ಶನಿವಾರಸಂತೆ, ಅ. 16: ಶನಿವಾರಸಂತೆಸಂತೆ ಮಾರುಕಟ್ಟೆಯಲ್ಲಿ ಗೋ ಮಾಂಸ ಮಾರಾಟ ಮಾಡಲು ಬರುತ್ತಿದ್ದ ಮಾರುತಿ ಓಮಿನಿ ವ್ಯಾನ್ (ಕೆ.ಎ. 41. ಎಂ. 2367)ನ್ನು ಪೊಲೀಸರು ಪರಿಶೀಲಿಸಿ ಎರಡು ಗೋಣಿಚೀಲದಲ್ಲಿದ್ದ 70 ಕೆ.ಜಿ. ಗೋಮಾಂಸವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಶನಿವಾರಸಂತೆ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಅವರು, ಅರಕಲಗೂಡು ಸಾಲಗೇರಿಕೋಟೆಯ ಮಹಿಳೆ ಕಾವೇರಿ ಹಾಗೂ ಚಿಕ್ಕ ಬಂಡಾರ ಗ್ರಾಮದ ಸಣ್ಣಯ್ಯ ಅವರುಗಳನ್ನು ವಿಚಾರಿಸಿದಾಗ ವ್ಯಾನಿನ ಚಾಲಕ ರವಿ ಹಾಗೂ ನಾವುಗಳು ಯಾವದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಂತೆಯಲ್ಲಿ ಮಾರಾಟ ಮಾಡಲು ತರುತ್ತಿರುವದಾಗಿ ತಿಳಿಸಿದ ಮೇರೆ ಗೋ ಮಾಂಸ ಹಾಗೂ ವ್ಯಾನನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.