ಮಡಿಕೇರಿ, ಜ. 23 : ಕೊಡಗು ಜಿಲ್ಲಾ ಮುಸ್ಲಿಂ ಸ್ಪೋಟ್ರ್ಸ್ ಅಸೋಸಿಯೇಷನ್ ವತಿಯಿಂದ 14ನೇ ವರ್ಷದ ಕೊಡಗು ಜಿಲ್ಲಾ ಮಟ್ಟದ ಗ್ರಾಮಾಂತರ ಮುಸ್ಲಿಂ ಕ್ರಿಕೆಟ್ ಕಪ್ ಪಂದ್ಯಾವಳಿ ಏಪ್ರಿಲ್ ತಿಂಗಳಿನಲ್ಲಿ ಕುಶಾಲನಗರದಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‍ನ ಕಾರ್ಯದರ್ಶಿ ಎಂ.ಎಸ್.ಸೈಫ್‍ಆಲಿ ಕುಶಾಲನಗರದ ತಾಜ್ ಕ್ರಿಕೆಟರ್ಸ್‍ನ ಜಂಟಿ ಆಶ್ರಯದಲ್ಲಿ ಈ ಬಾರಿಯ ಪಂದ್ಯಾವಳಿ ನಡೆಯಲಿದೆ ಎಂದರು. ಕಳೆದ ಸಾಲಿನ ಪಂದ್ಯಾವಳಿಯಲ್ಲಿ 130 ತಂಡಗಳು ಭಾಗವಹಿಸಿದ್ದು, ಈ ಬಾರಿ ಸುಮಾರು 170ಕ್ಕೂ ಅಧಿಕ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಪಂದ್ಯಾವಳಿಯ ಆಯೋಜನೆಗಾಗಿ ಇಲ್ಲಿಯವರೆಗೆ ಸರಕಾರದಿಂದ ಯಾವದೇ ಅನುದಾನ ಲಭ್ಯವಾಗಿಲ್ಲ. ಈ ಬಾರಿ ಸರಕಾರದ ಅನುದಾನ ದೊರೆಯುವ ವಿಶ್ವಾಸವಿದ್ದು, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಎಂ.ಎಸ್. ಸೈಫ್‍ಆಲಿ ಮನವಿ ಮಾಡಿದರು.

ಸುದ್ದಿಗೋaಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಖಾದರ್, ಗೌರವಾಧ್ಯಕ್ಷ ಅಬ್ದುಲ್ ರಶೀದ್, ಸದಸ್ಯ ಕೆ.ಪಿ.ಖಾದರ್, ತಾಜ್ ಕ್ರಿಕೆಟರ್ಸ್‍ನ ಪ್ರಧಾನ ಕಾರ್ಯದರ್ಶಿ ಹಲೀಂ ಹಾಗೂ ಕಾರ್ಯದರ್ಶಿ ಆದಂ ಉಪಸ್ಥಿತರಿ ದ್ದರು. ಇದೇ ಸಂದರ್ಭ ಮುಸ್ಲಿಂ ಸ್ಪೋಟ್ರ್ಸ್ ಅಸೋಸಿಯೇಷನ್ ಪ್ರಮುಖರು ತಾಜ್ ಕ್ರಿಕೆಟರ್ಸ್ ತಂಡಕ್ಕೆ ಪಂದ್ಯಾವಳಿಯ ಧ್ವಜವನ್ನು ಹಸ್ತಾಂತರಿಸಿದರು. ಅಲ್ಲದೆ ಸ್ಟಿಕರ್‍ನ್ನು ಕೂಡ ಬಿಡುಗಡೆ ಗೊಳಿಸಿದರು.