ಗೋಣಿಕೊಪ್ಪಲು,ಡಿ.3: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ.5ರಂದು 13ನೇ ವರ್ಷದ ರಾಜ್ಯ ಮಟ್ಟದ ಶ್ವಾನ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸಾಜು ಜಾರ್ಜ್ ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆ ನೆರವೇರಿಸಲಿದ್ದಾರೆ.ಕೊಡಗು ಕೆನ್ನಲ್ ಕ್ಲಬ್, ಪಾಲಿಬೆಟ್ಟ ಮತ್ತು ಕರ್ನಾಟಕ ಪಶುವೈದ್ಯರ ಸಂಘ, ಕೊಡಗು ಘಟಕ ಹಾಗೂ ಗೋಣಿಕೊಪ್ಪಲು ಕೆವಿಕೆ ಸಂಯುಕ್ತ ಆಶ್ರಯದಲ್ಲಿ ಶ್ವಾನ ಪ್ರದರ್ಶನವು ಕ್ಲಬ್ ಅಧ್ಯಕ್ಷ ಕೆ.ಎಂ.ಅಪ್ಪಯ್ಯ ಅಧ್ಯಕ್ಷತೆಯಲ್ಲಿ ಜರುಗಲಿದೆ.

ಜಡ್ಜಿಂಗ್ ರಿಂಗ್ ಅನ್ನು ಗೋಣಿಕೊಪ್ಪಲು ತಿರುಮಲ ಡ್ರೈವಿಂಗ್ ಸ್ಕೂಲ್ ಮಾಲೀಕ ಕುಪ್ಪಂಡ ಅಶೋಕ್ ಅಪ್ಪಣ್ಣ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಪಶುಪಾಲನೆ ಮತ್ತು ಪಶುವೈದ್ಯ ಸೇವೆಗಳು ಇಲಾಖೆಯ ಉಪ ನಿರ್ದೇಶಕ ಡಾ.ಸಿ.ನಾಗರಾಜ್ ಹಾಗೂ ಗೋಣಿಕೊಪ್ಪಲು ಪೆÇಲೀಸ್ ವೃತ್ತ ನಿರೀಕ್ಷಕ ಪಿ.ಕೆ.ರಾಜು ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವದಾಗಿ ಕೆನ್ನಲ್ ಕ್ಲಬ್ ಕಾರ್ಯದರ್ಶಿ ಡಾ.ಶಾಂತೇಶ್ ತಿಳಿಸಿದ್ದಾರೆ.

ರಾಜ್ಯದ ವಿವಿಧೆಡೆಯಿಂದ 300ಕ್ಕೂ ಅಧಿಕ ಶ್ವಾನಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು,20ಕ್ಕೂ ಅಧಿಕ ವಿವಿಧ ತಳಿಯ ಶ್ವಾನಗಳು ಪಾಲ್ಗೊಳ್ಳಲಿವೆ.

ಭಾಗವಹಿಸುವ ಎಲ್ಲ ಶ್ವಾನಗಳಿಗೂ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆಯನ್ನು ಹಾಕಲಾಗುವದು.

(ಮೊದಲ ಪುಟದಿಂದ) ಬೆಂಗಳೂರು ಕರುಣ ಪ್ರಾಣಿ ದಯಾ ಸಂಘದವರು ಪ್ರಾಯೋಜನೆ ಒದಗಿಸಿದ್ದಾರೆ.

ಶ್ವಾನ ಪ್ರದರ್ಶನವು ಮೈಸೂರು ಕೆನ್ನಲ್ ಕ್ಲಬ್ ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ನೆರವೇರಲಿದೆ. ಶ್ವಾನ ಪ್ರಿಯರಿಗೆ ಶ್ವಾನ ಪ್ರದರ್ಶನ ಸಂದರ್ಭ ಉತ್ತಮ ಶ್ವಾನ ಮರಿಗಳನ್ನು ಮಾರಾಟ ಮಾಡುವ ಮತ್ತು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

ಬೆಳಿಗ್ಗೆ 9 ಗಂಟೆಯಿಂದ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಶ್ವಾನಗಳ ಮಾಲೀಕರು ನೋಂದಾವಣೆ ಮಾಡಿಕೊಳ್ಳುವಂತೆ ಕೋರಲಾಗಿದೆ.

ಮಡಿಕೇರಿ ಪೆÇಲೀಸ್ ಶ್ವಾನದಳದಿಂದ ಅಪರಾಧ ಪತ್ತೆ ಪ್ರಾತ್ಯಕ್ಷಿಕೆ ಹಾಗೂ ವಿವಿಧ ಚಮತ್ಕಾರಗಳನ್ನು ಪ್ರದರ್ಶಿಸಲಾಗುತ್ತದೆ. ತೀರ್ಪುಗಾರರಾಗಿ ಮೈಸೂರು ಕೆನ್ನಲ್ ಕ್ಲಬ್‍ನ ಡಾ.ಡಿ.ಟಿ.ಜಯರಾಮಯ್ಯ ಹಾಗೂ ಶಸ್ತ್ರ ಚಿಕಿತ್ಸಕ ಡಾ.ಷಡಕ್ಷರ ಮೂರ್ತಿ ಕಾರ್ಯನಿರ್ವಹಿಸಲಿದ್ದಾರೆ.

ಅತ್ಯುತ್ತಮ ಪ್ರದರ್ಶನ ನೀಡಿದ ಶ್ವಾನ ಹಾಗೂ ಅತ್ಯುತ್ತಮ ತಳಿಗೆ ಬೆಂಗಳೂರಿನ ರಾಯಲ್ ಕ್ಯಾನನ್ ಇಂಡಿಯಾ ಪ್ರೈವೇಟ್ ಲಿ. ನವರು ಮೊದಲ 5 ಬಹುಮಾನ ಪ್ರಾಯೋಜಿಸಿದ್ದಾರೆ. ಜಡ್ಜಿಂಗ್ ರಿಂಗ್ ಅನ್ನು ಥೈಲಾಂಡ್‍ನ ಪರ್‍ಫೆಕ್ಟ್ ಕಂಪಾನಿಯನ್ ಗ್ರೂಪ್ ಪ್ರಾಯೋಜಿಸಿದೆ.