ಸಿದ್ದಾಪುರ, ಜು. 23: ಪಾಲಿಬೆಟ್ಟ ಸಮೀಪ ಕ್ರೇಗ್‍ಮೊರ್ ಖಾಸಗಿ ತೋಟದ ವ್ಯವಸ್ಥಾಪಕರು ಕಾರ್ಮಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ತೋಟದ ಕಾರ್ಮಿಕರಿಂದ ಪ್ರತಿಭಟನೆ ನಡೆಯಿತು. ಕಳೆದ ಹಲವಾರು ವರ್ಷಗಳಿಂದ ಈ ತೋಟದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕ ರಾಮು ಎಂಬವರಿಗೆ ಇತ್ತೀಚೆಗೆ ಕೆಲಸದ ವೇಳೆ ವ್ಯವಸ್ಥಾಪಕರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆಗೆ ಯತ್ನಿಸಿರುವ ದಾಗಿ ರಾಮು ದೂರಿದ್ದಾರೆ. ತೋಟದಲ್ಲಿ ಹಲವರು ಕಾರ್ಮಿಕ ರಾಗಿ ದುಡಿಯುತ್ತಿದ್ದು,ಇತರ ಕಾರ್ಮಿಕರು ಸಹ ಇವರ ಬೈಗುಳಕ್ಕೆ ತುತ್ತಾಗಿದ್ದಾರೆ. ತಮ್ಮ ಕೆಲಸ ಕಳೆದು ಕೊಳ್ಳುವ ಭಯದಿಂದ ಮೌನವಾಗಿದ್ದು, ರಾಮುವಿನ ಮೇಲಿನ ದೌರ್ಜನ್ಯದ ವಿರುದ್ಧ ಅಂದಾಜು 35 ರಿಂದ 40 ಕಾರ್ಮಿಕರು ಸಿಐಟಿಯುವಿನ ಕಾರ್ಮಿಕ ಮುಖಂಡ ಮಹದೇವ್ ನೇತೃತ್ವದಲ್ಲಿ ತೋಟದಲ್ಲಿ ಕೆಲಸವನ್ನು ಸ್ಧಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಹದೇವ್ ಮಾತನಾಡಿ, ಕಾರ್ಮಿಕರಿಗೆ ತೋಟದಲ್ಲಿ ಯಾವದೆ ಮೂಲ ಸೌಕರ್ಯಗಳು ಸಿಗುತ್ತಿಲ. ಕಾರ್ಮಿಕರು ಸಿಐಟಿಯು ಸಂಘಟನೆ ಯಲ್ಲಿ ತೊಡಗಿಕೊಂಡಿ ರುವದರ ವಿಷಯ ಅರಿತ ತೋಟದ ವ್ಯವಸ್ಥಾಪಕರು ಅಸಮಾಧಾನ ಗೊಂಡಿದ್ದು, ಸಣ್ಣ ಪುಟ್ಟ ತಪ್ಪುಗಳಿಗೆ ವಿನಾ ಕಾರಣ ದುಡಿಯುವ ಕಾರ್ಮಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಮಹಿಳಾ ಕಾರ್ಮಿಕರ ಮೇಲೆ ಅವಾಚ್ಯ ಶಬ್ದದ ಬಳಕೆ ಮಾಡು ತ್ತಿದ್ದಾರೆ. ಕಾರ್ಮಿಕ ನ್ಯಾಯಾಲಯಕ್ಕೆ ಈ ಹಿಂದೆ ದೂರು ನೀಡಲಾಗಿದೆ. ಆದಷ್ಟು ಬೇಗ ಸಂಬಂದsÀಪಟ್ಟ ಅಧಿಕಾರಿಗಳು ಭೇಟಿ ನೀಡಿ ಕಾರ್ಮಿಕರ ಮೇಲಿನ ದೌರ್ಜನ್ಯದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ, ಇಂದಿನ ಮುಷ್ಕರ ಸಾಂಕೇತಿಕವಾಗಿದ್ದು, ನ್ಯಾಯ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳು ವದಾಗಿ ತಿಳಿಸಿದರು.

ಪ್ರತಿಭಟನೆಯ ವಿಷಯ ಅರಿತ ತೋಟದ ವ್ಯವಸ್ಥಾಪಕರು ದೂರವಾಣಿ ಯಲ್ಲಿ ಕಾರ್ಮಿಕ ಮುಖಂಡರನ್ನು ಸಂಪರ್ಕಿಸಿ ಕ್ಷಮೆ ಕೇಳಿರುವದಾಗಿ ಮಹದೇವ್ ತಿಳಿಸಿದರು.

ಪ್ರತಿಭಟನೆ ಸ್ಥಳಕ್ಕೆ ತೋಟದ ಮಾಲೀಕ ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿ ಕಾರ್ಮಿಕರನ್ನು ಸಮಾಧಾನ ಪಡಿಸಿದಲ್ಲದೆ. ಮಾಲೀಕರು ಕಾರ್ಮಿಕರಿಗೆ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ನೀಡುವದಾಗಿ ತಿಳಿಸಿದ ಮೇರೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡರು.

ಪ್ರತಿಭಟನೆಯಲ್ಲಿ ಕಾರ್ಮಿಕರಾದ ರಾಣಿ,ಮಂಜುಳ, ಸೈನಾ, ಶಾಂತಿ,ಪುಷ್ಪಾ,ಸಂಜೀವ,ಸರೋಜ ಸೇರಿದಂತೆ ಮತ್ತಿತರರು ಹಾಜರಿದ್ದರು.