ಮಡಿಕೇರಿ, ಸೆ. 8: ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಭ್ರಷ್ಟಾಚಾರ ನಿಗ್ರಹಾಧಿಕಾರಿಯಾಗಿ ಕೊಡಗಿನ ಮಾಚಿಮಂಡ ಕುಮಾರ್ ಅಪ್ಪಚ್ಚು ಅವರನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆ ನೇಮಿಸಿದೆ. ತಾ. 16ರಿಂದ ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಜರುಗಲಿರುವ ಪಂದ್ಯಾವಳಿಯಲ್ಲಿ ಕುಮಾರ್ ಅಪ್ಪಚ್ಚು ಅವರು ಭ್ರಷ್ಟಾಚಾರ ನಿಗ್ರಹಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲೆಯ ಹಿರಿಯ ಕ್ರೀಡಾ ತಜ್ಞರಾಗಿರುವ ಅಮ್ಮತ್ತಿಯ ಮಾಚಿಮಂಡ ಕುಮಾರ್ ಅಪ್ಪಚ್ಚು ಅವರು ಈ ಹಿಂದೆ ಕೊಡಗು ಹಾಕಿ ಸಂಸ್ಥೆಯ (ಸಿ.ಎಚ್.ಎ.) ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಕೊಡಗು ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.