ಮಡಿಕೇರಿ, ಮೇ 29: ಮಡಿಕೇರಿ ತಾಲೂಕು ಬಿಲ್ಲವ ಸಮಾಜದ ಸೇವಾ ಸಂಘದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಿನ್ನೆ ಹಾಗೂ ಇಂದು ಏರ್ಪಡಿಸಲಾಗಿದ್ದ 14ನೇ ವರ್ಷದ ಕೋಟಿ ಚೆನ್ನಯ್ಯ ಕ್ರೀಡಾಕೂಟಕ್ಕೆ ಇಂದು ಸಂಭ್ರಮದ ತೆರೆ ಎಳೆಯಲಾಯಿತು.
ಕ್ರೀಡಾಕೂಟದಲ್ಲಿ ಕ್ರಿಕೆಟ್, ಹಗ್ಗಜಗ್ಗಾಟ, ಥ್ರೋಬಾಲ್, ವಾಲಿಬಾಲ್, ಓಟದ ಸ್ಪರ್ಧೆ, ಭಾರದ ಗುಂಡು ಎಸೆತ ಸೇರಿದಂತೆ ಹಲವಾರು ಮನೋರಂಜನಾ ಸ್ಪರ್ಧೆಗಳು ನಡೆದವು. ಸಂಜೆ ನಡೆದ ಸಮಾರೋಪ ಸಮಾರಂಭಕ್ಕೆ ಅತಿಥಿಗಳಾಗಿ ಶಾಸಕತ್ರಯರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ಮಂಗಳೂರಿನ ರಂಗಕರ್ಮಿ ಪರಮಾನಂದ ಸಾಲಿಯಾನ್ ಮತ್ತಿತರರು ಪಾಲ್ಗೊಂಡಿದ್ದರು.
ಪುರುಷರ ಕ್ರಿಕೆಟ್‍ನಲ್ಲಿ ಫೈರ್‍ಬಾಯ್ಸ್ ಉಡೋತ್‍ಮೊಟ್ಟೆ ಪ್ರಥಮ, ಬಿಲ್ಲವ ಟೈಗರ್ಸ್ ಅಮ್ಮತ್ತಿ ದ್ವಿತೀಯ, ಮಹಿಳೆಯರ ಕ್ರಿಕೆಟ್‍ನಲ್ಲಿ ಜಾಜಿ ಫ್ರೆಂಡ್ಸ್ ಸಿದ್ದಾಪುರ ಪ್ರಥಮ, ಭಾರತಿ ಫ್ರೆಂಡ್ಸ್ ಮಾದಾಪುರ ದ್ವಿತೀಯ, ವಾಲಿಬಾಲ್‍ನಲ್ಲಿ ನಾರಾಯಣ ಗುರು ಬಿಲ್ಲವ ಸಂಘ ಸುಂಟಿಕೊಪ್ಪ ಪ್ರಥಮ, ಕಾಫಿ ಲಿಂಕ್ಸ್ ಮದೆನಾಡು ದ್ವಿತೀಯ, ಥ್ರೋಬಾಲ್‍ನಲ್ಲಿ ಮದೆ ಫ್ರೆಂಡ್ಸ್ ಮದೆನಾಡು ಪ್ರಥಮ, ಜಾಜಿ ಫ್ರೆಂಡ್ಸ್ ಸಿದ್ದಾಪುರ ದ್ವಿತೀಯ, ಪುರುಷರ ಹಗ್ಗಜಗ್ಗಾಟದಲ್ಲಿ ಕಾಫಿ ಲಿಂಕ್ಸ್ ಮದೆನಾಡು ಪ್ರಥಮ, ಬಿಲ್ಲವ ಫ್ರೆಂಡ್ಸ್ ವೀರಾಜಪೇಟೆ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಜಾಜಿ ಫ್ರೆಂಡ್ಸ್ ಸಿದ್ದಾಪುರ ಪ್ರಥಮ, ರೇಖಾ ಫ್ರೆಂಡ್ಸ್ ಚೆಂಬು ದ್ವಿತೀಯ ಸ್ಥಾನ ಪಡೆಯಿತು.