ಗುಡ್ಡೆಹೊಸೂರು, ಜ. 8: ಇಲ್ಲಿನ ನರೇನ್ ಸುಬ್ಬಯ್ಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾಮಟ್ಟದ ಲೀಗ್ ಫುಟ್ಬಾಲ್ ಪಂದ್ಯಾಟದ ಉದ್ಘಾಟನೆಯನ್ನು ಮೈದಾನದ ಸ್ಥಳ ದಾನಿ ಐಚೆಟ್ಟಿರ ಸೋಮಯ್ಯ ಮತ್ತು ಕಾಮಿಣಿ ಸೋಮಯ್ಯ ನೆರವೇರಿಸಿದರು.ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಮೋಹನ್ ಐಯ್ಯಣ್ಣ ಅವರು ಮಾತನಾಡಿ ತಮ್ಮ ಮಗನ ನೆನಪಿಗಾಗಿ ತಮ್ಮ 8 ಏಕರೆ ಪ್ರದೇಶದ ಜಾಗದಲ್ಲಿ ಹಗಲು-ರಾತ್ರಿ ಎನ್ನದೆ ಶ್ರಮವಹಿಸಿ ಕ್ರೀಡಾಂಗಣ ನಿರ್ಮಿಸಿರುವದಾಗಿ ಹೇಳಿದರು. ನರೇನ್ ಸೋದರ ರವಿ ಸೋಮಯ್ಯ ಹಾಜರಿದ್ದರು. ಪಂದ್ಯಾಟದಲ್ಲಿ ಒಟ್ಟು 13 ತಂಡಗಳು ಭಾಗವಹಿಸಿವೆ. ತೀರ್ಪುಗಾರರಾಗಿ ಈಶ್ವರ್, ಮೋಹನ್ ಹಾಗೂ ಜಾನ್ ಕಾರ್ಯನಿರ್ವಹಿಸಿದರು.

ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಸದಸ್ಯ ರತೀಶ್ ಕುಮಾರ್, ದೇಚಮ್ಮ ಅವರು ಭಾಗವಹಿಸಿದ್ದರು. ಪಂದ್ಯಾವಳಿ ತಾ. 15 ರವರೆಗೆ ನಡೆಯಲಿದೆ.

- ಕುಡೆಕ್ಕಲ್ ಗಣೇಶ್