ಗೋಣಿಕೊಪ್ಪಲು, ಅ. 16: ಗೋಣಿಕೊಪ್ಪಲಿನಲ್ಲಿ ಆಚರಿಸಲ್ಪಡು ತ್ತಿರುವ ಮೂರನೇ ವರ್ಷದ ಮಹಿಳಾ ದಸರಾ ಉತ್ತಮವಾಗಿ ಮೂಡಿ ಬಂದಿದೆ. ಇದೇ ಪ್ರಥಮ ಬಾರಿಗೆ ತಾನು ಮಹಿಳಾ ದಸರಾ ವೀಕ್ಷಣೆ ಮಾಡಿದ್ದು ಮುಂದಿನ ವರ್ಷದಿಂದ ಇಲ್ಲಿನ ಮಹಿಳಾ ದಸರಾಗೆ ಅನುದಾನ ನೀಡುವದಾಗಿ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಭರವಸೆ ನೀಡಿದರು.
ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ಪ್ರವಿ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ಇಲ್ಲಿನ ಪರಿಮಳ ಮಂಗಳ ವಿಹಾರದಲ್ಲಿ ಜರುಗಿದ ಮಹಿಳಾ ದಸರಾ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಅಕಾಡೆಮಿ ಅಧ್ಯಕ್ಷ ತಮ್ಮಯ್ಯ ರಾಜಕೀಯ ರಹಿತವಾಗಿ, ಜಾತ್ಯತೀತವಾಗಿ ದಸರಾ ಆಚರಣೆ ನಡೆಯಲಿ. ಮಹಿಳೆಯರ ಒಗ್ಗೂಡುವಿಕೆಗೆ, ಸಬಲೀಕರಣಕ್ಕೆ ವೇದಿಕೆಯಾಗಿದೆ ಎಂದು ಹೇಳಿದರು.
ಸಮಾರೋಪದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಕಾವ್ಯ ಅಶ್ವಥ್, ಸಮಿತಿಯ ಕಾರ್ಯದರ್ಶಿ ಎಂ. ಮಂಜುಳಾ, ಗ್ರಾ.ಪಂ. ಸದಸ್ಯೆ ಹಾಗೂ ಸಮಿತಿ ಖಜಾಂಚಿ ಪ್ರಭಾವತಿ, ತೀರ್ಪುಗಾರರಾದ ಡಯಾನ ಹಾಗೂ ರಿಂಕು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಿಸಸ್ ಗೋಣಿಕೊಪ್ಪ ಕಿರೀಟ ಕಾವ್ಯ ಗೌಡ ಮಡಿಲಿಗೆ
ತಾ. 10 ರಂದು ಸಂಜೆ ಜರುಗಿದ ಮಿಸಸ್ ಗೋಣಿಕೊಪ್ಪ ಸ್ಪರ್ಧೆಯಲ್ಲಿ ಒಟ್ಟು 8 ಮಂದಿ ಭಾಗವಹಿಸಿದ್ದು, ಅಂತಿಮ ಸುತ್ತಿಗೆ ಮೂವರನ್ನು ಆಯ್ಕೆ ಮಾಡಲಾಗಿದ್ದು, ಇಲ್ಲಿನ ಕಾವ್ಯ ಗೌಡ ಮಿಸಸ್ ಗೋಣಿಕೊಪ್ಪ ಪ್ರಶಸ್ತಿಗೆ ಭಾಜನರಾದರು. ರೂಪಾ ಉತ್ತಪ್ಪ ಹಾಗೂ ಅರುಣ್ ಅವರು ಪೆÇ್ರೀತ್ಸಾಹಕ ಬಹುಮಾನ ಗೆದ್ದುಕೊಂಡರು.
ವಾಲಗತ್ತಾಟ್ ಸ್ಪರ್ಧೆಯಲ್ಲಿ ಸುಶೀಲ (ಪ್ರಥಮ), ಕವಿತಾ ರಾಮು (ದ್ವಿತೀಯ) ಹಾಗೂ ಸುಮಿ (ತೃತೀಯ) ಬಹುಮಾನ ಗೆದ್ದುಕೊಂಡರು. ಪಿಕ್ ಅಂಡ್ ಆಕ್ಟ್‍ನಲ್ಲಿ ಪಾರ್ವತಿ, ನಳಿನಾಕ್ಷಿ ಹಾಗೂ ಸುಜು ಅಲೇಮಾಡ ಮೊದಲ ಮೂರು ಸ್ಥಾನಗಳಿಸಿದರು.
ಹೂವಿನ ಅಲಂಕಾರ ಸ್ಪರ್ಧೆಯಲ್ಲಿ ಕವಿನ್ ಗಣಪತಿ (ಪ್ರಥಮ), ಎಸ್.ಎಂ. ರಜನಿ (ದ್ವಿತೀಯ) ಹಾಗೂ ಶಾರದಾ (ತೃತೀಯ) ಬಹುಮಾನಗಳಿಸಿದರು.
