*ಗೋಣಿಕೊಪ್ಪಲು, ಜ. 18: ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಾಜ್ಞೆಯನ್ನು ಜಾರಿಗೊಳಿಸ ಲಾಗಿದೆ. ತಾ. 25 ರಿಂದ ಕಡ್ಡಾಯವಾಗಿ ಪರಿಸರ ಸಂರಕ್ಷಣಾ ಕಾಯ್ದೆ 1986ರ ಸೆಕ್ಷನ್ ಅಡಿಯಲ್ಲಿ ಪಂಚಾಯತಿ ಪ್ಲಾಸ್ಟಿಕ್ ಬಳಕೆಗೆ ನಿರ್ಬಂಧ ಹೇರಲಾಗಿದೆ ಎಂದು ಪಂಚಾಯತಿ ಅಭಿವೃದ್ದಿ ಅಧಿಕಾರಿ ಚಂದ್ರಮೌಳಿ ಮಾಹಿತಿ ನೀಡಿದ್ದಾರೆ.
ಪಂಚಾಯತಿ ಸಭಾಂಗಣದಲ್ಲಿ ಗ್ರಾ.ಪಂ ಅಧ್ಯಕ್ಷೆ ಸೆಲ್ವಿ ಸಮ್ಮುಖದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಸಾರ್ವಜನಿಕರು ಹಾಗೂ ವರ್ತಕರು ಪ್ಲಾಸ್ಟಿಕ್ ಬಳಸುವದನ್ನು ಮತ್ತು ಮಾರಾಟ ಮಾಡುವದನ್ನು ಕಂಡು ಬಂದಲ್ಲಿ ನಿದ್ರ್ರಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವದು. ಪ್ಲಾಸ್ಟಿಕ್ ತೋರಣ, ಪ್ಲಾಸ್ಟಿಕ್ ಬ್ಯಾಗ್, ಪ್ಲಾಸ್ಟಿಕ್ ತಟ್ಟೆ, ಲೋಟ, ಚಮಚ, ಭಿತ್ತಿ ಪತ್ರ, ಫ್ಲೆÉ್ಲಕ್ಸ್, ಪ್ಲಾಸ್ಟಿಕ್ ಬಾವುಟ ಇತರ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸ ಲಾಗಿದೆ. ತಾ. 25ರ ನಂತರ ಸಾರ್ವಜನಿಕರು ಹಾಗೂ ವರ್ತಕರು ಪ್ಲಾಸ್ಟಿಕ್ ಬಳಸಿದರೆ ಪರಿಸರ ಸಂರಕ್ಷಣಾ ಕಾಯ್ದೆ 1986ರ ಸೆಕ್ಷನ್ 19ರ ಅಡಿ ನಿಯಮ ಉಲ್ಲಂಘಿಸಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವದು. 5 ಸಾವಿರ ರೂ. ದಂಡ ವಿಧಿಸಲಾಗುವದು ಎಂದು ತಿಳಿಸಿದರು. ವರ್ತಕರ ಪರವಾನಗಿ ಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.
ಪಟ್ಟಣದ ಹಲವು ಭಾಗಗಳಲ್ಲಿ ಪರ ಊರಿನವರು ಕಸಗಳನ್ನು ತಂದು ಸುರಿಯುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಮಾಹಿತಿ ನೀಡಿ ಸುತ್ತಲಿನ ಪ್ರದೇಶಗಳಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಲಾಗುವುದು.
ತಾ. 23 ರಂದು ಪ್ಲಾಸ್ಟಿಕ್ ನಿಷೇಧ ಹಾಗೂ ಪರಿಸರ ಜಾಗೃತಿ ಬಗ್ಗೆ ಅರಿವು ಮೂಡಿಸಲು ಸಂಘ ಸಂಸ್ಥೆ, ಶಾಲಾ ಕಾಲೇಜುಗಳಿಂದ ಜಾಥಾ ನಡೆಸಲಾಗುವದು ಎಂದು ಸದಸ್ಯ ಬಿ.ಎನ್. ಪ್ರಕಾಶ್ ತಿಳಿಸಿದರು.
ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು ಗಂಭೀರ ಚಿಂತನೆ ನಡೆಸಿದ್ದು, ಒಂದು ತಿಂಗಳಿನ ಒಳಗೆ ಹಳ್ಳಿಗಟ್ಟು ಗ್ರಾಮದ ಗುರುತಿಸಿದ ಜಾಗದಲ್ಲಿ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವದು. ಸರಕಾರದಿಂದ ಕಾಮಗಾರಿಗೆ 20 ಲಕ್ಷ ಅನುದಾನ ನೀಡಲಾಗಿದೆ ಎಂದು ಸದಸ್ಯ ಕುಲ್ಲಚಂಡ ಬೋಪಣ್ಣ ತಿಳಿಸಿದರು.
ಗೋಷ್ಠಿಯಲ್ಲಿ ಸದಸ್ಯರುಗಳಾದ ಕುಲ್ಲಚಂಡ ಗಣಪತಿ, ಜೆ. ಸೋಮಣ್ಣ, ಸುರೇಶ್ ರೈ, ರತಿ ಅಚ್ಚಪ್ಪ, ಪ್ರಭಾವತಿ ಧ್ಯಾನ್ ಸುಬ್ಬಯ್ಯ, ಮಂಜುಳ, ಯಾಸ್ಮಿನ್, ಧನಲಕ್ಷ್ಮಿ, ಮುರುಗ ಉಪಸ್ಥಿತರಿದ್ದರು.