ಸೋಮವಾರಪೇಟೆ: 70ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸೋಮವಾರಪೇಟೆಯಾದ್ಯಂತ ವಿವಿಧ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು ಸಂಭ್ರಮದಿಂದ ಆಚರಿಸಿದವು. ದಿನಾಚರಣೆ ಪ್ರಯುಕ್ತ ವಾಹನ ಜಾಥಾ, ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಣೆ, ಅಶಕ್ತರಿಗೆ ಧನ ಸಹಾಯ ವಿತರಣೆ, ವನಮಹೋತ್ಸವ ಸೇರಿದಂತೆ ಇತರ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡರು.
ಮೋಟಾರ್ ಯೂನಿಯನ್: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಕಾರು ನಿಲ್ದಾಣದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಮಾಜಿ ಸೈನಿಕ ಈರಪ್ಪ ಧ್ವಜಾರೋಹಣ ನೆರವೇರಿಸಿದರು. ಪತ್ರಕರ್ತ ವಿಜಯ್ ಹಾನಗಲ್ ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡಿದರು. ಅಧ್ಯಕ್ಷ ಸಿ.ಸಿ. ನಂದ, ಕಾರ್ಯದರ್ಶಿ ಬಾಲಕೃಷ್ಣ, ಮಾಜೀ ಅಧ್ಯಕ್ಷ ಕೆ.ಜಿ. ಸುರೇಶ್, ಸೇರಿದಂತೆ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.
ಜಲಾಲಿಯಾ ಮಸೀದಿಯಲ್ಲಿ: ಇಲ್ಲಿನ ಜಲಾಲೀಯ ಮಸೀದಿಯಲ್ಲಿ ನಡೆದ ಸ್ವಾತಂತ್ರೋತ್ಸವದಲ್ಲಿ ಧರ್ಮಗುರು ಅಬ್ದುಲ್ ಅಬೂಬಕರ್ ಸಿದ್ಧಿಕ್ ಮೊಂಟುಗೋಳಿ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷ ಕೆ.ಎ. ಆದಂ ಸೇರಿದಂತೆ ಇತರರು ಭಾಗವಹಿಸಿದ್ದರು. ದಿನದ ಅಂಗವಾಗಿ 70 ಮಂದಿಗೆ ಗಿಡಗಳನ್ನು ವಿತರಿಸಲಾಯಿತು.
ಐಗೂರು ಕಾಲೇಜು: ಸಮೀಪದ ಐಗೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರೋತ್ಸವ ಆಚರಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಿ.ಎಸ್. ಪೊನ್ನಪ್ಪ, ಉಪಾಧ್ಯಕ್ಷ ಪ್ರಭಾಕರ್, ತಾ.ಪಂ. ಸದಸ್ಯೆ ಸಬಿತಾ ಚನ್ನಕೇಶವ, ಗ್ರಾ.ಪಂ. ಉಪಾಧ್ಯಕ್ಷೆ ಶೋಭ, ಸದಸ್ಯ ಕೆ.ಪಿ. ದಿನೇಶ್, ಪ್ರಬಾರ ಪ್ರಾಂಶುಪಾಲ ಹೆಚ್.ಕೆ. ಉಮೇಶ್, ಮುಖ್ಯ ಶಿಕ್ಷಕ ಎಂ.ಎಂ. ಯಶವಂತ್ ಇದ್ದರು.
