ಮಡಿಕೇರಿ, ಅ. 24: ಐತಿಹಾಸಿಕ ಹಿನ್ನೆಲೆಯಿರುವ.., ಮಂಜಿನ ನಗರಿಯ ಮಕುಟ ಮಣಿಯಂತಿರುವ ರಾಜರ ಕೋಟೆ ಆವರಣದಲ್ಲಿ ಪುಷ್ಪ ಉದ್ಯಾನ ನಿರ್ಮಾಣದೊಂದಿಗೆ ಅಂದವನ್ನು ಹೆಚ್ಚಿಸುವ ಕಾರ್ಯ ನಡೆಯುತ್ತಿದೆ.

ಕೋಟೆಯ ಒಂದು ಬದಿಯಲ್ಲಿರುವ ಕಲ್ಲಿನ ಆನೆಗಳಿರುವ ಜಾಗದಲ್ಲಿ ಉದ್ಯಾನ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಬೇಲಿಯೊಂದಿಗೆ ಆಕರ್ಷಕ ಬಣ್ಣ-ಬಣ್ಣದ ಗಿಡಗಳು, ಹುಲ್ಲು ಹಾಸುಗಳು ರಾರಾಜಿಸಲಿವೆ. ಈ ಹಿಂದೆ ಈ ಪ್ರದೇಶದಲ್ಲಿ ಬಣ್ಣದ ಕಟ್ಟಿಂಗ್ಸ್ ಬೇಲಿಯೊಂದಿಗೆ ಹುಲ್ಲಿನ ಮೈದಾನದಂತ್ತಿತ್ತು. ಇದೀಗ ಬಣ್ಣದ ಗಿಡಗಳೊಂದಿಗೆ ಹುಲ್ಲಿನ ಹಾಸು ಅಳವಡಿಸಲಾಗುತ್ತಿದೆ.

ಮೇಲಧಿಕಾರಿಗಳ ಆದೇಶದಂತೆ ಈ ಕಾರ್ಯ ನಡೆಸುತ್ತಿರುವದಾಗಿ ಪ್ರಾಚ್ಯವಸ್ತು ಇಲಾಖೆ ಉಸ್ತುವಾರಿ ಬೊಳ್ತಂಡ ಶಿವಯ್ಯ ಅವರು ತಿಳಿಸಿ ದರು. ಕೋಟೆಯ ಆವರಣ ವನ್ನು ಸಂಪೂರ್ಣವಾಗಿ ಸಂರಕ್ಷಿಸಿ, ಅಂದವನ್ನು ಹೆಚ್ಚಿಸುವ ಕಾರ್ಯ ಮಾಡಬೇಕಾಗಿದೆ. ಆದರೆ ಕೋಟೆ ಸಂಪೂರ್ಣ ಸುಪರ್ದಿಗೆ ಬಾರದೆ ಏನನ್ನೂ ಮಾಡಲಾಗುವದಿಲ್ಲ ಎಂದು ಅವರು ಹೇಳಿದರು. -ಸಂತೋಷ್