ಕೂಡಿಗೆ, ಆ 1: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಮುಖ್ಯನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಮದಲಾಪುರ, ಸೀಗೆಹೊಸೂರು, ಸೋಮವಾರಪೇಟೆಗೆ ತೆರಳುವ ಮುಖ್ಯ ಸೇತುವೆಯು ಇದೀಗ ಬಿರುಕುಗೊಂಡು ಕುಸಿಯುವ ಹಂತ ತಲುಪಿದೆ. ಹಾರಂಗಿ ಮುಖ್ಯ ನಾಲೆಯಲ್ಲಿ ನಿರ್ಮಿಸಿರುವ ಈ ಸೇತುವೆಯ ಮೂಲಕ 10 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರವಾಗಿದೆ.

ಸೋಮವಾರಪೇಟೆಗೆ ತೆರಳಲು ಸೀಗೆಹೊಸೂರು, ಯಲಕನೂರು ಮಾರ್ಗ ಹತ್ತಿರದ ಮಾರ್ಗ ಆಗಿದ್ದು, ಈ ಮಾರ್ಗದಲ್ಲಿ ದಿನಂಪ್ರತಿ ನೂರಾರು ವಾಹನಗಳು ಚಲಿಸುವ ಮುಖ್ಯ ಸೇತುವೆ ಇದಾಗಿದೆ. ಇದೀಗ ಸೇತುವೆಯ ಅಡಿಭಾಗದಲ್ಲಿ ಬಿರುಕಿನ ಜೊತೆಗೆ ಸೇತುವೆಯ ಎಡ ಮತ್ತು ಬಲಭಾಗದ ತಡೆಗೋಡೆಗಳು ಕೂಡ ದುರಸ್ತಿಗೊಂಡಿದ್ದು, ವಾಹನ ಚಾಲನೆಯ ಸಂದರ್ಭ ಆಯ ತಪ್ಪಿದರೆ ತುಂಬಿ ಹರಿಯುವ ನಾಲೆಗೆ ಬೀಳುವದಂತೂ ಖಚಿತ.ಈ ವ್ಯಾಪ್ತಿಯ ನೂರಾರು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ತುರ್ತಾಗಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಈ ಹತ್ತಾರು ಗ್ರಾಮಗಳ ಸಂಪರ್ಕವೇ ಕಡಿತಗೊಂಡಂತಾಗುತ್ತದೆ ಎಂದು ಸ್ಥಳೀಯ ಮುಖಂಡರುಗಳಾದ ಅಣ್ಣಯ್ಯ, ಮಂಜುನಾಥ್, ಕೆ.ಟಿ.ಈರಯ್ಯ, ಗಣೇಶ್ ತಿಳಿಸಿದ್ದಾರೆ.

-ಕೆ.ಕೆ.ನಾಗರಾಜಶೆಟ್ಟಿ