ಐಗೂರು ಆಟೋ ಚಾಲಕರ ಸಂಘ: ಐಗೂರು ಆಟೋ ಚಾಲಕರ ಸಂಘದ ವತಿಯಿಂದ ಸ್ವಾತಂತ್ರೋತ್ಸವ ಆಚರಿಸಲಾಯಿತು. ದಿನಾಚರಣೆ ಪ್ರಯುಕ್ತ ಗ್ರಾಮದ ಮುಖ್ಯ ರಸ್ತೆಯಲ್ಲಿ ಆಟೋಗಳ ಜಾಥಾ ನಡೆಯಿತು. ನಿಲ್ದಾಣದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಸಂಘದ ಅಧ್ಯಕ್ಷ ಅಪ್ಪು, ತಾ.ಪಂ. ಸದಸ್ಯೆ ಸಬಿತಾ, ಮಾಜೀ ಸದಸ್ಯ ಪೊನ್ನಪ್ಪ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಟಿ.ಆರ್. ವಿಜಯ್, ಸಂಘದ ಪದಾಧಿಕಾರಿಗಳಾದ ಸಂತೋಷ್, ರವಿ, ಚಂದ್ರ, ಅವಿಲಾಶ್ ಸೇರಿದಂತೆ ಮತ್ತಿತರರು ಇದ್ದರು.
ಕಸಾಪ-ಪತ್ರಕರ್ತರ ಸಂಘ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಪತ್ರಕರ್ತರ ಸಂಘದ ವತಿಯಿಂದ ಇಲ್ಲಿನ ಕಸಾಪ ಕಚೇರಿ ಮುಂಭಾಗ ಪರಿಷತ್ ಅಧ್ಯಕ್ಷ ಜವರ ಅವರು ಧ್ವಜಾರೋಹಣ ನೆರವೇರಿಸಿದರು. ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ. ಲೋಕೇಶ್, ಸದಸ್ಯರಾದ ಎಸ್.ಎ. ಮುರುಳಿಧರ್, ಕವನ್ ಕಾರ್ಯಪ್ಪ, ಬಿ.ಎ. ಭಾಸ್ಕರ್, ಕಸಾಪ ಸದಸ್ಯರಾದ ಕೆ.ಎ. ಆದಂ, ಶರ್ಮಿಳಾ ರಮೇಶ್, ನಳಿನಿ ಗಣೇಶ್, ಮಲ್ಲಪ್ಪ, ನಾಗರಾಜ್, ಕಾಂಗ್ರೆಸ್ ಮುಖಂಡ ಪೂಣಚ್ಚ, ವಿಜೇತ್ ಸೇರಿದಂತೆ ಇತರರು ಇದ್ದರು.
ಆಟೋ ಚಾಲಕರ ಸಂಘ: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಸದಸ್ಯರು ಸ್ವಾತಂತ್ರೋತ್ಸವ ಆಚರಿಸಿದರು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಧ್ವಜಾರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ಗಂಗಾಧರ್, ಉಪಾಧ್ಯಕ್ಷ ಮಂಜುನಾಥ್, ಖಜಾಂಚಿ ಬೇಟು ಸೇರಿದಂತೆ ಇತರರು ಇದ್ದರು.
ಮಸಗೋಡು ಶಾಲೆಯಲ್ಲಿ: ಸಮೀಪದ ಮಸಗೋಡು ಚನ್ನಮ್ಮ ಶಾಲೆಯಲ್ಲಿ 70ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ನರಸಯ್ಯ ಅವರು ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ ಗಾಯನ ನಡೆಯಿತು. ದಿನದ ಮಹತ್ವದ ಬಗ್ಗೆ ಸಹಶಿಕ್ಷಕಿ ಕೆ.ಪಿ. ಸುಜಾತ ವಿಜಯ್ ಮಾತನಾಡಿದರು. ಪ್ರಬಾರ ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿ, ಸಹ ಶಿಕ್ಷಕಿ ಸತ್ಯಭಾಮ ವಂದಿಸಿದರು. ಜಯಮ್ಮ ನಿರೂಪಿಸಿದರು.
