ಮಡಿಕೇರಿ, ಅ. 6: ಮೂರ್ನಾಡು ಬಳಿಯ ಹೊದ್ದೂರು ವ್ಯಾಪ್ತಿಯ ಪಾಲೆಮಾಡುವಿವನಲ್ಲಿ ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ಸೇರಿದ ಜಾಗದಲ್ಲಿ ಕ್ರಿಕೆಟ್ ಸ್ಟೇಡಿಯಂ ಕಾಮಗಾರಿ ಆರಂಭಿಸಲಾಗಿದೆ. ಜಿಲ್ಲಾಡಳಿತ ನಿಗದಿಪಡಿಸಿದ ಜಾಗದಲ್ಲಿ ಜೆಸಿಬಿ ಮೂಲಕ ಕಾಮಗಾರಿ ನಡೆಯುತ್ತಿದೆ. 12.70 ಎಕರೆ ಜಾಗದಲ್ಲಿ 20 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣವಾಗಲಿದೆ. ಸರಕಾರ ಸಂಸ್ಥೆಗೆ ಜಾಗ ನೀಡಿದ್ದು, ಈ ಬಗ್ಗೆ ಕೆಲವರು ಗೊಂದಲ ಮೂಡಿಸುತ್ತಿರುವದಾಗಿ ಸಂಸ್ಥೆಯ ಸಂಯೋಜಕ ಚೇನಂಡ ಪ್ರಥ್ವಿ ದೇವಯ್ಯ ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ದೊರೆತಿರುವದಾಗಿ ಅವರು ತಿಳಿಸಿದ್ದಾರೆ.