ಮೂರ್ನಾಡು, ಆ.21 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂರ್ನಾಡು ಮತ್ತು ಹೊದ್ದೂರು ಒಕ್ಕೂಟ ಪದಗ್ರಹಣ ಕಾರ್ಯಕ್ರಮ ಕೊಡವ ಸಮಾಜದಲ್ಲಿ ನಡೆಯಿತು.

ವೀರಾಜಪೇಟೆ, ಮಡಿಕೇರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮೂರ್ನಾಡು, ಹೊದ್ದೂರು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಮೂರ್ನಾಡು ಓಂಕಾರ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ಆಯೋಜಿಸಲಾದ ಒಕ್ಕೂಟ ಪದಗ್ರಹಣ ಸಮಾರಂಭವನ್ನು ಮೂರ್ನಾಡು ಪೊಲೀಸ್ ಉಪಠಾಣೆ ಸಬ್‍ಇನ್ಸ್‍ಪೆಕ್ಟರ್ ಮೋಹನ್ ಸುಕುಮಾರ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ಕಾರ್ಯ ನಿರ್ವಹಿಸಿಕೊಂಡು ಸಾಗುತ್ತಿದೆ. ಯೋಜನೆಡಿಯಲ್ಲಿ ಅನೇಕ ಸೌಲಭ್ಯಗಳು ದೊರಕುತ್ತಿದ್ದು, ಕುಟುಂಬಗಳು ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ ಎಂದರು.

ಕಾಂತೂರು - ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ವೀರಾಜಪೇಟೆ ಯೋಜನಾಧಿಕಾರಿ ಬಿ. ವಸಂತ್, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚನ ದಿನೇಶ್, ಕ.ಸಾ.ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಮೇಚಿರ ಸುಭಾಷ್ ನಾಣಯ್ಯ, ಮೂರ್ನಾಡು ಕೊಡವ ಸಮಾಜ ಅಧ್ಯಕ್ಷ ಅಜಯ್‍ಕುಮಾರ್, ಬಾಡಗ ಕೃಷಿಕ ರವಿ ಚೀಯಣ್ಣ, ಜ್ಞಾನ ಜ್ಯೋತಿ ವಿದ್ಯಾಸಂಸ್ಥೆ ದೈಹಿಕ ಶಿಕ್ಷಕ ಗುಲ್ಸನ್ ಇನ್ನಿತರರು ಉಪಸ್ಥಿತರಿದ್ದರು.

ಮೂರ್ನಾಡು ಎ ಒಕ್ಕೂಟ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷ ಅಜಿತ್, ಕಾರ್ಯದರ್ಶಿ ವೇಣು, ಸಹಕಾರ್ಯದರ್ಶಿ ರೊಸ್ಲಿ, ಕೋಶಾಧಿಕಾರಿ ಜಮುನ, ಮೂರ್ನಾಡು ಬಿ ಒಕ್ಕೂಟ ಅಧ್ಯಕ್ಷೆ ರಾಜೇಶ್ವರಿ ಶಿವಾನಂದ, ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ಸ್ವಾತಿ, ಸಹಕಾರ್ಯದರ್ಶಿ ದಮಯಂತಿ, ಕೋಶಾಧಿಕಾರಿ ಅಕ್ಕಮ್ಮ ಅಧಿಕಾರ ಸ್ವೀಕರಿಸಿದರು.

ಹೊದ್ದೂರು ಎ ಒಕ್ಕೂಟ ಅಧ್ಯಕ್ಷೆ ತೆಕ್ಕಡೆ ರಾಜೇಶ್ವರಿ, ಉಪಾಧ್ಯಕ್ಷ ಲೋಕೇಶ್, ಕಾರ್ಯದರ್ಶಿ ರಮೇಶ್, ಸಹಕಾರ್ಯದರ್ಶಿ ಇಂದಿರಾ, ಕೋಶಾಧಿಕಾರಿ ಉಮೇಶ್, ಹೊದ್ದೂರು ಬಿ ಒಕ್ಕೂಟ ಅಧ್ಯಕ್ಷೆ ಉಷಾ, ಉಪಾಧ್ಯಕ್ಷೆ ಸರಸ್ವತಿ, ಕಾರ್ಯದರ್ಶಿ ಪದ್ಮಾವತಿ, ಸಹಕಾರ್ಯದರ್ಶಿ ಪಿ.ಯು. ಸುರೇಶ್, ಕೋಶಾಧಿಕಾರಿ ರಾಧಾ ಅಧಿಕಾರ ಸ್ವೀಕರಿಸಿದರು. ಸಮಾರಂಭಕ್ಕೂ ಮುನ್ನ ಶ್ರೀ ಅಯ್ಯಪ್ಪ ದೇವಾಲಯದ ಬಳಿಯಿಂದ ಪಟ್ಟಣದ ಮುಖ್ಯ ಬೀದಿಯಲ್ಲಿ ಸ್ವಸಹಾಯ ಸಂಘದ ಪದಾಧಿಕಾರಿಗಳ ಮೆರವಣಿಗೆ ನಡೆಯಿತು.

ಮೂರ್ನಾಡು ಸೇವಾ ಪ್ರತಿನಿಧಿ ಶಿವಾನಂದ ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಪೂರ್ಣಿಮ ಕಾರ್ಯಕ್ರಮ ನಿರೂಪಿಸಿ, ಹೊದ್ದೂರು ಸೇವಾ ಪ್ರತಿನಿಧಿ ಮಮ್ತಾಜ್ ವಂದಿಸಿದರು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.