ಆಲೂರುಸಿದ್ದಾಪುರ, ಜ. 17: ರಾಜ್ಯ ಬಿಜೆಪಿ ಬರ ಅಧ್ಯಯನ ತಂಡದ ಪ್ರಮುಖ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ನೇತೃತ್ವದ ತಂಡ ಸಂಜೆ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಗಳಲ್ಲಿ ಬರ ಅಧ್ಯಯನ ನಡೆಸಿತು.

ಗಣಗೂರು ಗ್ರಾ.ಪಂ.ನ ಬಾಣವಾರ ಮುಂತಾದ ಗ್ರಾಮಗಳಲ್ಲಿ ಬರ ಅಧ್ಯಯನ ನಡೆಸಿದ ನಂತರ ನಿಡ್ತ ಗ್ರಾ.ಪಂ.ಯ ಮುಳ್ಳೂರು ಗ್ರಾಮದಲ್ಲಿ ತೀವ್ರ ಬರಗಾಲ ಎದುರಿಸುತ್ತಿರುವ ಒಣಗಿ ಹೋಗಿರುವ ನೂರಾರು ಎಕರೆಯ ಗದ್ದೆ ಸಾಲುಗಳನ್ನು ಹಾಗೂ ಕಳೆದ ಸಾಲಿನಲ್ಲಿ ಮಳೆ ಇಲ್ಲದೆ ಒಣಗಿ ಹೋಗಿದ್ದ ಮುಳ್ಳೂರು ಗ್ರಾಮಕ್ಕೆ ನೂರಾರು ಏಕರೆಯಷ್ಟು ಗದ್ದೆ ಸಾಲುಗಳಿಗೆ ನೀರು ಒದಗಿಸುತ್ತಿದ್ದ ಬರಿದಾದ ಗುದ್ದಲಿ ಕೆರೆಯನ್ನು ವೀಕ್ಷಿಸಿದರು. ನಂತರ ಅಧ್ಯಯನ ತಂಡ ಕೊಡ್ಲಿಪೇಟೆ ಹೋಬಳಿಯ ಬೆಸೂರು ಗ್ರಾ.ಪಂ. ವ್ಯಾಪ್ತಿಯ ಬರಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿತು.

ಅಧÀ್ಯಯನ ತಂಡದಲ್ಲಿ ಬಿಜೆಪಿ ಮುಖಂಡರಾದ ತೇಜಸ್ವಿನಿ ರಮೇಶ್, ಶಾಸಕ ಪುಟ್ಟಸ್ವಾಮಿ, ಜಿಲ್ಲಾ ಬಿಜೆಪಿ ಮುಖಂಡರಾದ ಎಸ್.ಜಿ. ಮೇದಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ. ಸದಸ್ಯೆ ಸರೋಜಮ್ಮ, ತಾ.ಪಂ. ಸದಸ್ಯರಾದ ಕುಶಾಲಪ್ಪ, ಲೀಲಾವತಿ ಮಹೇಶ್, ಉಷಾತೇಜಸ್ವಿ ಮನು ಮುತ್ತಪ್ಪ, ಎಂ.ಎನ್. ಕೊಮರಪ್ಪ, ಎಸ್.ಎನ್. ರಘು, ಎಚ್.ಆರ್. ಹರೀಶ್, ಭುವನೇಶ್ವರಿ, ಮೋಹನ್‍ದಾಸ್, ಶುಂಠಿ ಸುರೇಶ್, ಗಂಗಾಧರ್, ಪೃಥ್ವಿ ನಿಡ್ತ ಗ್ರಾ.ಪಂ. ಸದಸ್ಯರಾದ ವಿಜಯ್ ಕುಮಾರ್, ಹೂವಮ್ಮ ಮುಳ್ಳೂರು ಗ್ರಾಮಸ್ಥರಾದ ಸೋಮೇಶ್, ಯೋಗೇಶ್, ಶಿವಣ್ಣ ಮತ್ತು ಗ್ರಾಮಸ್ಥರಿದ್ದರು.