ಶ್ರೀಮಂಗಲ, ನ. 17: ಕೊಡವರಿಗೆ ಕೊಡಗು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡಬಾರದು ಎಂದು ಹೇಳುವವರು, ಕಾಂಗ್ರೆಸ್ ಪಕ್ಷಕ್ಕೆ ಕೊಡವರ ಮತ ಬೇಡ ಎಂದು ಘೋಷಿಸುವ ಧೈರ್ಯವಿದೆಯೇ ಎಂದು ಯುನೈಟೆಡ್ ಕೊಡವ ಆರ್ಗನೈಶೇಷನ್ (ಯುಕೋ) ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಸವಾಲು ಹಾಕಿದ್ದಾರೆ.ಗೋಣಿಕೊಪ್ಪದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಅವರ ಈ ಜಾತಿಯತೆಯ ಹೇಳಿಕೆಯಿಂದ ಜಾತ್ಯತೀತ ಪಕ್ಷವೆಂದು ಬೀಗಿ ಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷದ ಜಾತ್ಯಾತೀತ ಮುಖವಾಡ ಕಳಚಿ ಬಿದ್ದಿದೆ ಎಂದು ಲೇವಡಿ ಮಾಡಿದರು.ಕೊಡಗಿನಲ್ಲಿ ಯಾವದೇ ರಾಜಕೀಯ ಪಕ್ಷವಿದ್ದರೂ, ಅದರ ಬೆಳವಣಿಗೆಯಲ್ಲಿ ಕೊಡವರ ಪಾತ್ರ ಮಹತ್ವದ್ದಾಗಿದೆ. ಸಾಮಾಜಿಕ ಹಾಗೂ ರಾಜಕೀಯವಾಗಿ ಅಲ್ಪಸಂಖ್ಯಾತ ರಾಗಿರುವ, ಕೊಡಗಿನ ಪ್ರಧಾನ ಮೂಲ ನಿವಾಸಿ ಜನಾಂಗವಾಗಿರುವ ಕೊಡವರು ತಾವು ಗುರುತಿಸಿಕೊಂಡಿರುವ ಪಕ್ಷದ ಕನಿಷ್ಟ ಜಿಲ್ಲಾಧ್ಯಕ್ಷರಾಗಲು ಕೊಡಗು ಜಿಲ್ಲೆಯಲ್ಲದೆ ಬೇರೆಲ್ಲೂ ಸಾಧ್ಯವಿಲ್ಲ. ಕೆ.ಪಿ. ಚಂದ್ರಕಲಾ ಅವರು ಕರ್ನಾಟಕದ ಪ್ರಬಲ ಗೌಡ ಜನಾಂಗದಲ್ಲಿ ಹುಟ್ಟಿ, ರಾಜ್ಯದ ಪ್ರಬಲ ಜನಾಂಗದ ಪ್ರತಿನಿಧಿಯಾಗಿರುವದರಿಂದ ಮುಖ್ಯಮಂತ್ರಿ ಹುದ್ದೆ ಹಾಗೂ ರಾಷ್ಟ್ರಾಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ಅವಕಾಶವನ್ನು ಹುಟ್ಟಿನಿಂದಲೇ ಪಡೆದುಕೊಂಡಿರುತ್ತಾರೆ. ಅಂತಹವರು ಅಲ್ಪಸಂಖ್ಯಾತ ಸಮುದಾಯದ ವಿರುದ್ದ ಪ್ರಬಲ ಕೋಮಿನವರನ್ನು ಸಂಘಟಿಸಿ ಬಹಿರಂಗವಾಗಿ ಜಾತಿವಾದವನ್ನು ಪ್ರದರ್ಶಿಸಲು ನಾಚಿಕೆಯಾಗುವದಿಲ್ಲವೆ ಎಂದು ಪ್ರಶ್ನಿಸಿದರು.

ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಬಗ್ಗೆ ಗಂಟೆ ಗಟ್ಟಲೆ ಭಾಷಣ ಬೀಗುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ಸಿಗರ ಮನಸ್ಥಿತಿ ಎಂತಹುದೆಂಬದು ಈ ಹೇಳಿಕೆಯಿಂದ ತಿಳಿದುಬರುತ್ತದೆ. ಪಕ್ಷಕ್ಕೆ ಸ್ವಾತಂತ್ರ್ಯಾ ನಂತರದಲ್ಲಿ ಇಂದಿನವರೆಗೆ ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದವರು ಕೇವಲ ಚಂದ್ರಕಲಾ ಕುಟುಂಬದವರೇ ಎಂದು ಪ್ರಶ್ನಿಸಿದ ಮಂಜು ಚಿಣ್ಣಪ್ಪ ಅವರು, ಈ ಕುರಿತಂತೆ ಅಧ್ಯಕ್ಷ ಸ್ಥಾನಕ್ಕೆ ಕೊಡವರು ಬೇಡವೆಂದಾದಲ್ಲಿ, ಪಕ್ಷಕ್ಕೆ ರಾಜ್ಯಾದÀ್ಯಂತ ಕೊಡವರ ಮತ ಬೇಡವೆಂದು ಬಹಿರಂಗವಾಗಿ ಘೋಷಿಸಲಿ ಎಂದು ಸವಾಲು ಹಾಕಿದರು.

ಇದೀಗ ದೇಶ ಹಾಗೂ ರಾಜ್ಯದ ಚಿಂತನೆಯಲ್ಲೇ ಮಗ್ನರಾಗಿ, ಸಂಸ್ಕøತಿ, ಆಚಾರ-ವಿಚಾರಗಳನ್ನು ತಿಪ್ಪೆಗೆಸೆದು ಪಕ್ಷ ಸಂಘಟನೆಯನ್ನೆ ಧೆÉ್ಯೀಯವಾಗಿಸಿಕೊಂಡು ತಮ್ಮತನವನ್ನು ಬಿಟ್ಟು ಮೆರೆದ ಕೊಡವರಿಗೆ ಇದೊಂದು ಸ್ಪಷ್ಟ ಸಂದೇಶವಾಗಿದ್ದು, ಇದನ್ನು ಸವಾಲಾಗಿ ಸ್ವೀಕರಿಸುವ ಸಮಯ ಬಂದಿದೆ ಎಂದು ಮಾರ್ಮಿಕವಾಗಿ ನುಡಿದರು. ಈ ಘಟನೆಯು ಕೊಡಗಿನಲ್ಲಿ ಹೊಸದಾದ ರಾಜಕೀಯ ಪರ್ವ ಉದಯಕ್ಕೆ ನಾಂದಿಯಾಗಲಿದೆ ಎಂದು ಅವರು ಹೇಳಿದರು.

ಇದೀಗ ಚೆಂಡು ಕೆ.ಪಿ.ಸಿ.ಸಿ ಅಂಗಳದಲ್ಲಿದ್ದು, ಪಕ್ಷದ ಜಿಲ್ಲೆಯಲ್ಲಿನ ಕೊಡವ ವಿರೋಧಿ ನೀತಿಗೆ ಪಕ್ಷ ಇಂಬು ಕೊಡಲಿದೆಯೇ ಎಂದು ಕಾದು ನೋಡಬೇಕಾಗಿದೆ. ಅನಂತರ ಕೊಡಗಿನಲ್ಲಿ ಮುಂದಿನ ರಾಜಕೀಯ ಬೆಳವಣಿಗೆ ಏನಿರಲಿದೆ ಎಂಬುವದನ್ನು ಎದುರಿಸಲು ರಾಜಕೀಯ ಪಕ್ಷಗಳು ಸಿದ್ಧವಾಗಬೇಕಾಗಬಹುದು ಎಂದು ನುಡಿದರು.

ಸುದ್ದಿಗೋಷ್ಠಿಯಲ್ಲಿ ಚೆಪ್ಪುಡಿರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಮಾದಯ್ಯ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಹಾಜರಿದ್ದರು.