ಮಡಿಕೇರಿ, ಸೆ. 27: ಭಾರತೀಯ ಗೋ ತಳಿಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪರಮ ಪೂಜ್ಯ ಶ್ರೀ ಮಜ್ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ತಾ. 16 ರಿಂದ ಗೋ - ಕಿಂಕರ ಯಾತ್ರೆ ಆರಂಭ ಗೊಂಡಿದ್ದು, ತಾ. 2 ರಿಂದ 4ರವರೆಗೆ ಕೊಡಗು ಜಿಲ್ಲೆಯಲ್ಲಿ ಸಾಗಿ ಬರಲಿದೆ.ತಾ. 2 ರಂದು ಕೊಡಗು ಜಿಲ್ಲೆಗೆ ಬರಲಿರುವ ಯಾತ್ರೆಯನ್ನು ಅಂದು ಬೆಳಿಗ್ಗೆ 9 ಗಂಟೆಗೆ ಕೊಯನಾಡುವಿನಲ್ಲಿ ಸ್ವಾಗತ ಕೋರಿ ಜಿಲ್ಲೆಗೆ ಬರಮಾಡಿ ಕೊಳ್ಳಲಾಗುವದು. ಬಳಿಕ 11 ಗಂಟೆಗೆ ತಾಳತ್‍ಮನೆ ನೇತಾಜಿ ಯುವ ಮಂಡಲದಲ್ಲಿ ಸಭೆ ಆಯೋಜಿಸ ಲಾಗಿದೆ. 11.30 ಗಂಟೆಗೆ ಚೇರಂಬಾಣೆ ಯಲ್ಲಿ ಸಭೆ, ಮಧ್ಯಾಹ್ನ 12.45ಕ್ಕೆ ಭಾಗಮಂಡಲದಲ್ಲಿ ದೇವರ ದರ್ಶನ ಬಳಿಕ ಸಭೆ, 3.15ಕ್ಕೆ ಪಾಡಿ ಇಗ್ಗುತ್ತಪ್ಪ ದೇವಾಲಯ, 4.30ಕ್ಕೆ ಅರಮೇರಿ ಮಠದಲ್ಲಿ ಸಭೆ ನಡೆಯಲಿದೆ. ಬಳಿಕ ಅಲ್ಲಿಯೇ ವಸತಿ ಮಾಡಲಾಗುವದು.
ತಾ. 3 ರಂದು ಬೆಳಿಗ್ಗೆ 8 ಗಂಟೆಗೆ ವೀರಾಜಪೇಟೆ ಶ್ರೀ ಗಣಪತಿ ದೇವಾಲಯ ದೇವರ ದರ್ಶನ, ಮೆರವಣಿಗೆ, 9.30 ಗಂಟೆಗೆ ಪೊನ್ನಂಪೇಟೆ ಶ್ರೀ ರಾಮಕೃಷ್ಣಾಶ್ರಮ ಭೇಟಿ, ಸಭೆ, 11.30ಕ್ಕೆ ಗೋಣಿಕೊಪ್ಪಲು ಸಭೆ, 12.30ಕ್ಕೆ ಅಮ್ಮತ್ತಿಯಲ್ಲಿ ಸಭೆ, 3 ಗಂಟೆಗೆ ಸಿದ್ದಾಪುರದಲ್ಲಿ ಮೆರವಣಿಗೆ, 3.15ಕ್ಕೆ ನೆಲ್ಲಿಹುದಿಕೇರಿ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ಸಭೆ, 4.45ಕ್ಕೆ ಚೆಟ್ಟಳ್ಳಿಯಲ್ಲಿ ಸಭೆ, 6 ಗಂಟೆಗೆ ಮಡಿಕೇರಿಯ ಶ್ರೀ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪ, ಓಂಕಾರೇಶ್ವರ ದೇವಸ್ಥಾನ ಭೇಟಿ ಬಳಿಕ ವಸತಿ ಮಾಡಲಾಗುವದು.
ತಾ. 4 ರಂದು ಬೆಳಿಗ್ಗೆ ನಗರ ಪರ್ಯಟನೆ, ಶ್ರೀ ಕೋದಂಡ ರಾಮ ದೇವಸ್ಥಾನ, ಶ್ರೀ ಮುತ್ತಪ್ಪ ದೇವಸ್ಥಾನ ಭೇಟಿ, 10 ಗಂಟೆಗೆ ಸುಂಟಿಕೊಪ್ಪ ಶ್ರೀ ರಾಮ ದೇವಸ್ಥಾನದಲ್ಲಿ ಸಭೆ, 11 ಗಂಟೆಗೆ ಕುಶಾಲನಗರ ಶ್ರೀ ಮಾರಿಯಮ್ಮ ದೇವಸ್ಥಾನ ಭೇಟಿ, ಸಭೆ, ಮಧ್ಯಾಹ್ನ 3.30ಕ್ಕೆ ಬೇಳೂರು ಮಠದಲ್ಲಿ ಸಭೆ, 4.30ಕ್ಕೆ ಸೋಮವಾರಪೇಟೆಯಲ್ಲಿ ಸಭೆ, ಸಂಜೆ 6 ಗಂಟೆಗೆ ಶನಿವಾರಸಂತೆ , ಕೊಡ್ಲಿಪೇಟೆಗಳಲ್ಲಿ ಸಭೆ ಹಾಗೂ ವಾಸ್ತವ್ಯ ಹೂಡಲಾಗುವದು.