ಸೋಮವಾರಪೇಟೆ, ಜೂ. 19: ಶನಿವಾರಸಂತೆ ಸಮೀಪದ ಗೋಪಾಲಪುರದಲ್ಲಿ ನಿರ್ಮಾಣವಾಗಿರುವ ಸಂತ ಅಂತೋಣಿಯವರ ದೇವಾಲಯದ ಖರ್ಚು ವೆಚ್ಚಗಳ ಲೆಕ್ಕಪತ್ರವನ್ನು ತಕ್ಷಣ ಮಂಡಿಸಬೇಕೆಂದು ಸಲಹಾ ಸಮಿತಿ ಸದಸ್ಯ ವಿನ್ಸೆಂಟ್ ಲೋಬೋ ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯಕ್ಕೆ ಸುಮಾರು ರೂ. 1 ಕೋಟಿಗೂ ಅಧಿಕ ಖರ್ಚಾಗಿದ್ದು, ಚರ್ಚ್‍ನ ಭಕ್ತಾದಿಗಳು 65 ಲಕ್ಷ ರೂ. ನಷ್ಟು ಸಂಗ್ರಹ ಮಾಡಿದ್ದಾರೆ. ಸರ್ಕಾರದ ಅನುದಾನ 30 ಲಕ್ಷ ರೂ. ಸಿಕ್ಕಿದೆ. ಇದರೊಂದಿಗೆ ಇತರ ಮೂಲಗಳಿಂದಲೂ ಹಣ ಬಂದಿದ್ದು, ದೇವಾಲಯ ಉದ್ಘಾಟನೆಗೊಂಡು 6 ತಿಂಗಳು ಕಳೆದಿದೆ. ಆದರೆ ಇದುವರೆಗೂ ಲೆಕ್ಕಚಾರ ನೀಡಿಲ್ಲ. ಈ ಬಗ್ಗೆ ಕೇಳಿದರೆ ಉಡಾಫೆಯಿಂದ ವರ್ತಿಸುತ್ತಾರೆ ಎಂದು ದೂರಿದರು.

ಚರ್ಚ್‍ನ ಫಾದರ್ ಜಾನ್ ಸಗಾಯ್ ಪುಷ್ಪರಾಜ್ ಅವರು ಮುಂದಿನ ಹದಿನೈದು ದಿನಗಳ ಒಳಗೆ ಚರ್ಚ್‍ನ ಸರ್ವ ಸದಸ್ಯರ ಸಭೆಯನ್ನು ಕರೆದು ಲೆಕ್ಕಪತ್ರವನ್ನು ಮಂಡಿಸಬೇಕು. ತಪ್ಪಿದಲ್ಲಿ ಮೈಸೂರು ಧರ್ಮಾಧ್ಯಕ್ಷರಿಗೆ ದೂರು ನೀಡಲಾಗುವದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಗೋಪಾಲಪುರ ಚರ್ಚ್‍ನ ಸದಸ್ಯರಾದ ಲಿತೇಶ್ ಮೊಂತೆರೋ, ಮನೋಜ್ ಮೊಂತೆರೋ ಉಪಸ್ಥಿತರಿದ್ದರು.c