ಮಡಿಕೇರಿ, ಜು. 28: ಮಹದಾಯಿ ಯೋಜನೆಯ ವಿವಾದಕ್ಕೆ ಸಂಬಂಧಿಸಿದಂತೆ ತಾ. 30ರಂದು ಕರ್ನಾಟಕ ಬಂದ್‍ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದು, ಕೊಡಗಿನಲ್ಲಿ ಬಂದ್ ನಡೆಯುವದಿಲ್ಲ ವೆಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಹಾಗೂ ಜಿಲ್ಲಾ ಬಸ್ ಮಾಲೀಕರ ಸಂಘ ಸ್ಪಷ್ಟಪಡಿಸಿದೆ.
ಇತ್ತೀಚೆಗಷ್ಟೇ ಕೊಡಗು ಬಂದ್ ಆಚರಿಸಲಾಗಿದ್ದು, ನಂತರ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದಿಂದಾಗಿ ಕೊಡಗಿನಲ್ಲಿ ಅನಾನುಕೂಲ ಆಗಿರುವ ಹಿನ್ನೆಲೆಯಲ್ಲಿ ಬಂದ್ ಆಚರಿಸದೆ ಕರ್ನಾಟಕದ ಬೇಡಿಕೆಗೆ ಕೊಡಗು ಜಿಲ್ಲೆ ಬೆಂಬಲ ನೀಡುವದಾಗಿ ಚೇಂಬರ್ ಆಫ್ ಕಾಮರ್ಸ್‍ನ ಜಿಲ್ಲಾಧ್ಯಕ್ಷ ಬಿ.ಎನ್. ಪ್ರಕಾಶ್ ಹಾಗೂ ಕೊಡಗು ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ತಿಳಿಸಿದ್ದಾರೆ.
ಕರ್ನಾಟಕದ ಬೇಕು ಬೇಡಿಕೆಗಳಿಗೆ ಕೊಡಗಿನ ಸಂಪೂರ್ಣ ಸಹಮತ ವಿದ್ದು, ಕರ್ನಾಟಕದ ಬೇಡಿಕೆಯನ್ನು ಈಡೇರಿಸುವಂತೆ ಕೋರಿ ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸುವದಾಗಿ ಎರಡೂ ಸಂಘಟನೆಗಳು ತಿಳಿಸಿವೆ.