ಒಡೆಯನಪುರ, ಜ. 29: ವಿದ್ಯಾರ್ಥಿಗಳು ತನ್ನ ಭವಿಷ್ಯದ ಬಗ್ಗೆ ನಕರಾತ್ಮಕ ಚಿಂತನೆಯನ್ನು ಬಿಟ್ಟು ತಮ್ಮಲ್ಲಿ ಹುದುಗಿರುವ ಪ್ರತಿಭೆಗಳನ್ನೇ ಬಂಡವಾಳ ಮಾಡಿಕೊಂಡು ತನ್ನ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಮೈಸೂರು ಜೆಎಸ್‍ಎಸ್ ಕಾನೂನು ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಎಸ್. ಸುರೇಶ್ ಅಭಿಪ್ರಾಯ ಪಟ್ಟರು.ಸಮೀಪದ ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪದವಿಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಾಸನ ಲೆಕ್ಕಪರಿ ಶೋಧಕ ಡಿ.ಎಂ. ಜಲೇಂದ್ರ, ವಿದ್ಯಾರ್ಥಿಗಳು ತನ್ನ ದೃಷ್ಟಿಕೋನವನ್ನು ಬದಲಾಯಿಸಿ ಕೊಂಡರೆ ಗುರಿ ಮುಟ್ಟುವ ಹಾದಿ ಸುಲಭವಾಗುತ್ತದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಲ್ಲಿರುವಾಗಲೇ ಆಶಾವಾದಿ ಗಳಾಗಬೇಕು. ತನ್ನ ಭವಿಷ್ಯವನ್ನು ತಾನೆ ರೂಪಿಸಿ ಕೊಳ್ಳುವಷ್ಟು ಪ್ರೌಢರಾಗಿ ಬೆಳೆಯಬೇಕೆಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾಸಂಸ್ಥೆ ಅಧ್ಯಕ್ಷ ಹೆಚ್.ಎಸ್. ಚಂದ್ರಮೌಳಿ, ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಪಣತೊಡಬೇಕು. ವಿದ್ಯಾರ್ಥಿಗಳು ತಾನು ಕಲಿಯುತ್ತಿರುವ ಶಿಕ್ಷಣ ಸಂಸ್ಥೆ, ಉಪನ್ಯಾಸಕರುಗಳ ಬಗ್ಗೆ ಗೌರವವನ್ನಿಟ್ಟುಕೊಳ್ಳಬೇಕು ಎಂದರು.

ಈ ಸಂದರ್ಭ ವಿದ್ಯಾಸಂಸ್ಥೆ ವತಿಯಿಂದ ನೂತನವಾಗಿ ಸ್ಥಾಪಿಸಿರುವ ಕಂಪ್ಯೂಟರ್ ಲ್ಯಾಬ್ ಅನ್ನು ವಿದ್ಯಾಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದು ಇತ್ತೀಚೆಗೆ ನಿಧನರಾದ ದಿ. ಹೆಚ್.ಎಸ್. ಗಿರೀಶ್ ಅವರ ಪತ್ನಿ ಹೆಚ್.ಜಿ. ಸುಲೋಚನ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಗೌರವಾಧ್ಯಕ್ಷ ಎಸ್.ಎಸ್. ನಾಗರಾಜು, ಉಪಾಧ್ಯಕ್ಷ ಸಿ.ವಿ. ಶಂಭುಲಿಂಗಪ್ಪ, ಕಾರ್ಯದರ್ಶಿ ಕೆ.ಎಸ್. ಪರಮೇಶ್, ಖಜಾಂಚಿ ಡಾ. ಸಿ.ಆರ್. ಉದಯ್ ಕುಮಾರ್, ಸಿ.ಟಿ. ನಾಗರಾಜ್, ಕೆ.ಬಿ. ನಾಗರಾಜು, ಯು.ವಿ. ಶಿವಪ್ರಸಾದ್, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಂ.ಆರ್. ನಿರಂಜನ್, ಪ.ಪೂ. ಕಾಲೇಜಿನ ಪ್ರಾಂಶುಪಾಲ ಶಶಿಭೂಷಣ್ ಮುಂತಾದವರು ಹಾಜರಿದ್ದರು. ನಂತರ ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಮತ್ತು ಪ.ಪೂ. ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿ ನಿಯರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.

- ವಿ.ಸಿ. ಸುರೇಶ್ ಒಡೆಯನಪುರ