ಕುಶಾಲನಗರ, ಆ. 31: ಕುಶಾಲನಗರ ಕೊಡವ ಸಮಾಜದ 2016-18ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಮಂಡೇಪಂಡ ಬೋಸ್ ಮೊಣ್ಣಪ್ಪ ಆಯ್ಕೆ ಆಗಿದ್ದಾರೆ. ಕಾರ್ಯದರ್ಶಿಯಾಗಿ ಪುಲಿಯಂಡ ಚಂಗಪ್ಪ, ಜಂಟಿ ಕಾರ್ಯದರ್ಶಿಯಾಗಿ ಪಾಲಚಂಡ ವಿಜು, ಖಜಾಂಚಿಯಾಗಿ ಗೌಡಂಡ ಗಣೇಶ್ ದೇವಯ್ಯ ಅವರು ಆಯ್ಕೆಗೊಂಡಿದ್ದಾರೆ.

ಸಂಘದ ಸಭಾಂಗಣದಲ್ಲಿ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಮಂಡೇಪಂಡ ಬೋಸ್ ಮೊಣ್ಣಪ್ಪ ಅವರು ಕರ್ನಂಡ ಮೊಣ್ಣಪ್ಪ (ಅರುಣ) ವಿರುದ್ಧ ಜಯಗಳಿಸಿದ್ದಾರೆ. ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೌಡಂಡ ಗಣೇಶ್ ದೇವಯ್ಯ ಅವರು ತಮ್ಮ ಪ್ರತಿಸ್ಪರ್ಧಿ ಬಾಚರಣಿಯಂಡ ರಾಣು ಅಪ್ಪಣ್ಣ ಅವರ ವಿರುದ್ಧ ಜಯಗಳಿಸಿದ್ದಾರೆ.

ಮಹಿಳಾ ಕ್ಷೇತ್ರದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಳಂಗೇಟಿರ ಟಿಟ್ಟಿ ಸೋಮಣ್ಣ, ಹಂಚೆಟ್ಟಿರ ವಾಣಿ ಮುತ್ತಣ್ಣ, ಕೈಬುಲಿರ ಪುಷ್ಪಾ ತಮ್ಮಯ್ಯ ಹಾಗೂ ಬೊಪ್ಪಂಡ ಕನ್ನಿಕೆ, 1ನೇ ವಾರ್ಡ್‍ನಿಂದ ಚೌರೀರ ತಿಮ್ಮಯ್ಯ, ಹಾರಂಗಿ ಕ್ಷೇತ್ರದಿಂದ ಉಡುವೆರ ಹ್ಯಾರಿ ಚಿಟ್ಟಿಯಪ್ಪ ಅವರು ಜಯಗಳಿಸಿದ್ದಾರೆ. ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿ ಸೇರಿದಂತೆ ಉಳಿದ ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದು ಮುಳ್ಳುಸೋಗೆಯಿಂದ ಕೇಕಡ ಸೋಮಣ್ಣ, ನಂಜರಾಯ ಪಟ್ಟಣದಿಂದ ಸೋಮೆಯಂಡ ಉದಯ, ಸುಂಟಿಕೊಪ್ಪದಿಂದ ಮುಂಡಂಡ ದಯಾನಂದ, ನೆಲ್ಲಿಹುದಿಕೇರಿಯಿಂದ ಪಾಲಿಚಂಡ ಜಾಲಿ, ಕೊಪ್ಪದಿಂದ ಪಳಂಗೇಟಿರ ದಿಲೀಪ್, ಕೂಡಿಗೆಯಿಂದ ಕೋಡಿಮಣಿಯಂಡ ಕುಮಾರ್, ಬಲ್ಯಾಟಂಡ ಗಪ್ಪು ಗಣಪತಿ, ಮುಕ್ಕಾಟಿರ ಪೊನ್ನಣ್ಣ, ಎಳ್ತಂಡ ಮೀನಾಕ್ಷಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

2014 ರಲ್ಲಿ ನಡೆದ ಚುನಾವಣೆಯ ಸಂದರ್ಭ ಉಂಟಾದ ಗೊಂದಲ ಕಾರಣ ಉಪಾಧ್ಯಕ್ಷರ ಸ್ಥಾನಕ್ಕೆ ನ್ಯಾಯಾಲಯದಿಂದ ತಡಯಾಜ್ಞೆ ಹಿನ್ನೆಲೆ ಈ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ ಹಾಗೂ ಕಾರಣಾಂತರಗಳಿಂದ 4ನೇ ಬ್ಲಾಕ್‍ನ ಎರಡು ನಿರ್ದೇಶಕರ ಸ್ಥಾನಕ್ಕೆ ಚುನಾವಣೆಯನ್ನು ಮುಂದೂಡಲಾಗಿದೆ.

ಸಂಘದ ಹಿರಿಯ ಸದಸ್ಯರುಗಳಾದ ಬಲ್ಲಾರಂಡ ಜಾಲಿ ತಮ್ಮಯ್ಯ, ಕೇಕಡ ಪೂವಯ್ಯ, ಅಯಲಪಂಡ ಮಂದಣ್ಣ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.