ಶ್ರೀಮಂಗಲ, ಆ. 14: ಕರ್ನಾಟಕ -ಕೇರಳ ರಾಜ್ಯದÀ ಹಾಗೂ ಕೊಡಗು ಜಿಲ್ಲೆಯ ಗಡಿ ಪ್ರದೇಶವಾದ ಕುಟ್ಟ ಕೊಡವ ಸಮಾಜದಲ್ಲಿ, ಕೊಡವ ಸಮುದಾಯದ ಕಕ್ಕಡ ತಿಂಗಳ ವಿಶೇಷ ಆಚರಣೆಯಾದ ಕಕ್ಕಡ ನಮ್ಮೆಯನ್ನು ಸಡಗರ - ಸಂಭ್ರಮದಿಂದ ಆಚರಿಸಲಾಯಿತು.
ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಮುಂದಾಳತ್ವದಲ್ಲಿ ಆಯೋಜಿಸಲಾಗಿದ್ದ ಈ ಕಕ್ಕಡ ನಮ್ಮೆಯ ಉದ್ಘಾಟನೆಯನ್ನು ಫೆಡರೇಷನ್ ಆಫ್ ಕೊಡವ ಸಮಾeದ ಮಾಜಿ ಅಧ್ಯಕ್ಷ ಮಲ್ಲೇಂಗಡ ದಾದ ಬೆಳ್ಯಪ್ಪ ಅವರು ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಬಹಳ ಸಣ್ಣ ಪ್ರದೇಶವಾದ ಕೊಡಗಿನಲ್ಲಿ ಕೊಡವ ಜನಾಂಗ ತಮ್ಮದೇ ಆದ ವಿಶೇಷ ಸಂಸ್ಕøತಿಯನ್ನು ಹೊಂದಿದ್ದು, ತಮ್ಮ ವಿಶೇಷ ಸಂಸ್ಕøತಿಯಿಂದಲೇ ವಿಶ್ವಖ್ಯಾತಿ ಪಡೆದಿದ್ದಾರೆ. ಮಳೆಗಾಲದಲ್ಲಿ ಕಕ್ಕಡ (ಆಷಾಢ) ತಿಂಗಳಲ್ಲಿ ವಿಶೇಷ ಖಾದ್ಯ ಮದ್ದ್ಪುಟ್ಟ್ ಹಾಗೂ ಮದ್ದ್ ಪಾಯಸವು ಮಹತ್ವವನ್ನು ಪಡೆದುಕೊಳ್ಳುತ್ತದೆ. ಹಾಗೆಯೇ ಕೊಡವ ಸಂಸ್ಕøತಿಯಲ್ಲಿ ಮದುವೆ ಮುಂತಾದ ಸಮಾರಂಭಗಳಲ್ಲಿ ಇದೀಗ ಕೊಡವ ಸಾಂಪ್ರದಾಯಿಕ ಆಹಾರ ಪದ್ಧತಿ ಮಹತ್ವ ಕಳೆದುಕೊಳ್ಳುತ್ತಿದೆ. ಹಿಂದಿನ ಕಾಲದಲ್ಲಿ, ಕೊಡವ ಸಮಾರಂಭಗಳಲ್ಲಿ ನೆರೆಕರೆಯವರು ಹಾಗೂ ಬಂಧು ಮಿತ್ರರೇ ಸೇರಿ ಕೊಡವ ಸಾಂಪ್ರದಾಯಿಕ ಭಕ್ಷ್ಯ ಭೋಜನಗಳನ್ನು ತಯಾರಿಸು ತ್ತಿದ್ದರು. ಆದರೆ ಇದೀಗ ಎಲ್ಲವೂ ಕ್ಯಾಟರಿಂಗ್ ಹಿಡಿತಕ್ಕೆ ಒಳಪಟ್ಟು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿದೆ ಎಂದು ವಿಷಾದಿಸಿದರು.
ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಹಾಗು ಫೆಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷರೂ ಆಗಿರುವ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಮಾತನಾಡಿ, ಕೇರಳ -ಕರ್ನಾಟಕದ ಹಾಗೂ ಕೊಡಗು ಜಿಲ್ಲೆಯ ಗಡಿ ಪ್ರದೇಶವಾದ ಕುಟ್ಟದಲ್ಲಿ ಕೊಡವ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾಗಿ ಈ ಕೊಡವ ಸಮಾಜವು ಅಸ್ತಿತ್ವವನ್ನು ಪಡೆದಿದೆ. ಕೊಡವ ಸಮಾಜದ ಮೂಲಕ ಕೊಡವ ಸಮುದಾಯವು ಸಾಮೂಹಿಕವಾಗಿ ಸೇರಿ ಹಬ್ಬ ಹರಿದಿನಗಳ ಆಚರಣೆ ಹಾಗೂ ಸಂಸ್ಕøತಿ ಪ್ರತಿಬಿಂಬಿಸಲು ಈ ಸಂಸ್ಥೆಯು ವೇದಿಕೆಯಾಗಿರುವದು ಹೆಮ್ಮೆಯೆನಿಸಿದೆ ಎಂದು ಹೇಳಿದರು.
ಕೇಚಾಮಾಡ ಬೀನಾ ಉತ್ತಪ್ಪ, ಪೆಮ್ಮಣಮಾಡ ಸುನಿತಾ ಹಾಗೂ ತಂಡ ಪ್ರಾರ್ಥಿಸಿದರು. ಕಾರ್ಯಕ್ರಮ ದಲ್ಲಿ, ಕುಟ್ಟ ಕೊಡವ ಸಮಾಜದ ಉಪಾದ್ಯಕ್ಷ ಹೊಟ್ಟೆಂಗಡ ಎಂ. ರಮೇಶ್, ಪದಾಧಿಕಾರಿಗಳಾದ ಕೊಂಙಂಡ ಸುರೇಶ್ ದೇವಯ್ಯ, ತೀತಿರ ಮಂದಣ್ಣ, ಬಾಚರಣಿಯಂಡ ಪ್ರಕಾಶ್, ಚೆಪ್ಪುಡಿರ ಪಾರ್ಥ, ಮಚ್ಚಾಮಾಡ ಸುಬ್ರಮಣಿ, ಕೇಚಮಾಡ ವಾಸು ಉತ್ತಪ್ಪ, ತೀತಿರ ಕಭೀರ್ ತಿಮ್ಮಯ್ಯ, ಕೋಳೇರ ಲೀಲಾ ಅಪ್ಪಣ್ಣ, ಕೋದಂಡ ಲೀಲಾ ಕಾರ್ಯಪ್ಪ, ಮುಕ್ಕಾಟಿರ ರಾಜಾ ಮಂದಣ್ಣ, ಚಕ್ಕೇರ ರಾಬಿನ್ ಕಾರ್ಯಪ್ಪ ಹಾಗು ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ, ತಾ.ಪಂ. ಸದಸ್ಯ ಪೊಯಿಲಂಗಡ ಪಲ್ವಿನ್ ಪೂಣಚ್ಚ, ಜಿ.ಪಂ .ಮಾಜಿ ಅಧ್ಯಕ್ಷೆ ಚೋಡುಮಾಡ ಶರಿನ್ ಸುಬ್ಬಯ್ಯ, ಬಾಡಗ ಲೇಡಿಸ್ ಕ್ಲಬ್ ಅಧ್ಯಕ್ಷೆ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ಮಂಚಳ್ಳಿ ಭಾಂಧವ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಮಚ್ಚಾಮಾಡ ಪದ್ಮ ಸೋಮಯ್ಯ ಸೇರಿದಂತೆ ಸಾವಿರಾರು ಕೊಡವರು ಭಾಗವಹಿಸಿದ್ದರು.