ಬೆಂಕಿ ಇಲ್ಲದೆ ಅಡುಗೆ ಸ್ಪರ್ಧೆ ಯಲ್ಲಿ ಅರುಣ, ನೀತಿ ಜಗದೀಶ್ ಹಾಗೂ ಶಬಾರೀನ್, ಮೆಹಂದಿ ಸ್ಪರ್ಧೆಯಲ್ಲಿ ಖುಷ್ಮತ್, ಕಾವ್ಯ ಹಾಗೂ ಅಮ್ರೀನ್, ಛದ್ಮವೇಷ ಸ್ಪರ್ಧೆಯಲ್ಲಿ ಭವ್ಯಜ್ಯೋತಿ, ರೆಹಮತ್ ಹಾಗೂ ಜಿ.ಎನ್. ಗೀತಾ, ಗುಂಪು ನೃತ್ಯ ಸ್ಪರ್ಧೆಯಲ್ಲಿ ಜ್ಞಾನ ವಿಕಾಸ ಕೇಂದ್ರ, ಸಿರಿ ಮತ್ತು ಗುಂಪು ಹಾಗೂ ಕಾವೇರಿ ಸ್ತ್ರೀ ಶಕ್ತಿ ಸಂಘ ಬಹುಮಾನ ಗೆದ್ದುಕೊಂಡಿತು. ಜಾನಪದ ಗೀತೆ ಸ್ಪರ್ಧೆಯಲ್ಲಿ ನಳಿನಿ ಮತ್ತು ತಂಡ, ಮಾಯಮುಡಿ ಕ್ಲಸ್ಟರ್ ಶಿಕ್ಷಕರು ಹಾಗೂ ನಳಿನಾಕ್ಷಿ ಮತ್ತು ತಂಡ ಗೆಲವು ಸಾಧಿಸಿತು. ಕಲಶ ಹೊತ್ತ ಮಹಿಳೆಯರ ಮೆರವಣಿಗೆಯಲ್ಲಿ ಜ್ಞಾನ ವಿಕಾಸ ಕೇಂದ್ರ (ಪ್ರಥವi), ಆಶಾ ಕಾರ್ಯಕರ್ತೆಯರ ತಂಡ (ದ್ವಿತೀಯ) ಹಾಗೂ ಕೊಡವ ಸಾಂಪ್ರದಾಯಿಕ ಸೀರೆ ತೊಟ್ಟ ಮಹಿಳೆಯರ ತಂಡ ತೃತೀಯ ಸ್ಥಾನ ಗಳಿಸಿತು.
ಸತತ ಮೂರನೇ ವರ್ಷದ ಅಧ್ಯಕ್ಷೆಯಾಗಿ ಈ ಬಾರಿ ಹಲವು ಒತ್ತಡಗಳ ನಡುವೆಯೇ ಮಹಿಳಾ ದಸರಾ ಆಯೋಜನೆ ಮಾಡಿದ್ದ ಕುಲ್ಲೇಟಿರ ಪ್ರವಿ ಮೊಣ್ಣಪ್ಪ ಮಹಿಳಾ ದಸರಾ ಯಶಸ್ವಿಯಾದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಈ ಬಾರಿ ಕಳೆದ ಬಾರಿಗಿಂತಲೂ ಮೂರು ಪಟ್ಟು ಅಧಿಕ ಮಹಿಳೆಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಮುಂದಿನ ವರ್ಷ ನಾಲ್ಕನೇ ಮಹಿಳಾ ದಸರಾ ಆಚರಣೆಗೆ ಇದು ಸ್ಪೂರ್ತಿಯಾಗಿದೆ. ಕೊಡವ ಅಕಾಡೆಮಿ ಅಧ್ಯಕ್ಷರು ಮುಂದಿನ ಸಾಲಿನಲ್ಲಿ ಅನುದಾನ ಕಲ್ಪಿಸುವದಾಗಿ ಭರವಸೆ ನೀಡಿರುವದು ಹಾಗೂ ಮಹಿಳಾ ದಸರೆಗೆ ಸರ್ಕಾರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ನೇರ ಅನುದಾನ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರವೇ ಮುಖ್ಯಮಂತ್ರಿಗಳ ಭೇಟಿ ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವದು. ಮಹಿಳಾ ದಸರಾದ ಲೆಕ್ಕ ಪತ್ರವನ್ನು ಪಾರದರ್ಶಕವಾಗಿ ಮಂಡಿಸಲಾಗು ವದು. ಪಕ್ಷಾತೀತವಾಗಿ, ಜಾತ್ಯತೀತ ವಾಗಿ ಮಹಿಳಾ ದಸರಾವನ್ನು ಮಹಿಳೆಯರ ಅಭ್ಯುದಯದ ನಿಟ್ಟಿನಲ್ಲಿ ಮುಂದೆ ಮತ್ತಷ್ಟು ಆಕರ್ಷಣೀ ಯವನ್ನಾಗಿ ಆಚರಿಸಲಾಗುವದು ಎಂದು ಹೇಳಿದರು. - ಟಿ.ಎಲ್. ಶ್ರೀನಿವಾಸ್