ಶ್ರೀಮಂಗಲ, ಆ.10: ಗ್ರಾಮೀಣ ಕ್ರೀಡಾಕೂಟದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟಕ್ಕೆ ಕ್ರೀಡಾ ಪ್ರತಿಭೆಗಳನ್ನು ಆಯ್ಕೆ ಮಾಡಬೇಕು. ಗ್ರಾಮೀಣ ಕ್ರೀಡಾಕೂಟ ನೈಜ ಕ್ರೀಡಾಪ್ರತಿಭೆಗಳನ್ನು ಬೆಳಕಿಗೆ ತರುವ ವೇದಿಕೆಯಾಗಬೇಕು. ಬೇರೆ ದೇಶದಲ್ಲಿ ಗ್ರಾಮೀಣ ಮಟ್ಟದಿಂದಲೇ ಕ್ರೀಡಾಪ್ರತಿಭೆಗಳನ್ನು ಆಯ್ಕೆ ಮಾಡಿ ಹಂತ ಹಂತವಾಗಿ ಅಂತರ್ರಾಷ್ಟ್ರೀಯ ಮಟ್ಟದವರೆಗೆ ಆಯ್ಕೆ ಮಾಡುವ ನಿಯಮವಿದೆ. ನಮ್ಮ ದೇಶದಲ್ಲೂ ಸಹ ಈ ನಿಯಮವನ್ನು ಅಳವಡಿಸಿಕೊಂಡರೆ ಉತ್ತಮ ಕ್ರೀಡಾಪಟುವನ್ನು ಆಯ್ಕೆ ಮಾಡಲು ಸಾಧ್ಯವಿದೆ ಎಂದು ಅಂತರ್ರಾಷ್ಟ್ರೀಯ ವಯಸ್ಕರ ಓಟದಲ್ಲಿ ಚಿನ್ನದ ಪದಕ ವಿಜೇತ ಹಿರಿಯ ಕ್ರೀಡಾಪಟು ಪೆಮ್ಮಂಡ ಅಪ್ಪಯ್ಯ ಅಭಿಪ್ರಾಯ ಪಟ್ಟರು. ಶ್ರೀಮಂಗಲ ಸಮೀಪ ಕುಮಟೂರು ಕೊಡವ ರಿಕ್ರಿಯೇಷನ್ ಕ್ಲಬ್‍ನ ಆಶ್ರಯದಲ್ಲಿ ಕೋಟ್ರಂಗಡ ಸುಬ್ರಮಣಿ ಹಾಗೂ ಕೊಟ್ರಂಗಡ ಮನುಸೋಮಯ್ಯ ಅವರ ಗದ್ದೆಯಲ್ಲಿ ನಡೆದ ಪ್ರಥಮ ವರ್ಷದ ಕೆಸರು ಗದ್ದೆ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮುಂದುವರೆದು ಮಾತನಾಡಿದ ಗ್ರಾಮೀಣ ಕ್ರೀಡಾಕೂಟದಲ್ಲಿ ನಿಜವಾದ ಕ್ರೀಡಾಪ್ರತಿಭೆಗಳನ್ನು ಆಯ್ಕೆ ಮಾಡಲು ಸಾಧ್ಯವಿದೆ. ಬೇರೆ ದೇಶಗಳಲ್ಲಿ ಈ ನಿಯಮದಂತೆ ಆಯ್ಕೆ ನಡೆಯುವದರಿಂದ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಹೆಚ್ಚಿನ ಯಶಸ್ಸು ಉಳಿಸಲು ಅಂತಹ ದೇಶದ ಕ್ರೀಡಾಪಟುಗಳಿಗೆ ಸಾಧ್ಯವಾಗಿದೆ. ಭಾರತದಂತಹ ದೇಶದಲ್ಲಿ ರಾಜಕೀಯ ಲಾಭಿ, ಹಣಬಲ ಮತ್ತು ಜಾತಿ ಬಲದಿಂದ ಕ್ರೀಡಾಕೂಟಕ್ಕೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಬಹುಕಡೆ ನೈಜ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ವಂಚಿಸಿದಂತಾಗುತ್ತದೆಂದು ಎಂದು ವಿಷಾದಿಸಿದರು.
ಜೆ.ಸಿ.ವಿದ್ಯಾಸಂಸ್ಥೆಯ ಅಧ್ಯಕ್ಷ ಕೋಟ್ರಂಗಡ ಸುಬ್ರಮಣಿ ಮಾತನಾಡಿ, ಇದೇ ಮೊದಲ ಬಾರಿಗೆ ಕಾಕೂರುವಿನಲ್ಲಿ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಅದರಲ್ಲೂ ಮುಖ್ಯವಾಗಿ ಶಾಲಾ ಮಕ್ಕಳಿಗೆ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಉತ್ತೇಜನ ನೀಡಲು ಈ ಮೂಲಕ ಗ್ರಾಮೀಣ ಕ್ರೀಡಾಪ್ರತಿಭೆಗಳನ್ನು ಬೆಳಕಿಗೆ ತರಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಚನ್ನಾಗಿ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಕುಮಟೂರು ಕೊಡವ ರಿಕ್ರಿಯೇಷನ್ ಅಧ್ಯಕ್ಷ ಕೋಟ್ರಂಗಡ ಅರುಣ ಅಧ್ಯಕ್ಷತೆ ವಹಿಸಿದ್ದರು.
