ಹೆಬ್ಬಾಲೆ, ಜು, 28: ಹೆಬ್ಬಾಲೆ ಸಮೀಪದ ಅಡಗೂರು ಗ್ರಾಮದ ನಿವಾಸಿ ಚನ್ನಕೇಶವ (45) ಎಂಬಾತನನ್ನು ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಮಾಡಿ ಕಾವೇರಿ ನದಿಯಲ್ಲಿ ಎಸೆದಿರುವ ಘಟನೆ ಬೆಟ್ಟದಪುರ ಪೆÇೀಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಈ ಬಗ್ಗೆ ತಾ. 23ರಂದು ಚನ್ನಕೇಶವನ ಪತ್ನಿ ಜ್ಯೋತಿ ತನ್ನ ಗಂಡ ಕಾಣೆಯಾಗಿರುವ ಬಗ್ಗೆ ಪೆÇೀಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಠಾಣಾಧಿಕಾರಿ ಚಿಕ್ಕಸ್ವಾಮಿ ಅಪರಾಧಿಗಳ ಪತ್ತೆಗೆ ಕಾರ್ಯೋನ್ಮುಕರಾದ ಪರಿಣಾಮ ಅದೇ ಊರಿನ ತಾರಾ ಎಂಬವರ ಜೊತೆ ಚನ್ನಕೇಶವ ಅಕ್ರಮ ಸಂಬಂಧ ಹೊಂದಿದ್ದ ಬಗ್ಗೆ ತನಿಖೆÉಯಿಂದ ತಿಳಿದುಬಂದಿದೆ.
ತನಿಖೆ ಮುಂದುವರೆಸಿದ ಠಾಣಾಧಿಕಾರಿ ಅಪರಾಧಿಗಳಾದ ತಾರಾ, ಅವಳ ಗಂಡ ಕೀರ್ಥಾಚಾರಿ ಮತ್ತು ಸಹೋದರ ಯೋಗಾಚಾರಿ ಇವರುಗಳನ್ನು ಬಂಧಿಸಿ ವಿಚಾರಣೆ ಗೊಳಪಡಿಸಲಾಗಿದೆ ಎಂದು ಪೆÇೀಲೀಸ್ ಮೂಲಗಳು ತಿಳಿಸಿವೆ. ಮೃತ ಚನ್ನಕೇಶವನ ಕಳೇಬರಹಕ್ಕಾಗಿ ಕಾವೇರಿ ನದಿಯಲ್ಲಿ ಹುಡುಕಾಟ ಇನ್ನೂ ನಡೆಯುತ್ತಿದೆ.