ಕುಶಾಲನಗರ, ಜ. 17: ಕೊಫುಕಾನ್ ಶಿಟೊರಿಯಾ ಕರಾಟೆ ಶಾಲೆ ಆಶ್ರಯದಲ್ಲಿ 4ನೇ ಕೊಫುಕಾನ್ ರಾಜ್ಯ ಮತ್ತು ಅಂತರ ರಾಜ್ಯ ಕರಾಟೆ ಚಾಂಪಿಯನ್ಶಿಪ್ ಪಂದ್ಯಾವಳಿ ಕುಶಾಲನಗರದಲ್ಲಿ ನಡೆಯಿತು.
ಸ್ಥಳೀಯ ರೈತ ಸಹಕಾರ ಭವನದಲ್ಲಿ ನಡೆದ ಪಂದ್ಯಾವಳಿಗೆ ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಹೆಚ್.ವಿ. ಶಿವಪ್ಪ ಚಾಲನೆ ನೀಡಿದರು. ಪಂದ್ಯಾವಳಿಯಲ್ಲಿ ರಾಜ್ಯದ 5 ಜಿಲ್ಲೆಗಳನ್ನೊಳಗೊಂಡಂತೆ ದೆಹಲಿ, ಉತ್ತರಪ್ರದೇಶ, ತಮಿಳುನಾಡು ರಾಜ್ಯಗಳಿಂದ ಸುಮಾರು 400 ಕ್ಕೂ ಅಧಿಕ ಕರಾಟೆ ಪಟುಗಳು ಪಾಲ್ಗೊಂಡಿದ್ದರು.ಮುಖ್ಯ ಅತಿಥಿಗಳಾಗಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್, ಕೊಡಗರಹಳ್ಳಿ ಶಾಂತಿನಿಕೇತನ ಶಾಲಾ ಪ್ರಾಂಶುಪಾಲೆ ಮೇರಿ ಫಾತಿಮ, ಉದ್ಯಮಿ ಹೆಚ್.ಎಂ. ಹನೀಫ್ ಪಾಲ್ಗೊಂಡಿದ್ದರು. ಪಂದ್ಯಾವಳಿಯ ತೀರ್ಪುಗಾರರಾಗಿ ರೆನ್ಶಿ ಕುಮಾರಸ್ವಾಮಿ, ಆರ್. ಸೆನ್ಸಿ ಪ್ರಕಾಶ್ ಕುಮಾರ್, ಜೋಸ್ಮೋನ್ ಬೇಬಿ, ಕೆ.ಕೆ. ಭರತ್, ಬಿ.ಎಂ. ಮುಖೇಶ್, ಬಾಲಗಣೇಶ್ ಕಾರ್ಯ ನಿರ್ವಹಿಸಿದರು.
ಈ ಸಂದರ್ಭ ಪಂದ್ಯಾವಳಿಯ ಮುಖ್ಯ ಆಯೋಜಕರಾದ ಎ.ಎಂ. ಮಹಮ್ಮದ್ ಇಕ್ಬಾಲ್, ನರೇಶ್, ರಾಹುಲ್, ಶ್ರೇಯಸ್, ಸಿ.ಎಂ. ರವಿ, ಶಿವಕುಮಾರ್, ಶ್ರೀಕಂಠ, ಅಖಿಲ್ ಆಂಟನಿ, ಬಿ.ಎಲ್. ರಮೇಶ್, ಡಿ. ಆಶಿಕಾ, ತೇಜಸ್ವಿನಿ, ಕುಮುದಾ ಇದ್ದರು.