ಸಿದ್ಧಿ ವಿನಾಯಕ ಸಂಘ: ಇಲ್ಲಿನ ಓಂ ಶ್ರೀ ಸಿದ್ಧಿ ವಿನಾಯಕ ಸಂಘದ ವತಿಯಿಂದ ನಗರದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಧ್ವಜಾರೋಹಣ ನೆರವೇರಿಸಲಾಯಿತು. ಸಂಘದ ಅಧ್ಯಕ್ಷ ಎಸ್. ಅಯ್ಯಪ್ಪ, ಲಿಂಗರಾಜು, ಮಾಜಿ ಸೈನಿಕರಾದ ರಮೇಶ್, ಗಂಗಾಧರ್, ಚಂದ್ರಪ್ಪ, ಲೆಕ್ಕಪರಿಶೋಧಕ ದೇವೇಂದ್ರಪ್ಪ, ಸಂಘದ ಕಾರ್ಯದರ್ಶಿ ರಾಜು ಉಪಸ್ಥಿತರಿದ್ದರು. ಸಂಘದ ವತಿಯಿಂದ ತೋಳೂರುಶೆಟ್ಟಳ್ಳಿಯ ವಿಕಲಚೇತನ ಮಹೇಶ್ ಅವರಿಗೆ ಧನಸಹಾಯ ನೀಡಲಾಯಿತು.
ಹಣ್ಣು-ಹಂಪಲು ವಿತರಣೆ: ಕೊಡಗು ಜಿಲ್ಲಾ ಅಂಗವಿಕಲರ, ಅಂಧರ, ಬುದ್ಧಿಮಾಂಧ್ಯರ, ಅಬಲರ ಶ್ರೇಯೋಭಿವೃದ್ಧಿ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು. ಅಧ್ಯಕ್ಷ ಕೆ.ವೈ. ಇಂದ್ರೇಶ್, ಕಾರ್ಯದರ್ಶಿ ಕಾಳಯ್ಯ, ಖಜಾಂಚಿ ಭಗವಾನ್, ನಿರ್ದೇಶಕ ಫ್ರಾನ್ಸಿಸ್ ಡಿಸೋಜ ಅವರುಗಳು ಭಾಗವಹಿಸಿದ್ದರು.
ಕ್ಯಾತೆ ಗ್ರಾಮ: ತಾಲೂಕಿನ ಕೊಡ್ಲಿಪೇಟೆ ಸಮೀಪದ ಕ್ಯಾತೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನಂತರ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಯತೀಶ್, ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ, ಸದಸ್ಯ ಕೇಶವ, ಷಣ್ಮುಗಯ್ಯ, ದಾನಿಗಳಾದ ಶಿವಗಣೇಶ್, ಕೆ.ಎಂ. ಗಣೇಶ್, ಪ್ರಮುಖರಾದ ವಾಸು, ಅರಣ್ಯ ಇಲಾಖಾ ಸಿಬ್ಬಂದಿಗಳು, ಶಾಲಾ ಶಿಕ್ಷಕ ವೃಂದ, ಪೋಷಕರು ಭಾಗವಹಿಸಿದ್ದರು.
ಸವಿತಾ ಸಮಾಜ: ಇಲ್ಲಿನ ಸವಿತಾ ಸಮಾಜದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ವೆಂಕಟೇಶ್ ಅವರು ಧ್ವಜಾರೋಹಣ ನೆರವೇರಿಸಿದರು. ತಾಲೂಕು ಅಧ್ಯಕ್ಷ ರಾಜು, ದಲಿತ ಸಂಗಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಜಯಪ್ಪ ಹಾನಗಲ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಕಾಗಡಿಕಟ್ಟೆ ಮಸೀದಿ: ಕಾಗಡಿಕಟ್ಟೆಯ ದಾರುಲ್ ಉಲೂಂ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ದಿವಾಕರ್, ಸದಸ್ಯ ಶಿವಣ್ಣ, ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಧರ್ಮಗುರು ಹಾರಿಸ್ ಸಖಾಫಿ, ಪ್ರಮುಖರಾದ ಖಾಲಿದ್, ಖಾದರ್, ಎಸ್‍ವೈಎಸ್‍ನ ಅಧ್ಯಕ್ಷ ಇಬ್ರಾಹಿಂ ಸೇರಿದಂತೆ ಇತರರು ಭಾಗವಹಿಸಿದ್ದರು.
