ಗೋಣಿಕೊಪ್ಪಲು, ಅ.14: ಫೆಡರೇಷನ್ ಆಫ್ ಕೊಡವ ಸಮಾಜ ಆಶ್ರಯದಲ್ಲಿ ಸುಮಾರು 31 ಕೊಡವ ಸಮಾಜ ತಂಡಗಳ ನಡುವೆ ನ.4,5 ಹಾಗೂ 6 ರಂದು 5 ನೇ ವರ್ಷದ ಕೊಡವ ನಮ್ಮೆ ನಡೆಯಲಿರುವದಾಗಿ ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ ತಿಳಿಸಿದ್ದಾರೆ. ಇಂದು ಬಾಳುಗೋಡುವಿನ ವಿಶ್ವ ಕೊಡವ ಪಾರಂಪರಿಕ ಕೇಂದ್ರದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಬಾಳುಗೋಡುವಿನ ಸುಮಾರು 15 ಎಕರೆ ಪ್ರದೇಶದಲ್ಲಿ ಸುಮಾರು ರೂ.7.50 ಕೋಟಿ ವೆಚ್ಚದಲ್ಲಿ ವಿಶ್ವ ಕೊಡವ ಪಾರಂಪರಿಕ ಕೇಂದ್ರ ಸುಸ್ಸಜ್ಜಿತವಾಗಿ ನಿರ್ಮಾಣಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ರೂ.2 ಕೋಟಿ ಹಾಗೂ ಹಾಲಿ ಸಿದ್ದರಾಮಯ್ಯ ಅವಧಿಯಲ್ಲಿ ಸುಮಾರು ರೂ.3 ಕೋಟಿ ಅನುದಾನ ಕಲ್ಪಿಸಲಾಗಿದೆ.