ಸುಂಟಿಕೊಪ್ಪ, ಡಿ. 10: ಕೊಡಗು ಜಿಲ್ಲಾ ಬಿಲ್ಲವ ಸೇವಾ ಸಮಾಜ, ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ, ಸುಂಟಿಕೊಪ್ಪ ಹೋಬಳಿ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ Àಪ್ರಥಮ ವರ್ಷದ ಜಿಲ್ಲಾ ಮಟ್ಟದ ಕೋಟಿ ಚೆನ್ನಯ್ಯ ಕ್ರೀಡಾ ಕೂಟಕ್ಕೆ ಚಾಲನೆ ನೀಡಲಾಯಿತು.
ಬೆಳಿಗ್ಗೆ ಸುಂಟಿಕೊಪ್ಪ ಶ್ರೀ ರಾಮ ಮಂದಿರದಲ್ಲಿ ಗಣಹೋಮ ನಡೆದ ನಂತರ ಶ್ರೀಮತಿ ಡಿ. ಚೆನ್ನಮ್ಮ ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರೀ ಕೋಟಿ ಚೆನ್ನಯ್ಯ ಚಿಹ್ನೆಯಾದ ಬಿಲ್ಲುಬಾಣದ ಧ್ವಜವನ್ನು ಉದ್ಘಾಟಿಸಿ ಮಾತನಾಡಿದ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ವೈ. ಆನಂದರಘು, ಬಿಲ್ಲವ ಜನಾಂಗದವ ರನ್ನು ಒಗ್ಗೂಡಿಸುವ ಸಲುವಾಗಿ ಸಂಸ್ಕøತಿ ಪರಂಪರೆಯನ್ನು ಉಳಿಸಿ ಬೆಳೆಸಲು ಈ ಕ್ರೀಡಾಕೂಟ ಸಹಕಾರಿ ಯಾಗಲಿದೆ. ಶ್ರೀ ನಾರಾಯಣ ಗುರುಗಳ ಗ್ರಾಮದೇವತೆಗಳ ಊರಿನವರ ಸಹಕಾರದಿಂದ ಈ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಬಿಲ್ಲವ ಸಮಾಜದ 20 ಕ್ರಿಕೆಟ್ ತಂಡದವರು ಭಾಗವಹಿಸಿದ್ದರು. ಈ ಸಂದರ್ಭ ಕೊಡಗು ಜಿಲ್ಲಾ ಬಿಲ್ಲವ ಸೇವಾ ಸಂಘದ ಜಂಟಿಕಾರ್ಯದರ್ಶಿ ಬಿ.ಎಸ್. ಜಯಪ್ಪ, ಖಜಾಂಚಿ ಬಿ.ಕೆ. ಮೋಹನ್, ಮಡಿಕೇರಿ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷ ಕೃಷ್ಣಪ್ಪ, ಮಡಿಕೇರಿ ತಾಲೂಕು ಬಿಲ್ಲವ ಸಂಘದ ಕಾರ್ಯದರ್ಶಿ ಮಹೇಶ್, ಸೋಮವಾರಪೇಟೆ ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷ ಬಿ.ಎ. ಭಾಸ್ಕರ, ಸುಂಟಿಕೊಪ್ಪ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಣಿ ಮುಖೇಶ್, ಉಪಾಧ್ಯಕ್ಷ ಬಿ.ಟಿ. ರಮೇಶ್, ಕಾರ್ಯದರ್ಶಿ ವೆಂಕಪ್ಪ ಪೂಜಾರಿ, ಸಲಹೆಗಾರರಾದ ಮೋಣಪ್ಪ ಪೂಜಾರಿ, ಬಿ. ಜಿನ್ನಪ್ಪ, ಕೆ.ಪಿ. ಜಗನ್ನಾಥ್, ನಾಗಪ್ಪ, ದೇಯಿ ಬೈದೇಯಿ ಮಹಿಳಾ ಸಂಘದ ಅಧ್ಯಕ್ಷೆ ಮಧು ನಾಗಪ್ಪ, ಉಪಾಧ್ಯಕ್ಷ ಗೀತಾ ವಿಶ್ವನಾಥ್ ಸಾಂಸ್ಕøತಿಕ ಸಂಚಾಲಕÀ ಸುನೀಲ್ ಎಂ.ಎಸ್., ಸುಂಟಿಕೊಪ್ಪ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಪೂಜಾರಿ, ಕಾರ್ಯದರ್ಶಿ ಹರೀಶ್ ಪೂಜಾರಿ, ಕೊಡಗು ಬಿಲ್ಲವ ಸಮಾಜದ ಗೌರವಾಧ್ಯಕ್ಷ ಬಿ.ಎಂ. ಪೂವಪ್ಪ, ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂದಪ್ಪ ಉಪಸ್ಥಿತರಿದ್ದರು.
ಇದೇ ಸಂದರ್ಭ ಪರಿಸರ ಸಂರಕ್ಷಣೆ ನಮ್ಮ ಧ್ಯೇಯ ಎಂಬ ಭಿತ್ತಿ ಪತ್ರ ಅಳವಡಿಸಿದ್ದು ಕ್ರೀಡಾಪಟುಗಳ ಗಮನ ಸೆಳೆಯಿತು.