ದೊಡ್ಡಕೊಡ್ಲಿ ಶಾಲೆ: ತಾಲೂಕಿನ ದೊಡ್ಡಕೊಡ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಎಸ್‍ಎಇಎಂಸಿ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷೆ ತಾಬುನ್ನೀಸಾ, ಸಿಆರ್‍ಪಿಗಳಾದ ಸುರೇಶ್, ಮಧುಕುಮಾರ್, ಕರವೇ ಘಟಕದ ಹೇಮಂತ್, ನಾಗೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಶಿಕ್ಷಕವೃಂದ, ಪೋಷಕರು, ಸಾರ್ವಜನಿಕರು ಭಾಗವಹಿಸಿದ್ದರು.ಸುಂಟಿಕೊಪ್ಪ: ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷ ಸಂದಿದ್ದರೂ ಯಶಸ್ಸು-ವೈಫಲ್ಯ ಎರಡನ್ನೂ ಕಾಣಬಹುದಾಗಿದೆ. ಪ್ರತಿಯೊಬ್ಬರ ಕಠಿಣ ಪರಿಶ್ರಮವಿದ್ದರೆ ಶಕ್ತಿಶಾಲಿ ಭಾರತವನ್ನು ಕಟ್ಟಬಹುದು ಎಂಬ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಹೇಳಿದರು.
ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸುಂಟಿಕೊಪ್ಪ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಆಚರಿಸಲಾದ 70ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಕೆ.ಕೆ. ಪುಷ್ಪಾ ದಿನದ ಬಗ್ಗೆ ಮಾತನಾಡಿದರು.
ಸುಂಟಿಕೊಪ್ಪ ಗಾಮ ಪಂಚಾಯ್ತಿ ಅಧ್ಯಕ್ಷರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಧ್ವಜಾರೋಹಣ ನೆರವೇರಿಸಿ ಶುಭಾಶಯ ಕೋರಿದರು. ತಾಲೂಕು ಪಂಚಾಯ್ತಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ನಿವೃತ್ತ ಯೋಧ ಶೇಖರ್ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಂದಾಯ ಇಲಾಖೆಯ ಪ್ರಬಾರ ಉಪತಹಶೀಲ್ದಾರ್ ಚಂದ್ರಶೇಖರಯ್ಯ, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಾಗಭೂಷಣ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಣ್ಣ, ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಸದಸ್ಯರುಗಳಾದ ಎ.ಶ್ರೀಧರ್, ಹೇಮಂತ್, ಕೆ.ಇ. ಕರೀಂ, ಸಿ. ಚಂದ್ರ, ರಜಾಕ್, ಬಿ.ಎಂ. ಸುರೇಶ್ (ಪುಟ್ಟ), ವಳ್ಳಿ, ಶೋಭಾ ರವಿ, ಪಟ್ಟೆಮನೆ ಗಿರಿಜಾ ಉದಯ, ಶಿವಮ್ಮ ಮಹೇಶ್, ಜ್ಯೋತಿ ಭಾಸ್ಕರ್, ರತ್ನಾ ಜಯನ್, ಮಾಜಿ ಅಧ್ಯಕ್ಷ ಎಂ.ಎ. ಉಸ್ಮಾನ್À ಪಂಚಾಯಿತಿ ಸಿಬ್ಬಂದಿಗಳು, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಾರ್ಯದರ್ಶಿ ರಾಜುರೈ, ಖಜಾಂಚಿ ಡಿ. ನರಸಿಂಹ, ಸಹಕಾರ್ಯದರ್ಶಿ ನಾಗರತ್ನ, ಸಂಘಟನಾ ಕಾರ್ಯದರ್ಶಿ ವಿ.ಎ. ಸಂತೋಷ್ ಹಾಗೂ ಪದಾಧಿಕಾರಿಗಳು ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷ ಪದಾಧಿಕಾರಿಗಳು ಸ್ತ್ರೀಶಕ್ತಿ ಸಂಘದ ಮಹಿಳೆಯರು, ವಿವಿಧ ಶಾಲಾ-ಕಾಲೇಜುಗಳ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಉಪಸ್ಥಿತರಿದ್ದರು. ಪೊಲೀಸ್ ಇಲಾಖೆಯ ವತಿಯಿಂದ ಧ್ವಜಾವಂದನೆ, ವಿವಿಧ ಶಾಲಾ ಮಕ್ಕಳಿಂದ ಪಥಸಂಚಲನ ನಡೆಸಿಯಿತು.