ಕ್ರೀಡಾಕೂಟದ ವಿಜೇತರು
ಹಗ್ಗ-ಜಗ್ಗಾಟ: (ಪುರುಷರು) ಪ್ರಥಮ ನೆಮ್ಮಲೆ ಗ್ರಾಮದ ಮಾನಸ ಯುವಕ ಸಂಘ, ದ್ವಿತೀಯ ಕುಮಟೂರು ಗ್ರಾಮದ ಕಿಂಗ್ಸ್ ತಂಡ, (ಮಹಿಳೆಯರು) ಪ್ರಥಮ ಶ್ರೀಮಂಗಲ ಜೂನಿಯರ್ ಕಾಲೇಜು ತಂಡ, ದ್ವಿತೀಯ ಕುಮಟೂರು ಜೇಸಿ ಪ್ರೌಢಶಾಲೆ ತಂಡ.
ವಾಲಿಬಾಲ್ : ಪ್ರಥಮ ಕುಟ್ಟದ ಸ್ಮಾಮೇಶ್ ತಂಡ, ದ್ವಿತೀಯ ಜೂನಿಯರ್ ಕಾಲೇಜು ತಂಡ, ಆಟೋಟ ಸ್ಪರ್ಧೆ ಪ್ರೌಢಶಾಲೆ ವಿಭಾಗ: ಬಾಲಕರು ಪ್ರಥಮ ರಕ್ಷಿತ್, ಗಣಪತಿ (ಕುಮಟೂರು ಜೇಸಿ ಪ್ರೌಢಶಾಲೆ) ಬಾಲಕಿಯರು ಪ್ರಥಮ ರಶ್ಮಿ, ದ್ವಿತೀಯ ನಿತ್ಯ (ಕುಮಟೂರು ಜೇಸಿ ಪ್ರೌಢ ಶಾಲೆ) ಪ್ರಾಥಮಿಕ ಶಾಲೆ ವಿಭಾಗ: ಬಾಲಕರು ಪ್ರಥಮ ವೈ.ಸಿ.ರವಿ, ದ್ವಿತೀಯ ಪಿ.ಟಿ. ಮನು, (ಸರಕಾರಿ ಶಾಲೆ ಮಂಚಳ್ಳಿ). ತೃತೀಯ ಸಿ. ಜಿ.ಪೂಣಚ್ಚ (ಜೆ.ಸಿ.ಶಾಲೆ ಶ್ರೀಮಂಗಲ). ಬಾಲಕಿಯರು: ಪ್ರಥಮ ಕವಿತ ಮಂಚಳ್ಳಿ ಶಾಲೆ, ದ್ವಿತೀಯ ತೇಜ ಜೆ.ಸಿ. ಶಾಲೆ, ತೃತೀಯ ಚೀತೆ ಮಂಚಳ್ಳಿ ಶಾಲೆ. ವಾಲಿಬಾಲ್ ಪ್ರೌಢಶಾಲೆ ವಿಭಾಗ: ಬಾಲಕರು ಪ್ರಥಮ ಜೆ.ಸಿ. ಪ್ರೌಢಶಾಲೆ ಕುಮಟೂರು. ದ್ವಿತೀಯ ಶ್ರೀಮಂಗಲ ಪ್ರೌಢಶಾಲೆ. ಬಾಲಕಿಯರು ಪ್ರಥಮ ಜೆ.ಸಿ.ಪ್ರೌಢಶಾಲೆ ಕುಮಟೂರು. ದ್ವಿತೀಯ ಶ್ರೀಮಂಗಲ ಪ್ರೌಢಶಾಲೆ. ಆಟೋಟ ಸ್ಪರ್ಧೆ ಸಾರ್ವಜನಿಕರ ವಿಭಾಗ: (ಪುರುಷರು) ಪ್ರಥಮ ಚಂದ್ರಶೇಖರ್, ದ್ವಿತೀಯ ಮಹಮ್ಮದ್ ಸಕೀರ, ತೃತೀಯ ವಿಷ್ಣು. ಮಹಿಳೆಯರ ವಿಭಾಗ: ಪ್ರಥಮ ಎಂ.ಕೆ.ತುಳಸಿ, ದ್ವಿತೀಯ ಕೆ.ಆರ್. ಪ್ರಮೀಳಾ, ತೃತೀಯ ಎಂ.ಸಿ. ಪ್ರೀತು. ಪದವಿ ಪೂರ್ವ ವಿದ್ಯಾರ್ಥಿಗಳ ವಿಭಾಗ: ಪ್ರಥಮ ನಿರನ್, ದ್ವಿತೀಯ ಪಿ.ಕೆ. ಶಿವು (ಶ್ರೀಮಂಗಲ ಪಿ.ಯು. ಕಾಲೇಜು) ಪದವಿ ಪೂರ್ವ ವಿದ್ಯಾರ್ಥಿನಿಯರ ವಿಭಾಗ: ಪ್ರಥಮ ಸಾವಿತ್ರಿ, ದ್ವಿತೀಯ ದರ್ಶಿನಿ, (ಶ್ರೀಮಂಗಲ ಪಿ.ಯು.ಕಾಲೇಜು)
ಕ್ರೀಡಾಕೂಟದಲ್ಲಿ ಕೋಟ್ರಂಗಡ ತಿಮ್ಮಯ್ಯ, ಬೋಡಂಗಡ ಅಯ್ಯಪ್ಪ, ಮಾದೀರ ಸುದೀಪ್ ಮಂತ್ರಂಡ ಶರತ್, ಕೋಟ್ರಂಗಡ ವಿನೇಶ್, ಕೋಟ್ರಂಗಡ ನಿತೇಶ್, ಪ್ರಸನ್ನ , ಸೂರಜ್, ಚೊಕೀರ ಹ್ಯಾರಿ ನಿರೂಪಿಸಿದರು.