ವೀರಾಜಪೇಟೆ, ಅ. 3: ವೀರಾಜಪೇಟೆಯಲ್ಲಿರುವ ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘದ ವತಿಯಿಂದ ಇಲ್ಲಿನ ಬಸ್ ನಿಲ್ದಾಣದಲ್ಲಿ 11ನೇ ವರ್ಷದ ಆಯುಧ ಪೂಜಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್.ಪಿ. ದಿನೇಶ್ ನಾಯರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿನೇಶ್ ಅವರು ಆಯುಧ ಪೂಜೆ ಪ್ರಯುಕ್ತ ತಾ: 9 ರಂದು ಪೂರ್ವಾಹ್ನ 10 ಗಂಟೆಗೆ ಮಲಬಾರ್ ರಸ್ತೆಯಲ್ಲಿರುವ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಅಧಿಕೃತ ವಿವಿಧ ಕಾರ್ಮಿಕ ಸಂಘಟನೆಗಳಿಗೆ ಹಗ್ಗಜಗ್ಗಾಟ ಪಂದ್ಯಾಟವನ್ನು ನಡೆಸಲಾಗುವದು. ತಾ. 10 ರಂದು ಪೂರ್ವಾಹ್ನ 10 ಗಂಟೆಗೆ ಸಂಘದ ವತಿಯಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ಸಾಮೂಹಿಕ ಆಯುಧ ಪೂಜೆ, ಅಪರಾಹ್ನ ಖಾಸಗಿ ಬಸ್ ಕಾರ್ಮಿಕರ ಸಂಘ ಮತ್ತು ಹಿಂದು ಅಗ್ನಿದಳದ ಸಂಯುಕ್ತ ಆಶ್ರಯದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಗೆ ಸ್ಥಳೀಯ ಕಲಾ ಪ್ರತಿಭೆಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ವೀರಾಜಪೇಟೆ ಡಿವೈಎಸ್ಪಿ ನಾಗಪ್ಪ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘದ ಮಾಜಿ ಅಧ್ಯಕ್ಷ ಬಿ.ಆರ್ ಗಣೇಶ್ ವಹಿಸಲಿದ್ದು, ಅತಿಥಿಗಳಾಗಿ ಮುಲ್ಲೆಂಗಡ ಅಶೋಕ್, ನಿವೃತ್ತ ಎಎಸ್‍ಐ ಎ.ಸಿ ಕುಶ ಭಾಗವಹಿಸಲಿರುವರು ಎಂದರು.

ಸಂಘದ ಕಾರ್ಯದರ್ಶಿ ಟಿ. ಎನ್. ಮಂಜುನಾಥ್ ಮಾತನಾಡಿ ರಾತ್ರಿ 7 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎನ್.ಪಿ ದಿನೇಶ್ ನಾಯರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಜಿಲ್ಲಾ ಜೆ.ಡಿ.ಎಸ್ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ, ಅತಿಥಿಗಳಾಗಿ ಕಾಫಿ ಬೆಳೆಗಾರ ಗುಡ್ಡಂಡ ಜಯ ಉತ್ತಪ್ಪ, ಗೋಣಿಕೊಪ್ಪದ ಅಮೃತ್ ಮೋಟಾರ್ಸ್‍ನ ಮಾಲೀಕ ಎನ್. ಆರ್ ರಾಜು, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸದಸ್ಯ ನಂಬುಡುಮಾಡ ಪವಿ ಪೂವಯ್ಯ, ಕೆ.ಕೆ ಗ್ರೂಪ್ ಮಾಲೀಕ ಕಾಳಪಂಡ ಜಗತ್ ಗಣೇಶ್, ಎಚ್.ಎಂ ಮೋಟಾರ್ಸ್‍ನ ಮಾಲೀಕ ಅಬುಬಕ್ಕರ್, ವೀರಾಜಪೇಟೆ ವರ್ತಕ ಸಿ.ಎ ಸಂಶುದ್ದಿನ್, ಕಾಫಿ ಬೆಳೆಗಾರ ಸೋಮೇಯಂಡ ಕುಶ ಪಾಲ್ಗೊಳ್ಳಲಿರುವರು. ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ ಹಾಗೂ ಅಂತರ್ರಾಷ್ಟ್ರೀಯ ಅಥ್ಲೆಟಿಕ್ ಜಾಜಿ, ಸಮಾಜ ಸೇವಕ ಟಿ.ಆರ್ ರಾಜು, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕೆ.ಬಿ ಭರತ್ ಅವರನ್ನು ಸನ್ಮಾನಿಸಲಾಗುವದು ಎಂದು ಸಂಘದ ಉಪಾಧ್ಯಕ್ಷ ನಾಗೇಶ್ ಹೇಳಿದರು. ಸಮಾರೋಪ ಸಮಾರಂಭದ ನಂತರ ದಕ್ಷಿಣ ಭಾರತದ ಖ್ಯಾತ ವಾದ್ಯಗೋಷ್ಠಿ ಮಂಗಳೂರಿನ ಮೆಲೋಡಿ ಮೇಕರ್ಸ್ ತಂಡದಿಂದ ಸಂಗೀತ ರಸ ಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.ಗೋಷ್ಠಿಯಲ್ಲಿ ಖಜಾಂಚಿ ಝೂಡಿವಾಜ್, ನಿರ್ದೇಶಕ ಲೋಕೆಶ್ ರೈ ಉಪಸ್ಥಿತರಿದ್ದರು.