*ಗೋಣಿಕೊಪ್ಪ, ಅ. 6: ಶ್ರಿ ಕಾವೇರಿ ದಸರಾ ಸಮಿತಿ ವತಿಯಿಂದ 3ನೇ ವರ್ಷದ ಮಹಿಳಾ ದಸರಾ ಉತ್ಸವ ಇಂದು (ಶುಕ್ರವಾರ) ಕಾವೇರಿ ಕಲಾ ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಬೆಳಿಗ್ಗೆ 9.30 ಗಂಟೆಗೆ ಪಾಲಿಬೆಟ್ಟ ರಸ್ತೆಯ ತಿರುವಿನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಳಸದೊಂದಿಗೆ ಮಹಿಳೆಯರು ಗೋಣಿಕೊಪ್ಪಲಿನ ರಾಜಬೀದಿಯಲ್ಲಿ ಮೆರವಣಿಗೆ ಹೊರಟು ಉಮಾಮಹೇಶ್ವರಿ ದೇವಸ್ಥಾನದ ಹತ್ತಿರದ ರಸ್ತೆಯಲ್ಲಿ ಸಾಗಿ ಮೈದಾನದಲ್ಲಿ ನಿರ್ಮಿಸಲಾದ ಕಾವೇರಿ ದಸರಾ ಸಮಿತಿಯ ಕಲಾ ವೇದಿಕೆ ಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕ್ರೀಡಾಕೂಟವನ್ನು ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮವನ್ನು ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಲಿದ್ದು ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಮಂಡೇಪಂಡ ಸುನಿಲ್ ಸುಬ್ರಮಣಿ, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ತಾ.ಪಂ. ಸದಸ್ಯ ಜಯಾ ಪೂವಯ್ಯ, ದಸರಾ ಸಮಿತಿ ಕಾರ್ಯಧ್ಯಕ್ಷ ಕೆ.ಪಿ. ಬೋಪಣ್ಣ, ರಾಜ್ಯ ಬಿ.ಜೆ.ಪಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ಜಿ.ಪಂ. ಮಾಜಿ ಅಧ್ಯಕ್ಷೆ ಶರೀನ್ ಸುಬ್ಬಯ್ಯ, ಮಾಜಿ ಸಚಿವೆ ಸುಮಾವಸಂತ್, ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ಜಿಲ್ಲಾ ಬಿ.ಜೆ.ಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ ಚಂಗಪ್ಪ, ಮಹಿಳಾ ದಸರಾ ಗೌರವಾಧ್ಯಕ್ಷೆ ಸುಮಿ ಸುಬ್ಬಯ್ಯ, ಕಾರ್ಯಧ್ಯಕ್ಷೆ ಕೊಣಿಯಂಡ ಬೋಜಮ್ಮ, ಉಪಾಧ್ಯಕ್ಷೆ ರತಿ ಅಚ್ಚಪ್ಪ, ಪ್ರಧಾನ ಕಾರ್ಯದರ್ಶಿ ರಾಣಿ ನಾರಾಯಣ್ ಉಪಸ್ಥಿತರಿರುವರು.
ಸಾಂಸ್ಕøತಿಕ ಸ್ಪರ್ಧೆಯಲ್ಲಿ ಫ್ಯಾನ್ಸಿ ಡ್ರೆಸ್, ಪಿಕ್ ಅಂಡ್ ಆಕ್ಟ್, ಮ್ಯೂಸಿಕ್ ಅಂಡ್ ಆಕ್ಟ್, 6 ಸೀರೆಗಳ ಲಕ್ಕಿಡಿಪ್ ಹಾಗೂ ಸೀರೆಗಳ ನಿಖರ ಬೆಲೆ ಸೇರಿದಂತೆ ವಾಲಗತ್ತಾಟ್ ಪೈಪೋಟಿ
ಮೈದಾನದಲ್ಲಿ ಹಗ್ಗಜಗ್ಗಾಟ, ಲೆಮನ್ ಅಂಡ್ ಸ್ಪೂನ್, ಬಕೆಟ್‍ಗೆ ಚೆಂಡು ಹಾಕುವ ಸ್ಪರ್ಧೆ, ಬಾಂಬಿಂಗ್ ದ ಸಿಟಿ, ಭಾರದ ಗುಂಡು ಎಸೆತ. ಪಾಸಿಂಗ್ ಬಾಲ್ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿದೆ.