ವೀರಾಜಪೇಟೆ, ಅ. 2: ಸಚಿವ ಜಾರ್ಜ್ ಹಾಗೂ ಐ.ಪಿ.ಎಸ್ ಅಧಿಕಾರಿಗಳ ಕಿರುಕುಳದಿಂದ ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಗಣಪತಿ ಅವರ ಕುಟುಂಬಕ್ಕೆ ನ್ಯಾಯಾಂಗದಿಂದಲೇ ರಕ್ಷಣೆ ಸಾಧ್ಯ. ಶ್ರೀಸಾಮಾನ್ಯ ಹಾಗೂ ನಾಗರಿಕರ ಹಕ್ಕುಗಳನ್ನು ಕಾಪಾಡಲು ನ್ಯಾಯಾಂಗ ಆದ್ಯತೆಯನ್ನು ಕಲ್ಪಿಸಿದೆ ಎಂದು ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.

ಮೃತ ಗಣಪತಿಯ ಪುತ್ರ ನೇಹಾಲ್ ಕುಶಾಲನಗರದಲ್ಲಿ ಪೊಲೀಸ್ ಠಾಣೆಗೆ ತನ್ನ ತಂದೆಯ ಸಾವಿನ ಕುರಿತು ದೂರು ನೀಡಿದಾಗ ಸರಕಾರದ ಪ್ರಭಾವಿಗಳ ಒತ್ತಡದ ಮೇರೆ ಪೊಲೀಸರು ಎಫ್ ಐ.ಆರ್ ದಾಖಲಿಸಲು ನಿರಾಕರಿಸಿದರು. ಅದೇ ದೂರನ್ನು ಮಡಿಕೇರಿಯ ಪ್ರಿನ್ಸಿಫಲ್ ಮುನ್ಸಿಫ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯ ಎತ್ತಿ ಹಿಡಿದು ಸಚಿವರು ಸೇರಿದಂತೆ ಇಬ್ಬರು ಐ.ಪಿ.ಎಸ್.ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಯಿತು. ಸಚಿವ ಜಾರ್ಜ್ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸುವ ನಿರ್ಧಾರ ಕೈಗೊಂಡಿದ್ದರೂ ಇಬ್ಬರು ಐ.ಪಿ.ಎಸ್. ಅಧಿಕಾರಿಗಳು ಎಫ್‍ಐಆರ್‍ನ್ನು ರದ್ದು ಪಡಿಸುವಂತೆ ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿರುವದು ನಿಜಾಂಶವನ್ನು ಮರೆ ಮಾಚಲು ಪರೋಕ್ಷ ಪ್ರಯತ್ನ ನಡೆಯುತ್ತಿದೆ ಎಂದು ಭಾಸವಾಗುತ್ತದೆ. ಪೊಲೀಸ್ ಅಧಿಕಾರಿಗಳ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿ ಆನಂದಭೈರಾರೆಡ್ಡಿ ಅವರು” ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲನೇ ಆರೋಪಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ತನಿಖೆಗೆ ಸಹಕರಿಸುತ್ತಿರುವಾಗ ತಾವು ನಿರ್ದೋಷಿಗಳು ಎಂದು ಹೇಳುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ಏಕೆ ಎಂದು ಭಯಪಟ್ಟು ಎಫ್‍ಐಆರ್ ರದ್ದು ಕೋರಿ ಅರ್ಜಿ ವೀರಾಜಪೇಟೆ, ಅ. 2: ಸಚಿವ ಜಾರ್ಜ್ ಹಾಗೂ ಐ.ಪಿ.ಎಸ್ ಅಧಿಕಾರಿಗಳ ಕಿರುಕುಳದಿಂದ ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಗಣಪತಿ ಅವರ ಕುಟುಂಬಕ್ಕೆ ನ್ಯಾಯಾಂಗದಿಂದಲೇ ರಕ್ಷಣೆ ಸಾಧ್ಯ. ಶ್ರೀಸಾಮಾನ್ಯ ಹಾಗೂ ನಾಗರಿಕರ ಹಕ್ಕುಗಳನ್ನು ಕಾಪಾಡಲು ನ್ಯಾಯಾಂಗ ಆದ್ಯತೆಯನ್ನು ಕಲ್ಪಿಸಿದೆ ಎಂದು ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.

ಮೃತ ಗಣಪತಿಯ ಪುತ್ರ ನೇಹಾಲ್ ಕುಶಾಲನಗರದಲ್ಲಿ ಪೊಲೀಸ್ ಠಾಣೆಗೆ ತನ್ನ ತಂದೆಯ ಸಾವಿನ ಕುರಿತು ದೂರು ನೀಡಿದಾಗ ಸರಕಾರದ ಪ್ರಭಾವಿಗಳ ಒತ್ತಡದ ಮೇರೆ ಪೊಲೀಸರು ಎಫ್ ಐ.ಆರ್ ದಾಖಲಿಸಲು ನಿರಾಕರಿಸಿದರು. ಅದೇ ದೂರನ್ನು ಮಡಿಕೇರಿಯ ಪ್ರಿನ್ಸಿಫಲ್ ಮುನ್ಸಿಫ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯ ಎತ್ತಿ ಹಿಡಿದು ಸಚಿವರು ಸೇರಿದಂತೆ ಇಬ್ಬರು ಐ.ಪಿ.ಎಸ್.ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಯಿತು. ಸಚಿವ ಜಾರ್ಜ್ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸುವ ನಿರ್ಧಾರ ಕೈಗೊಂಡಿದ್ದರೂ ಇಬ್ಬರು ಐ.ಪಿ.ಎಸ್. ಅಧಿಕಾರಿಗಳು ಎಫ್‍ಐಆರ್‍ನ್ನು ರದ್ದು ಪಡಿಸುವಂತೆ ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿರುವದು ನಿಜಾಂಶವನ್ನು ಮರೆ ಮಾಚಲು ಪರೋಕ್ಷ ಪ್ರಯತ್ನ ನಡೆಯುತ್ತಿದೆ ಎಂದು ಭಾಸವಾಗುತ್ತದೆ. ಪೊಲೀಸ್ ಅಧಿಕಾರಿಗಳ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿ ಆನಂದಭೈರಾರೆಡ್ಡಿ ಅವರು” ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲನೇ ಆರೋಪಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ತನಿಖೆಗೆ ಸಹಕರಿಸುತ್ತಿರುವಾಗ ತಾವು ನಿರ್ದೋಷಿಗಳು ಎಂದು ಹೇಳುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ಏಕೆ ಎಂದು ಭಯಪಟ್ಟು ಎಫ್‍ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ” ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಈ ಪ್ರಕರಣದಲ್ಲಿ ಸರಕಾರದ ನಿಲುವು ಸೂಚಿಸುವಂತೆ ನ್ಯಾಯಾಲಯ ಸೂಚಿಸಿದೆ ಎಂದು ಸಂಕೇತ್ ಪೂವಯ್ಯ ತಿಳಿಸಿದ್ದಾರೆ. ಪ್ರಕರಣದ ದೂರುದಾರರಿಗೆ ಸರಕಾರ ತಪ್ಪು ತಿಳುವಳಿಕೆ ನೀಡುತ್ತಿದುದ್ದನ್ನು ನ್ಯಾಯಾಂಗ ಸರಿಪಡಿಸಿದೆ. ಸರಕಾರ ಉಷ್ಣ ಪಕ್ಷಿಯಂತೆ ತನ್ನ ತಲೆಯನ್ನು ಮಣ್ಣಿನೊಳಗೆ ಬಚ್ಚಿಟ್ಟು ಕೊಳ್ಳಲು ಸಾಧ್ಯವಿಲ್ಲ. ನ್ಯಾಯಾಂಗದ ಮೂಲಕ ಸತ್ಯಾಂಶ ಹೊರ ಬರಲೇಬೇಕು. ಮೃತ ಗಣಪತಿ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವ ತನಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಶಾಂತಿಯುತ ಹೋರಾಟ ಮುಂದುವರೆಯಲಿದೆ ಎಂದು ಸಂಕೇತ್ ಪೂವಯ್ಯ ತಿಳಿಸಿದ್ದಾರೆ.