ದುಬೈ, ಡಿ. 23: ವಿಶ್ವ ಶಾಂತಿಯ ಸಂದೇಶವಾಹಕ ಪ್ರವಾದಿ ಮುಹಮ್ಮದ್ (ಸ ಅ) ಅವರ ನೈಜ ಜೀವನವನ್ನು ಅನುಸರಿಸಿ ಅದನ್ನು ಇತರರಿಗೆ ತಿಳಿಸಿಕೊಟ್ಟರೆ ಮಾತ್ರ ನಮ್ಮಲ್ಲಿ ಐಕ್ಯ ಬಲಗೊಳ್ಳಲಿದೆ ಎಂದು ಸಯ್ಯದ್ ಇಲ್ಯಾಸ್ ಅಲ್ ಹೈದ್ರೋಸಿ ಎಮ್ಮೆಮಾಡು ಕರೆ ನೀಡಿದರು.
ದುಬೈನಲ್ಲಿ ನಡೆದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿಯ ಮೀಲಾದ್ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಎಸ್.ಎಸ್.ಎಫ್. ಉಪಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೊಡಗು ಜಿಲ್ಲೆಯ ಹಿರಿಯ ಸುನ್ನಿ ಉಮರಾ ನೇತಾರರೂ ಆದ ಕೊಡಗು ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಹಂಝ ಕೊಟ್ಟಮುಡಿ ಮಾತನಾಡಿದರು. ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ನಾಪೋಕ್ಲು, ಜಲೀಲ್ ನಿಝಾಮಿ ಎಮ್ಮೆಮಾಡು ಸಮಾರಂಭಕ್ಕೆ ಶುಭ ಹಾರೈಸಿ ಮಾತನಾಡಿದರು. ಹಮೀದ್ ನಾಪೋಕ್ಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೊಡಗು ಸುನ್ನಿ ವೆಲ್ಫೇರ್ ಯುಎಇ ಸಮಿತಿ ಅಧ್ಯಕ್ಷ ಅಬೂಬಕರ್ ಹಾಜಿ ನಾಪೋಕ್ಲು, ಹಿರಿಯರಾದ ಹಾರಿಸ್ ಉಸ್ತಾದ್ ಚಾಮಿಯಾಲ್, ಕೆಸಿಎಫ್ ದುಬೈ ಝೋನ್ ನಾಯಕರಾದ ಅಬ್ದುಲ್ ಅಝೀಝ್ ಲತೀಫಿ, ಮುಹಮ್ಮದ್ ಹಾಜಿ ಕೊಂಡಂಗೇರಿ, ಖಲೀಲ್ ಭಾಷಾ ಮಡಿಕೇರಿ, ಶಾಹುಲ್ ಹಮೀದ್ ಸಖಾಫಿ ಮಾದಾಪುರ, ಶರ್ಫುದ್ದೀನ್ ಕೊಳಕೇರಿ, ಇಬ್ರಾಹಿಂ ನಾಪೋಕ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನ್ವಾರುಲ್ ಹುದಾ ಯುಎಇ ಸಮಿತಿ ಹೊರತಂದ 2017ನೇ ಸಾಲಿನ ಕ್ಯಾಲೆಂಡರ್ ಸಯ್ಯದ್ ಇಲ್ಯಾಸ್ ಅಲ್ ಹೈದ್ರೋಸಿ ಅವರು ಬಿಡುಗಡೆಗೊಳಿಸಿದರು. ಇಸ್ಮಾಯಿಲ್ ಸಖಾಫಿ ಹಾಗೂ ಹಂಝ ಕೊಟ್ಟಮುಡಿ ಅವರನ್ನು ಸನ್ಮಾನಿಸಲಾಯಿತು. ರಿಯಾಝ್ ಕೊಂಡಂಗೇರಿ ಕಾರ್ಯಕ್ರವನ್ನು ನಿರೂಪಿಸಿದರು. ಯುಎಇ ಸಮಿತಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮೂರ್ನಾಡು ಸ್ವಾಗತಿಸಿ, ಮೀಲಾದ್ ಸಮಿತಿ ಕನ್ವೀನರ್ ಇರ್ಷಾದ್ ಕೊಂಡಂಗೇರಿ ವಂದಿಸಿದರು.
ಮೀಲಾದ್ ಸಮಾವೇಶದ ಅಂಗವಾಗಿ ಪುಟಾಣಿ ಮಕ್ಕಳು ನಡೆಸಿದ ಭಾಷಣ, ಹಾಡು ಮತ್ತು ಖುರ್-ಆನ್ ಪಾರಾಯಣ, ಹಾರಿಸ್ ಕೊಟ್ಟಮುಡಿ ನೇತೃತ್ವದಲ್ಲಿ ಸಭಿಕರಿಗೆ ನಡೆದ ರಸಪ್ರಶ್ನೆ ಕಾರ್ಯಕ್ರಮ ಯುಎಇಯ ವಿವಿಧ ಕಡೆಗಳಿಂದ ಆಗಮಿಸಿದ ಕೊಡಗಿನ ಅನಿವಾಸಿಗಳಿಗೆ ಊರಿನ ಮೀಲಾದ್ ಸಮಾರಂಭಗಳಲ್ಲಿ ಭಾಗವಹಿಸಿದ ಅನುಭವ ಮೂಡಿತು. ಕಾರ್ಯಕ್ರಮ ನಡೆಸಿಕೊಟ್ಟ ಮಕ್ಕಳಿಗೆ ಹಾಗೂ ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಮೀಲಾದ್ ಸಮಾವೇಶಕ್ಕೆ ಮೊದಲು ಮೌಲೂದ್ ಪಾರಾಯಣ ಹಾಗೂ ವಾರ್ಷಿಕ ಮಹಾಸಭೆ ನಡೆಯಿತು. ನಾಸರ್ ನಈಮಿ ಹಾಗೂ ನಾಸರ್ ಸಅದಿ ಅವರು ಮೌಲೂದ್ ನೇತೃತ್ವ ನೀಡಿದರು. ಕೊಡಗು ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ನಡೆಸಿದ ಸಾಂತ್ವನ ಹಾಗೂ ಸಾಮಾಜಿಕ ಕಾರ್ಯಗಳ ವರದಿಯನ್ನು ವಾಚಿಸಿ ಅಂಗೀಕರಿಸಲಾಯಿತು. ಹೊಸ ಸಮಿತಿಯ ಅಧ್ಯಕ್ಷರಾಗಿ ಅಬೂಬಕರ್ ಹಾಜಿ ನಾಪೋಕ್ಲು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಮೂರ್ನಾಡು ಪುನರಾಯ್ಕೆಯಾದರು.