ಅರಿತ ನಾಯಕ್ ಇತರ 15 ಜನರ ತಂಡದವರಾದ ಮಾಣಿರ ರಘು, ಅವರ ಪತ್ನಿ ರೂಪ, ಕಳ್ಳಿಚಂಡ ಅನಿಲ್, ಸುನಿಲ್, ಕಳ್ಳಿಚಂಡ ಗೋಕುಲ, ಶೀಲ ಮತ್ತು ಕುಟ್ಟಪ್ಪ ಇವರುಗಳೊಂದಿಗೆ ಗೋಕುಲ ಅವರ ಕಾರ್ಮಿಕರು ಏಕಾಏಕಿ ಮನೆಗೆ ನುಗ್ಗಿ ಮನೆಯಲ್ಲಿದ್ದ ಇಬ್ಬರು ಹೆಂಗಸರ ಮೇಲೆ ಧಾಳಿ ಮಾಡಿದಲ್ಲದೆ, ಅವರ ಮೈಮೇಲಿದ್ದ ಬಟ್ಟೆಯನ್ನು ಹರಿದು ಹಾಕಿದಲ್ಲದೆ ಅವರು ಉಪಯೋಗಿಸುತ್ತಿದ್ದ ಬಟ್ಟೆ ಮತ್ತು ಸಾಮಗ್ರಿಗಳನ್ನು ಮನೆಯ ಮುಂದೆ ಸುಟ್ಟು ಹಾಕಿದಲ್ಲದೆ, ಈ ವಿಷಯವನ್ನು ಇತರರಿಗೆ ತಿಳಿಸಿದರೆ ಕೊಲ್ಲುವದಾಗಿ ಬೆದರಿಕೆ ಹಾಕಿದ್ದಾಗಿ ತಿಳಿಸಿದ್ದಾರೆ.

ಪೊಲೀಸರ ನಿರ್ಲಕ್ಷ್ಯ

ಘಟನೆ ನಡೆದು ಮಾಹಿತಿ ಪಡೆದ ಶ್ರೀಮಂಗಲ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾಗ ಸ್ಥಳದಲ್ಲಿ ಗಾಯಗೊಂಡಿದ್ದ ಕೌಶಲ್ಯ ಮತ್ತು ತಾರ ಗಂಗಮ್ಮ ಘಟನೆ ಬಗ್ಗೆ ಮಾಹಿತಿಯನ್ನು ನೀಡಿದರು. ಕೇಸು ದಾಖಲಿಸುವ ಗೋಜಿಗೆ ಹೋಗದ ಪೊಲೀಸರು ಗಾಯಗೊಂಡ ಹೆಂಗಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾಗಿಸಿದರೆ ಶ್ರೀಮಂಗಲ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸುವಂತೆ ತಿಳಿಸಿ ತೆರಳಿದ್ದಾರೆ. ನಂತರ ಗಾಯಾಳುಗಳು ಗೋಣಿಕೊಪ್ಪಲು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೂ ಯಾವೋಬ್ಬ ಪೊಲೀಸರು ಬಂದು ಪ್ರಕರಣವನ್ನು ದಾಖಲಿಸದಿರುವದು ದುರದೃಷ್ಟಕರ; ನಂತರ ಮಾಧ್ಯಮದವರಿಗೆ ಮಾಹಿತಿ ದೊರೆತ ನಂತರÀÀ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದ ಬಳಿಕ ಬಂದು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.