ಸರಕಾರಿ ಪ್ರೌಢಶಾಲೆಯ ಟಿ.ಜಿ. ಪ್ರೇಮ್‍ಕುಮಾರ್ ಸ್ವಾಗತಿಸಿ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ನಿರ್ವಹಿಸಿ, ಸುಂಟಿಕೊಪ್ಪ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಉಪಾಧ್ಯಕ್ಷೆ ಲೀಲಾ ಮೇದಪ್ಪ ವಂದಿಸಿದರು.
v ಕಂಬಿಬಾಣೆ ಗ್ರಾಮ ಪಂಚಾಯಿತಿಯಲ್ಲಿ 70ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ. ಕೃಷ್ಣ ಧ್ವಜಾರೋಹಣ ನೇರವೇರಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್, ಸದಸ್ಯರುಗಳಾದ ಎಂ. ಮಂಜುಳ, ಅಪ್ಸ, ಪಂಚಾಯಿತಿ ಕಾರ್ಯದರ್ಶಿ ರಾಜನ್, ಪಂಚಾಯಿತಿ ಸಿಬ್ಬಂದಿಗಳು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.
v ಇಲ್ಲಿಗೆ ಸಮೀಪದ ಬೊಯಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಲ್ಪಿಂಗ್ ಹ್ಯಾಂಡ್ ಅಸೋಸಿಯೇಶನ್ ಸಂಯುಕ್ತ ಆಶ್ರಯದಲ್ಲಿ 70ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮೆರವಣಿಗೆ ನಡೆಸಿದ ನಂತರ ನಡೆದ ಸಮಾರಂಭದಲ್ಲಿ ನಿವೃತ್ತ ಸೈನಿಕ ನಂಜಪರವಂಡ ಉತ್ತಪ್ಪ ಮತ್ತು ಸಾಯಿ ಹಾಸ್ಟೇಲ್‍ನ ದೈಹಿಕ ಶಿಕ್ಷಕ ಪ್ರಾಣೇಶ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.
v ಮಾರುಕಟ್ಟೆಯ ತಲೆಹೊರೆ ಕಾರ್ಮಿಕ ಸಂಘದ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಚಾರಣೆಯ ಧ್ವಜಾರೋಹಣವನ್ನು ಸುಂಟಿಕೊಪ್ಪ ಅಧ್ಯಕ್ಷ ರೋಸ್‍ಮೇರಿ ರಾಡ್ರಿಗಸ್, ಜಿ.ಪಂ. ಸದಸ್ಯ ಪಿ.ಎಂ. ಲತೀಫ್, ತಾ.ಪಂ. ಸದಸ್ಯೆ ವಿಮಲಾವತಿ ನೇರವೇರಿಸಿದರು ದಿನದ ಮಹತ್ವದ ಕುರಿತು ಕಾಂಗ್ರೆಸ್ ಹಿರಿಯ ಮುಖಂಡ ಎಂ.ಎ. ವಸಂತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಲೆಹೊರೆ ಕಾರ್ಮಿಕ ಸಂಘದ ಅಧ್ಯಕ್ಷ ಮುತ್ತಯ್ಯ, ಪಂಚಾಯಿತಿ ಸದಸ್ಯರು, ಸಂಘದ ಪದಾಧಿಕಾರಿಗಳು ಇದ್ದರು.
