ಸುಂಟಿಕೊಪ್ಪ, ನ. 29: ಗೌಡ ಜನಾಂಗದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಶಕ್ತರಾಗಿದ್ದರೂ ಐಎಎಸ್-ಐಪಿಎಸ್ ಪರೀಕ್ಷೆಯಲ್ಲಿ ಹಿನ್ನಡೆಯಾಗುತ್ತಿರುವದು ವಿಷಾದÀನೀಯ ಎಂದು ನಿವೃತ್ತ ಪ್ರಾಂಶುಪಾಲ ಡಾ. ಕಾನಡ್ಕ ಎ. ಪದ್ಮಾಜಿ ಹೇಳಿದರು. ಮಡಿಕೇರಿಯ ಗುಡ್ಡಮನೆ ಅಪ್ಪಯ್ಯಗೌಡ ರಸ್ತೆಯಲ್ಲಿರುವ ವಿದ್ಯಾರ್ಥಿ ಸಂಘದ ಸಭಾಂಗಣದಲ್ಲಿ ಕೊಡಗು ಗೌಡ ನಿವೃತ್ತ ನೌಕರರ ಸಂಘದ 14ನೇ ವರ್ಷದ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಪೂರ್ವಿಕರು ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿ ಮುನ್ನುಡಿ ಇಡಬೇಕು. ಯುವ ಜನಾಂಗ ಸದೃಢರಾಗಬೇಕು. ಗೌಡ ಜನಾಂಗದವರು ರಾಜಕೀಯ ಕ್ಷೇತ್ರ ಹಾಗೂ ಆಡಳಿತದ ಅಧಿಕಾರಿ ಸ್ಥಾನದಲ್ಲಿ ಮುಂಚೂಣಿಯಲ್ಲಿದ್ದರೆ ಜನಾಂಗದ ಅಭಿವೃದ್ಧಿ ಕಾಣಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ತಳೂರು ಎಂ.ಶೇಷಪ್ಪ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗೌಡ ನಿವೃತ್ತ ಸಂಘದ ಅಧ್ಯಕ್ಷ ಕೋರನ ಸಿ. ವಿಶ್ವನಾಥ್, ಕಣ್ಣಿನ ಪರೀಕ್ಷೆ, ಶೈಕ್ಷಣಿಕ ತರಬೇತಿ, ವೈದÀ್ಯಕೀಯ ಶಿಬಿರ ನಡೆಸುವ ಮೂಲಕ ಸಂಘ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದೆ. ಸಂಘವನ್ನು ಇನ್ನಷ್ಟು ಸದೃಢಗೊಳಿಸಲು ಎಲ್ಲರೂ ಮುಂದಾಗಬೇಕೆಂದರು.
ಶೈಕ್ಷಣಿಕ ಮತ್ತು ಕ್ರೀಡಾ ರಂಗದಲ್ಲಿ ಸಾಧನೆ ಮಾಡಿದ ಕುಂಜಿಲನ ಎ.ಮಂಜು, ಬೊಳ್ತಜಿರ ಎ. ಕೃತಿಕಾ, ಮಂದ್ರಿರ ಜೆ. ಮೋನಿಷಾ, ದೀಟಿಗೆ ವಿ. ತರುಣ್, ಪೊಡ್ನೊಳನ ಎನ್. ಸುಮಂತ್, ಬೊಳ್ತಜಿ ಎ. ಗಗನ್ ಅನಂತ್, ಮೇರ್ಕಜೆ ಎಸ್. ಡಿವಿನ್ ಬೋಪಯ್ಯ ಇವರುಗಳನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಕಾರ್ಯದರ್ಶಿ ಮೆಡತನ ದೇವಕ್ಕಿ, ಖಜಾಂಚಿ ಪೊನ್ನಚ್ಚನ ಸೋಮಣ್ಣ, ನಿರ್ದೇಶಕರುಗಳಾದ ಸೂದನ ನಾಣಯ್ಯ, ದಂಬೆಕೋಡಿ ಆನಂದ, ಬೈತಡ್ಕ ಬೆಳ್ಯಪ್ಪ, ಕುಯ್ಯಮುಡಿ ವಸಂತಿ, ತಳೂರು ಕಾಳಪ್ಪ, ಪರಿವಾರ ಅಪ್ಪಾಜಿ, ಪಟ್ಟಡ ದೇವಯ್ಯ, ಕುದುಪಜೆ ಶಾರದಾ, ಹೊಸೋಕ್ಲು ಪೊನ್ನಪ್ಪ, ಚೆರಿಯಮನೆ ಪ್ರಮೋದ್, ಸೂದನ ಮೋಹಿನಿ, ಪಾಣತ್ತಲೆ ಬಿದ್ದಪ್ಪ, ಪಡಿಕಲ್ ಚಂಗಪ್ಪ ಇದ್ದರು.
ಕುದುಪಜೆ ಶಾರದಾ ಪ್ರಾರ್ಥಿಸಿ, ಕುದುಪಜೆ ಬೋಜಪ್ಪ ಸ್ವಾಗತಿಸಿದರು. ಮೆಡತನ ದೇವಕ್ಕಿ, ಬೈತಡ್ಕ ಬೆಳ್ಯಪ್ಪ ವರದಿ ವಾಚಿಸಿದರೆ, ಖಜಾಂಚಿ ಲೆಕ್ಕ ಪತ್ರ ಮಂಡಿಸಿದರು. ತಳೂರು ಕಾಳಪ್ಪ ಕಾರ್ಯಕ್ರಮ ನಿರ್ವಹಿಸಿದರು.