vಮಡಿಕೇರಿ, ಆ. 16: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕೊಡವ ವಿದ್ಯಾರ್ಥಿಗಳ ವಿದ್ಯಾರ್ಥಿ ಸಂಘಟನೆಯ ಉದ್ಘಾಟನಾ ಸಮಾರಂಭ ಮಂಗಳೂರಿನ ಲಯನ್ಸ್ ದೇವ ಮಂದಿರದಲ್ಲಿ ನಡೆಯಿತು.ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಕಾಂತಿ ಸತೀಶ್ ಹಾಗೂ ಪತಿ ಸತೀಶ್ ಗಣಪತಿ ಮುಖ್ಯ ಅತಿಥಿಗಳಾಗಿದ್ದರು. ಸತೀಶ್ ಅವರು ಸಾಹಸೀ ಕ್ರೀಡೆಗಳ ಬಗ್ಗೆ ಮಾಹಿತಿ ನೀಡಿದರು. ಸಂಘಟನೆಯ ಮುಖ್ಯ ಸಲಹೆಗಾರ ಸೋಮೆಯಂಡ ಪಿ. ಚಂಗಪ್ಪ, ಅಜಿತ್ ಬೋಪಯ್ಯ, ಅಧ್ಯಕ್ಷ ಪಾರುವಂಗಡ ಕೌಶಿಕ್, ಉಪಾಧ್ಯಕ್ಷ ಮುಕ್ಕಾಟಿರ ಕಿನರಾ ಮುತ್ತಮ್ಮ ಇನ್ನಿತರರು ಪಾಲ್ಗೊಂಡಿದ್ದರು.