ಸಂತ ಅಂತೋಣಿ ಶಾಲೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಸಿ. ಶಾಶ್ವತ್ ಬೋಪಣ್ಣ ಧ್ವಜಾರೋಹಣ ನೇರವೇರಿಸಿ ದಿನದ ಮಹತ್ವದ ಕುರಿತು ಮಕ್ಕಳಿಗೆ ಹಿತನುಡಿಗಳನ್ನಾಡಿದರು. ಈ ಸಂದರ್ಭ ಲಯನ್ಸ್ ಕಾರ್ಯದರ್ಶಿ ಗ್ಲೇನ್ ಮೇನೆಜೆಸ್, ಲಯನೆಸ್ ಅಧ್ಯಕ್ಷೆ ಕನ್ನಿಕಾ ಬೋಪಣ್ಣ, ಕಾರ್ಯದರ್ಶಿ ಟೀನಾ ಗೋವಿಯಸ್, ಸದಸ್ಯರಾದ ಎಂ.ಕೆ. ಪೆಮ್ಮಯ್ಯ, ಕೆ.ಪಿ. ಜಗನ್ನಾಥ್, ಎನ್.ಡಿ. ರಾಜೇಶ್, ಎಸ್.ಜಿ. ಶ್ರೀನಿವಾಸ್, ಶಾಲಾ ಮುಖ್ಯೋಪಾಧ್ಯಾಯಿನಿ ಜೈನ್ ಕ್ರಾಸ್ತಾ, ಸಹ ಶಿಕ್ಷಕರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜೆಫ್ರಿ ಜಾನ್ ಮತ್ತಿತರರು ಉಪಸ್ಥಿತರಿದ್ದರು.
ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವೈ.ಎಂ. ಕರುಂಬಯ್ಯ ಧ್ವಜಾರೋಹಣ ನೇರವೇರಿಸಿದರು. ಈ ಸಂದರ್ಭ ಕಾಲೇಜು ಪ್ರಬಾರ ಪ್ರಾಂಶುಪಾಲ ಸೋಮಚಂದ್ರ, ಉಪನ್ಯಾಸಕರು ಆಡಳಿತ ಮಂಡಳಿ ಸದಸ್ಯರು ವಿದ್ಯಾರ್ಥಿಗಳು ಇದ್ದರು. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ 70ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸುಂಟಿಕೊಪ್ಪ ಠಾಣಾಧಿಕಾರಿ ಅನುಪ್ ಮಾದಪ್ಪ ಧ್ವಜಾರೋಹಣ ನಡೆಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು. ಈ ಸಂದರ್ಭ ಪೊಲೀಸ್ ಸಿಬ್ಬಂದಿಗಳಿಂದ ಧ್ವಜಾ ವಂದನೆ ಕವಾಯತ್ ನಡೆಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಪ್ರಾಣೇಶ್ ಧ್ವಜಾರೋಹಣ ನೇರವೇರಿಸಿದರು. ಈ ಸಂದರ್ಭ ಸಿಬ್ಬಂದಿಗಳು ಉಪಸ್ಥಿತರಿದ್ದರು.
v ಇಲ್ಲಿಗೆ ಸಮೀಪದ ಬಾಳೆಕಾಡು ತೋಟದಲ್ಲಿ 70ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.
ಬಾಳೆಕಾಡು ತೋಟದ ವ್ಯವಸ್ಥಾಪಕ ಪ್ರಸನ್ನ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಈ ಸಂದರ್ಭ ಧರ್ಮಸ್ಥಳ ಸ್ವಸಹಾಯ ಸಂಘ, ಆದಿ ಶಕ್ತಿ ಸ್ತ್ರೀ ಶಕ್ತಿ ಸಂಘ, ಚಾಮುಂಡೇಶ್ವರಿ ಸಂಘ, ಸ್ವಾತಿ, ಸರಸ್ವತಿ ಮುಂತಾದ ಸ್ತ್ರೀ ಶಕ್ತಿ ಸಹಕಾರ ಸಂಘಗಳು, ತೋಟದ ಕಾರ್ಮಿಕರು ಉಪಸ್ಥಿತರಿದ್ದರು.ಸ್ವಾತಂತ್ರೋತ್ಸವದ ಅಂಗವಾಗಿ ಅನ್ನದಾನ ನಡೆಯಿತು.
