ಗುಡ್ಡೆಹೊಸೂರು, ಜೂ. 18: ಇಲ್ಲಿಗೆ ಸಮೀಪದ ಹೊಸಪಟ್ಟಣ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಮುತ್ತಪ್ಪ ದೇವಸ್ಥಾನದ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮ ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆಯಿತು.
ವಿವಿಧ ಪೂಜಾ ಕಾರ್ಯಗಳನ್ನು ಕಗ್ಗೋಡ್ಲು ರಾಮಚಂದ್ರನ್‍ಭಟ್ ಮತ್ತು ಅವರ ತಂಡದ ಸದಸ್ಯರು ನಡೆಸಿಕೊಟ್ಟರು. 101 ಕಲಶ ಹೊತ್ತ ಸುಮಂಗಲಿಯರು ಗಂಗಾಪೂಜೆ ಸಲ್ಲಿಸಿ ಸಮೀಪದ ಕಾವೇರಿ ನದಿಯಿಂದ ದೇವಸ್ಥಾನಕ್ಕೆ ತಂದರು.
ಕರ್ಕಾಟಕ ಲಗ್ನದಲ್ಲಿ ಮುತ್ತಪ್ಪ ದೈವ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಮಹಾಪೂಜೆ ನಡೆಯಿತು. ಕೇರಳದ ಪರಸಿನಿಕ್ಕಡವಿನ ತಂಡದಿಂದ ಪ್ರಥಮ ಪಯಂಗುತ್ತಿ ಸಮರ್ಪಣೆ ಮಾಡಲಾಯಿತು. ಎರಡು ದಿನಗಳ ಕಾಲ ಅನ್ನಸಂತರ್ಪಣೆ ನಡೆಸಲಾಯಿತು.
ಇದೇ ಸಂದರ್ಭ ಶಶಿ ಪರವೂರ್ ಮತ್ತು ಸಂಗಡಿಗರಿಂದ ಶ್ರೀ ಮುತ್ತಪ್ಪ ಕೋಲ ನಡೆಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ದೇವಸ್ಥಾನ ಸಮಿತಿಯ ಅಧ್ಯಕ್ಷ ಲೋಕನಾಥ್, ಕಾರ್ಯದರ್ಶಿ ಪ್ರೇಮಾನಂದ ಹಾಗೂ ಸಮಿತಿಯ ಸದಸ್ಯರು ಹಾಜರಿದ್ದರು.
- ಗಣೇಶ್ ಕುಡೆಕಲ್.