ವೀರಾಜಪೇಟೆ, ಜು. 16: ಕೊಡಗಿನ ಪೂರ್ವಿಕರಿಂದ ಪರಂಪರೆಂiÀi ಕೊಡುಗೆಯಾಗಿ ಬಂದಂತಹ ಕೆಸರು ಗದ್ದೆ ಕ್ರೀಡಾಕೂಟವನ್ನು ಸಂಘ ಸಂಸ್ಥೆಗಳು ನಶಿಸಿ ಹೋಗದಂತೆ ಪುನ:ಶ್ಚೇತನ ಗೊಳಿಸಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಇದಕ್ಕೆ ಆದ್ಯತೆ ನೀಡಬೇಕು ಎಂದು ಜಾತ್ಯತೀತ ಜನತಾ ದಳದ ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ಕಡಂಗದ ಎವರ್ ಗ್ರೀನ್ ಸಂಸ್ಥೆಯಿಂದ ಅರಮೇರಿ ಗ್ರಾಮದ ನಾಲ್ಕನೇ ಮೈಲ್‍ನ ಪೂಳಂಡ ಗಂಗಮ್ಮ ಅವರಿಗೆ ಸೇರಿದ ಗದ್ದೆಯಲ್ಲಿ ಹಮ್ಮಿಕೊಂಡಿದ್ದ ಎರಡನೇ ವರ್ಷದ ಜಿಲ್ಲಾ ಮಟ್ಟದ ಕೆಸರು ಗದ್ದೆ ಕ್ರೀಡಾ ಕೂಟವನ್ನು ಕಾಲ್ಚೆಂಡು ಒದೆಯುವದರ ಮೂಲಕ ಉದ್ಘಾಟಿಸಿದ ಸಂಕೇತ್ ಪೂವಯ್ಯ ಅವರು, ಪೂರ್ವಿಕರು ಜೂನ್, ಜುಲೈ ತಿಂಗಳಲ್ಲಿ ಸುರಿಯುತ್ತಿದ್ದ ಭಾರೀ ಮಳೆಯ ನಡುವೆ ನಾಟಿಗೆ ಮೊದಲೇ ಕೆಸರು ಗದ್ದೆ ಕ್ರೀಡಾ ಕೂಟವನ್ನು ಆಯೋಜಿಸುತ್ತಿದ್ದರು. ಇದರಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಕಿರಿಯರಿಂದ ಹಿರಿಯರ ವರೆಗೆ ಪಾಲ್ಗೊಂಡು ಮನರಂಜನೆ ಯೊಂದಿಗೆ ಶಾಂತಿ ನೆಮ್ಮದಿ ದೊರೆಯುತ್ತಿತ್ತು. ಮಳೆಗಾಲದ ಇಂತಹ ವಿಶೇಷ ರೀತಿಯ ಕ್ರೀಡಾ ಕೂಟವನ್ನು ಕೊಡಗಿನ ಸಂಘ ಸಂಸ್ಥೆಗಳು ಜಾತಿ, ಧರ್ಮ ರಹಿತವಾಗಿ ಪರಸ್ಪರ ಸಹಕಾರ ದಿಂದ ಶಾಶ್ವತವಾಗಿ ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಈ ಹಿಂದೆ ನಾಟಿ ಸಮಯದಲ್ಲಿ ಮುಯ್ಯಾಳು ಪದ್ಧತಿಯ ವ್ಯವಸ್ಥೆಯಿಂದ ಗದ್ದೆ ನಾಟಿಯು ಸುಗಮವಾಗಿ ನಡೆಯುತ್ತಿತ್ತು ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ತಾಲೂಕು ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್ ಮಾತನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಿದರೆ ಗ್ರಾಮಾಂತರ ಪ್ರದೇಶಗಳಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಉತ್ತೇಜನ ನೀಡಬಹುದು ಎಂದು ಹೇಳಿದರು.

ಸಮಾರಂಭದಲ್ಲಿ ಅತಿಥಿಗಳಾಗಿ ಅರಮೇರಿ ಕಾಫಿ ಬೆಳೆಗಾರ ಪೂಳಂಡ ಗಂಗಮ್ಮ, ವಕೀಲ ಪೂಳಂಡ ವಿನು, ಕದನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎನ್.ಎನ್.ಶೋಭಾ, ಕಾಕೋಟು ಪರಂಬು ಪಂಚಾಯಿತಿ ಸದಸ್ಯ ಪಿ.ಎಂ.ಅಬ್ದುಲ್ಲಾ, ಪಿ.ಎ. ಅಂತೋಣಿ, ಎನ್ ಗಣಪತಿ, ಪಿ.ರಾಜಾ, ಬಲಮುರಿಯ ಮುಕ್ಕಾಟೀರ ತಮ್ಮಯ್ಯ, ಸಿ.ಇ. ಸುಭೇರ್, ಎವರ್ ಗ್ರೀನ್ ಕಾಫಿ ಸಂಸ್ಥೆಯ ಕೆ.ಇ. ಉಸ್ಮಾನ್, ಕ್ರೀಡಾ ಸಂಸ್ಥೆಯ ಅಧ್ಯಕ್ಷ ಕರೀಂ, ಕಾಂiÀರ್iದರ್ಶಿ ಜುನೈದ್ ಇತರ ಪದಾಧಿಕಾರಿಗಳು ಹಾಜರಿದ್ದರು.