ಸೋಮವಾರಪೇಟೆ: ಇಲ್ಲಿಗೆ ಸಮೀಪ ಬೇಳೂರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ 70ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪುಷ್ಪಗಿರಿ ಜೆಸಿಐ ಸೋಮವಾರಪೇಟೆ ವತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಸಂಸ್ಥೆಯ ಉಪಾಧ್ಯಕ್ಷ ಮನೋಹರ್ ವಹಿಸಿದ್ದು, ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಜ್ಯೋತಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಾಂತಳ್ಳಿ: ತಾಲೂಕಿನ ಶಾಂತಳ್ಳಿ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಧ್ವಜಾರೋಹಣ ನೆರವೇರಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕೆ.ಟಿ. ರಾಜಶೇಖರ್, ರಾಜೇಶ್, ಕೃಷ್ಣಪ್ಪ, ಪ್ರತಾಪ್, ಪ್ರಾಂಶುಪಾಲ ಎಂ.ಎಸ್. ಶಿವಮೂರ್ತಿ, ಉಪನ್ಯಾಸಕರಾದ ಸುರೇಶ್, ದೇವರ ಬೈಯಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಐಗೂರು ಗ್ರಾ.ಪಂ.: ಸಮೀಪದ ಐಗೂರು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಕೆ.ಪಿ. ರಾಯ್ ಧ್ವಜಾರೋಹಣ ನೆರವೇರಿಸಿದರು. ಸದಸ್ಯರುಗಳು ಉಪಸ್ಥಿತರಿದ್ದರು.ಮೂರ್ನಾಡು : ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಉಚಿತ ನೇತ್ರ ಹಾಗೂ ದಂತ ತಪಾಸಣೆ ಶಿಬಿರ ನಡೆಯಿತು. ಇಲ್ಲಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾದ ಶಿಬಿರವನ್ನು ಮೂರ್ನಾಡು ಪಶು ವೈದ್ಯ ಡಾ. ಪ್ರಸನ್ನ ಉದ್ಘಾಟಿಸಿದರು. ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರೇಖಾ ಮಹದೇವಪ್ಪ ಬಕರೆ, ಸ್ವಾಮಿ ಕ್ಲಿನಿಕ್ ವೈದ್ಯ ಗೌರು ಸ್ವಾಮಿ, ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಬುಟ್ಟಂಡ ಸುನೀಲ್, ಉಪಾಧ್ಯಕ್ಷ ಟಿ.ಎ. ಮಣಿ, ಕಾರ್ಯದರ್ಶಿ ಬಿ. ಅಶ್ವತ್ ರೈ, ಖಜಾಂಚಿ ಪಿ.ಎ. ಅಬೂಬಕ್ಕರ್, ಗೌರವಾಧ್ಯಕ್ಷ ಕುಂಞÂರಾಮ ಹಾಗೂ ಸದಸ್ಯರು ಹಾಜರಿದ್ದರು. ಮೂರ್ನಾಡು ದಂತ ವೈದ್ಯರಾದ ಡಾ. ನಿಧಿ ಹಾಗೂ ಪಾಲಿಬೆಟ್ಟ ನೇತ್ರ ತಜ್ಞ ಡಾ. ವಿಕ್ರಮ್ ತಪಾಸಣೆ ನಡೆಸಿದರು. ಶಿಬಿರದಲ್ಲಿ 65 ಮಂದಿ ನೇತ್ರ ಹಾಗೂ 25 ಮಂದಿಯ ದಂತ ತಪಾಸಣೆ ನಡೆಸಲಾಯಿತು.