ಸೋಮವಾರಪೇಟೆ, ಡಿ.2: ತಾಲೂಕಿನ ಬಹುತೇಕ ಗ್ರಾಮೀಣ ಭಾಗದ ರಸ್ತೆಗಳು ದುಸ್ಥಿತಿಗೆ ತಲುಪಿದ್ದು, ಈ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಗಳಿಗೆ ಸರ್ಕಾರ ತಕ್ಷಣವೇ ವಿಶೇಷ ಪ್ಯಾಕೇಜ್ ಕಲ್ಪಿಸಬೇಕು ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ಆಗ್ರಹಿಸಿದರು.ತಾ. ಪಂ. ಸಂಯುಕ್ತ ಅನುದಾನ ದಲ್ಲಿ ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಕಾಮಗಾರಿಗಳಿಗೆ ತಾ.ಪಂ. ಸದಸ್ಯೆ ಕುಸುಮ ಅಶ್ವಥ್ ಅವರೊಂದಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಜೀವಿಜಯ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಅಭಿವೃದ್ಧಿ ಯೊಂದಿಗೆ ದೇಶದ ಅಭಿವೃದ್ಧಿಯನ್ನು ಕಾಣಬೇಕು. ಆದರೆ ನಮ್ಮನ್ನಾಳುವ ಸರ್ಕಾರಗಳು ಗ್ರಾಮ ಕಲ್ಯಾಣದ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂದು ಅಭಿಪ್ರಾಯಿಸಿದರು. ನಂದಿಗುಂದ ಗ್ರಾಮದ ಸಾರ್ವಜನಿಕರ ತೆರದ ಬಾವಿ ಸಮೀಪದ 1.15ಲಕ್ಷ ರೂ.ಗಳ ವೆಚ್ಚದ ತಡೆಗೋಡೆ ನಿರ್ಮಾಣದ ಕಾಮಗಾರಿ, ಕೂಗೂರು ಗ್ರಾಮದ ಒಳರಸ್ತೆ ಕಾಮಗಾರಿ, ಗೌಡಳ್ಳಿ ನವದುರ್ಗಾ ಪರಮೇಶ್ವರಿ ದೇವಾಲಯದ ಸುತ್ತ ಸಮತಟ್ಟು ಕಾಮಗಾರಿ, ಬೀಟಿಕಟ್ಟೆ ಹಾರಳ್ಳಿ ಒಳ ರಸ್ತೆ ದುರಸ್ತಿ, ಸುಳಿಮಳ್ತೆ ಕಾಲನಿ ರಸ್ತೆ ಕಾಮಗಾರಿ, ದೊಡ್ಡಮಳ್ತೆ ಸರ್ಕಾರಿ ಶಾಲೆಯ ಕಟ್ಟಡ ದುರಸ್ತಿ ಹಾಗು ಒಳಗುಂದ ಸ್ತ್ರೀಶಕ್ತಿ ಭವನದ ಮುಂದುವರಿದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭ ಗೌಡಳ್ಳಿ ಗ್ರಾ. ಪಂ. ಅಧ್ಯಕ್ಷ ಎಚ್.ಎಚ್. ಧರ್ಮಾಚಾರಿ, ಉಪಾಧ್ಯಕ್ಷೆ ರತ್ನಮ್ಮ, ನಂದಿಗುಂದ ಗ್ರಾಮ ಮಂಡಳಿ ಅಧ್ಯಕ್ಷ ಮೋಹನ್ ಧರ್ಮಪ್ಪ, ಗೌಡಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್, ಜೆಡಿಎಸ್ ವಕ್ತಾರ ಭರತ್, ದೊಡ್ಡಮಳ್ತೆ ಗ್ರಾ.ಪಂ. ಅಧ್ಯಕ್ಷ ದಿವಾಕರ್, ಪ್ರಮುಖರಾದ ಎಚ್.ಆರ್. ಸುರೇಶ್, ಕೆ.ಆರ್. ಕೊಮಾರಪ್ಪ, ಕೆ.ಎಸ್. ಮೋಹನ್, ಎಚ್.ಪಿ. ರಾಜಪ್ಪ, ಮಮತ ಅಶೋಕ್, ಗಿರಿಜನರ ಸೋಮಕ್ಕ, ವಿನಯ್, ಹೊನವಳ್ಳಿ ಸುಮಾ, ಎಚ್.ಆರ್. ಮುತ್ತಣ್ಣ, ಹೆಗ್ಗಳ ಹೂವಯ್ಯ, ಗೌಡಳ್ಳಿ ಮಹೇಶ್, ಕೆ.ಎಸ್. ರಾಜಪ್ಪ ಮತ್ತಿತರರು ಇದ್ದರು.